‘ವಿಳಾಸ: ತಿಹಾರ್ ಜೈಲು, ಕೆಲಸ: ಕೊ*ಲೆ!’ ಖತರ್ನಾಕ್ ಗ್ಯಾಂಗ್‌ಸ್ಟರ್ ನಸೀಮ್ ದುರಾನಿ ಕಥೆ ಅಂತ್ಯ!
ಚೋಟಾ ರಾಜನ್‌ನನ್ನೇ ಜೈಲಿನೊಳಗೆ ಮುಗಿಸಲು ಸ್ಕೆಚ್ ಹಾಕಿದ್ದ ಗ್ಯಾಂಗ್‌ಸ್ಟರ್ ಈಗ ಎನ್‌ಕೌಂಟರ್‌ನಲ್ಲಿ ಸಾ*ವು!
ಸೋಷಿಯಲ್ ಮೀಡಿಯಾದಲ್ಲಿ ತನ್ನ ಕ್ರಿಮಿನಲ್ ಹಿನ್ನೆಲೆಯನ್ನೇ ಹೆಮ್ಮೆಯಿಂದ ಪ್ರದರ್ಶಿಸಿಕೊಂಡಿದ್ದ ವ್ಯಕ್ತಿ ಆತ. ತನ್ನ ಇನ್‌ಸ್ಟಾಗ್ರಾಮ್ ಬಯೋದಲ್ಲಿ ‘ಹೆಸರು: ಬದ್ನಾಮ್, ವಿಳಾಸ: ತಿಹಾರ್ ಜೈಲು, ವಯಸ್ಸು: ಬದುಕುವವರೆಗೆ, ಕೆಲಸ: ಕೊ*ಲೆ’ ಎಂದು ಬರೆದುಕೊಂಡಿದ್ದ. ಇಂತಹ ಕುಖ್ಯಾತ ಗ್ಯಾಂಗ್‌ಸ್ಟರ್ ನಸೀಮ್ ದುರಾನಿ ಇದೀಗ ಉತ್ತರ ಪ್ರದೇಶದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ.
ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದ ನಸೀಮ್ ದುರಾನಿ, ಭೂಗತ ಜಗತ್ತಿನ ಡಿ-ಕಂಪನಿಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲ, ಭೂಗತ ಪಾತಕಿ ಚೋಟಾ ಶಕೀಲ್ ಜೊತೆಗೂ ನಂಟು ಹೊಂದಿದ್ದ ಎಂಬ ಆರೋಪವಿತ್ತು.
ಚೋಟಾ ರಾಜನ್ ಹತ್ಯೆಗೂ ಹಾಕಿದ್ದ ಸ್ಕೆಚ್!
2016-17ರ ಅವಧಿಯಲ್ಲಿ ತಿಹಾರ್ ಜೈಲಿನಲ್ಲಿದ್ದ ಮತ್ತೊಬ್ಬ ಕುಖ್ಯಾತ ಗ್ಯಾಂಗ್‌ಸ್ಟರ್ ಚೋಟಾ ರಾಜನ್‌ನನ್ನು ಹತ್ಯೆ ಮಾಡುವ ಜವಾಬ್ದಾರಿಯನ್ನು ಚೋಟಾ ಶಕೀಲ್ ನಸೀಮ್ ದುರಾನಿಗೆ ವಹಿಸಿದ್ದ ಎನ್ನಲಾಗಿದೆ. ಅಲ್ಲದೆ, ಪಾಕಿಸ್ತಾನ ಮೂಲದ ಕೆನಡಾದ ಪತ್ರಕರ್ತ ತಾರೇಕ್ ಫತಾಹ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪವೂ ಈತನ ಮೇಲಿತ್ತು.
ನಸೀಮ್ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
ದೆಹಲಿ ಸಚಿವರ ಕಚೇರಿ ಬಳಿ ನಡೆದಿದ್ದ ಭೀಕರ ಕೊಲೆ!
ನವೆಂಬರ್ 16ರಂದು ಈತನ ಹೆಸರು ಮತ್ತೊಮ್ಮೆ ಸುದ್ದಿಯಲ್ಲಿತ್ತು. ದೆಹಲಿಯ ಕಾನೂನು ಸಚಿವ ಕಪಿಲ್ ಮಿಶ್ರಾ ಅವರ ಕ್ಯಾಂಪ್ ಕಚೇರಿ ಸಮೀಪ 26 ವರ್ಷದ ಸಮೀರ್ ಎಂಬ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಸಮೀರ್ ಮೇಲೆ ಸುಮಾರು 16ರಿಂದ 20 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ನಸೀಮ್ ದುರಾನಿ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಗ್ಯಾಂಗ್‌ಗಳ ನಡುವಿನ ವೈಷಮ್ಯವೇ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿತ್ತು.
ಪೊಲೀಸರ ಕಾರ್ಯಾಚರಣೆಯಲ್ಲಿ ಅಂತ್ಯವಾದ ಗ್ಯಾಂಗ್‌ಸ್ಟರ್ ಕಥೆ!
ಸಮೀರ್ ಹತ್ಯೆ ಪ್ರಕರಣದ ಬಳಿಕ ನಸೀಮ್‌ಗಾಗಿ ಪೊಲೀಸರು ಬಲೆ ಬೀಸಿದ್ದರು. ಆತನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಮತ್ತು ನೋಯ್ಡಾ ವಿಶೇಷ ಕಾರ್ಯಪಡೆ (STF), ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದವು.
ಪೊಲೀಸರ ಮಾಹಿತಿ ಪ್ರಕಾರ, ಸಿಕಂದರಾ ಬೈಪಾಸ್ ಬಳಿ ಆತನನ್ನು ಪತ್ತೆಹಚ್ಚಿ ಬಂಧಿಸಲು ಮುಂದಾದಾಗ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಸೀಮ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ಪ್ರತಿದಾಳಿ ನಡೆಸಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಸ್ಥಳದಲ್ಲಿ ಎರಡು ಪಿಸ್ತೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ, ತನ್ನ ಕ್ರಿಮಿನಲ್ ಸಾಮ್ರಾಜ್ಯದ ಬಗ್ಗೆ ಬಹಿರಂಗವಾಗಿಯೇ ಹೆಮ್ಮೆಪಡುತ್ತಿದ್ದ, ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ನಸೀಮ್ ದುರಾನಿಯ ಅಪರಾಧದ ಓಟಕ್ಕೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ತೆರೆ ಬಿದ್ದಿದೆ.