ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಇಳಿದ ನೀರು, ಕೃಷಿ ಹಾಗೂ ಕುಡಿಯುವ ನೀರಿನ ಚಿಂತೆ ಶುರು!

ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಇಳಿದ ನೀರು, ಕೃಷಿ ಹಾಗೂ ಕುಡಿಯುವ ನೀರಿನ ಚಿಂತೆ ಶುರು!

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದೆ. ಕೆ.ಆರ್.ಸಾಗರ, ತುಂಗಭದ್ರಾ ಹಾಗೂ ಆಲಮಟ್ಟಿ ಡ್ಯಾಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಬೇಸಿಗೆಗಾಗಿ ನೀರನ್ನು ಎಚ್ಚರಿಕೆಯಿಂದ ಬಳಸುವ ಅನಿವಾರ್ಯತೆ ಎದುರಾಗಿದೆ.

ಕರ್ನಾಟಕದ ಹಲವು ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹವು ವಿವಿಧ ಮಟ್ಟದಲ್ಲಿದೆ. ಸಾರ್ವಜನಿಕರಿಗೆ ಮತ್ತು ರೈತರಿಗೆ ಈ ಕುರಿತು ಸರಿಯಾದ ಮಾಹಿತಿ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ

ಕಾವೇರಿ ಬೇಸಿನ್ ಜಲಾಶಯಗಳು- ಕೆ.ಆರ್.ಸಾಗರ ಅಣೆಕಟ್ಟು: ಪ್ರಸ್ತುತ ನೀರಿನ ತುಂಬಿರುವಿಕೆ ಶೇ. 42.53 ರಷ್ಟಿದ್ದು, ಪ್ರಸ್ತುತ ಮಟ್ಟ 2441.66 ಅಡಿಯಲ್ಲಿದೆ. ಒಟ್ಟು 49.452 ಟಿಎಂಸಿ ಸಾಮಥ್ರ್ಯವಿರುವ ಈ ಜಲಾಶಯದಲ್ಲಿ ಈಗ 21.032 ಟಿಎಂಸಿ ನೀರು ಸಂಗ್ರಹವಿದೆ.

ಹಾರಂಗಿ ಅಣೆಕಟ್ಟು: ಶೇ. 52.16 ರಷ್ಟು ತುಂಬಿದ್ದು, ಪ್ರಸ್ತುತ ಮಟ್ಟ 2842.58 ಅಡಿಯಿದೆ. ಇಲ್ಲಿ ಒಟ್ಟು 8.500 ಟಿಎಂಸಿ ಸಾಮಥ್ರ್ಯಕ್ಕೆ 4.434 ಟಿಎಂಸಿ ನೀರು ಲಭ್ಯವಿದೆ.ಹೇಮಾವತಿ ಅಣೆಕಟ್ಟು: ಶೇ. 49.52 ರಷ್ಟು ಅಂದರೆ 18.376 ಟಿಎಂಸಿ ನೀರು ಸಂಗ್ರಹಗೊಂಡಿದೆ.

ಉತ್ತರ ಕರ್ನಾಟಕ ಮತ್ತು ಇತರ ಪ್ರಮುಖ ಜಲಾಶಯಗಳು- ಆಲಮಟ್ಟಿ ಅಣೆಕಟ್ಟು: ಅತ್ಯಂತ ಪ್ರಮುಖವಾದ ಈ ಡ್ಯಾಮ್‍ನಲ್ಲಿ ನೀರಿನ ಮಟ್ಟ ಶೇ. 43.38 ಕ್ಕೆ ಕುಸಿದಿದ್ದು, 53.400 ಟಿಎಂಸಿ ನೀರು ಲಭ್ಯವಿದೆ.

ತುಂಗಭದ್ರಾ ಅಣೆಕಟ್ಟು: ಇಲ್ಲಿ ಶೇ. 25.37 ರಷ್ಟು ಮಾತ್ರ ನೀರಿದ್ದು (26.843 ಟಿಎಂಸಿ), ಹೊರಹರಿವು (8533ಕ್ಯೂಸೆಕ್) ಹೆಚ್ಚಾಗಿರುವುದು ಗಮನಾರ್ಹ.ಭದ್ರಾ ಹಾಗೂ ಹಿಡ್ಕಲ್ ಅಣೆಕಟ್ಟುಗಳು: ಕ್ರಮವಾಗಿ ಶೇ. 76.85 ಮತ್ತು ಶೇ. 82.47 ರಷ್ಟು ಉತ್ತಮ ನೀರಿನ ಸಂಗ್ರಹವನ್ನು ಹೊಂದಿದ್ದು, ಸಮಾಧಾನಕರ ಸ್ಥಿತಿಯಲ್ಲಿವೆ. ಮಲಪ್ರಭಾ ಅಣೆಕಟ್ಟು ಶೇ. 48.53 ರಷ್ಟು ತುಂಬಿದೆ.

ರಾಜ್ಯದ ಒಟ್ಟಾರೆ ಜಲಾಶಯಗಳ ಸ್ಥಿತಿಯನ್ನು ಗಮನಿಸಿದರೆ, ಕೆಲವು ಅಣೆಕಟ್ಟುಗಳಲ್ಲಿ ಉತ್ತಮ ನೀರಿದ್ದರೂ, ಇನ್ನು ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಿದೆ.

ಇದು ಮುಂಬರುವ ದಿನಗಳಲ್ಲಿ ನೀರಿನ ನಿರ್ವಹಣೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಸೂಚಿಸುತ್ತದೆ. ರೈತರು ಮತ್ತು ಸಾರ್ವಜನಿಕರು ಪ್ರತಿದಿನದ ನೀರಿನ ಮಟ್ಟದ ಬದಲಾವಣೆಗಳ ಮೇಲೆ ಕಣ್ಣಿಡುವುದು ಸೂಕ್ತ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದು, ಕಾವೇರಿ ಮತ್ತು ತುಂಗಭದ್ರಾ ಕೊಳ್ಳದ ಡ್ಯಾಂಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಬೇಸಿಗೆಗಾಗಿ ನೀರನ್ನು ಎಚ್ಚರಿಕೆಯಿಂದ ಬಳಸುವ ಅನಿವಾರ್ಯತೆ ಎದುರಾಗಿದೆ.ಒಟ್ಟಾರೆಯಾಗಿ ಬಹುತೇಕ ಜಲಾಶಯಗಳಿಗೆ ಒಳಹರಿವು ನಿಂತುಹೋಗಿದ್ದು, ಇರುವ ನೀರನ್ನೇ ಮುಂದಿನ ಬೇಸಿಗೆಯವರೆಗೆ ಅತ್ಯಂತ ಎಚ್ಚರಿಕೆಯಿಂದ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಗಳಾಗಿದ್ದು, ನವೆಂಬರ್ 14ರ ವರದಿಯ ಪ್ರಕಾರ 97.96 ಅಡಿಗೆ ಕುಸಿದಿದೆ. 49.45 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 21.25 ಟಿಎಂಸಿ ನೀರು ಮಾತ್ರ ಉಳಿದಿದೆ

ತಮಿಳುನಾಡಿಗೆ ನೀರು ಬಿಡುಗಡೆ ಅನಿವಾರ್ಯ!
ನವೆಂಬರ್ 7ರಿಂದ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ದೇಶನ ನೀಡಿರುವುದಾಗಿ ವರದಿಯಾಗಿದೆ. ಇದರಿಂದ ರಾಜ್ಯದ ನೀರಿನ ಸಂಗ್ರಹ ನಿರ್ವಹಣೆಗೆ ಮತ್ತಷ್ಟು ಸವಾಲು ಎದುರಾಗಿದೆ.

ಮಂಡ್ಯ, ಮೈಸೂರು, ಹಾಸನ ಸೇರಿದಂತೆ ಕಾವೇರಿ ಕೊಳ್ಳದ ಹಲವು ಪ್ರದೇಶಗಳಲ್ಲಿ ಭತ್ತ, ಕಬ್ಬು ಹಾಗೂ ಇತರ ಬೆಳೆಗಳಿಗೆ ಜಲಾಶಯಗಳ ನೀರೇ ಆಧಾರವಾಗಿದೆ.

ಮುಂದಿನ ದಿನಗಳಲ್ಲಿ ಕಾಲುವೆಗಳಿಗೆ ನೀರು ಹರಿಸುವ ಪ್ರಮಾಣ ಕಡಿಮೆಯಾದರೆ ಬೆಳೆಗಳು ಒಣಗುವ ಸಾಧ್ಯತೆಯಿದೆ. ಈಗಾಗಲೇ ಬೆಳೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಬಹುದು. ಬೇಸಿಗೆ ಬೆಳೆ ಬೆಳೆಯುವ ರೈತರಿಗೂ ನೀರಿನ ಲಭ್ಯತೆ ದೊಡ್ಡ ಪ್ರಶ್ನೆಯಾಗಲಿದೆ.

ಸರ್ಕಾರದ ಮುಂದಿದೆ ದೊಡ್ಡ ಸವಾಲು!
ಮುಂದಿನ ಮುಂಗಾರು ಆರಂಭವಾಗುವವರೆಗೆ ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಕುಡಿಯುವ ನೀರಿಗೆ ಆದ್ಯತೆ ನೀಡುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗದಂತೆ ನೀರಿನ ಹಂಚಿಕೆ ಮಾಡಬೇಕಿದೆ.

Leave a Reply

Your email address will not be published. Required fields are marked *