No Ads

Yuva Review: ಇಂಡಸ್ಟ್ರಿಗೆ ಯುವರಾಜನ ಎಂಟ್ರಿ, ಸಿನಿಮಾ ನಿಜಕ್ಕೂ ಚೆನಾಗಿದ್ಯಾ!?

ಮನರಂಜನೆ 2024-03-29 17:31:59 6579
post

ಚಂದನವನಕ್ಕೆ ಯುವ ರಾಜನ ಆಗಮನ ಆಗಿದೆ, ದೊಡ್ಮನೆಯ ಕುಡಿ ಯುವ ರಾಜ್ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ ಬಹು ನಿರೀಕ್ಷಿತ ಯುವ ಸಿನಿಮಾ ಇವತ್ತು ರಿಲೀಸ್ ಆಗಿದೆ. ಒಬ್ಬ debut ಹೀರೋ ಸಿನಿಮಾಗೆ ಇತ್ತೀಚಿನ ವರ್ಷಗಳಲ್ಲಿ ಇಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿಯಾಗಿದ್ದು ಕಡಿಮೆ ಅಂತಾನೇ ಹೇಳಬಹುದು. ಈ ಥರದ ಬೆಳವಣಿಗೆ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಆಶಾದಾಯಕ ಬೆಳವಣಿಗೆ. At this point We  need more films that make good business at the box office, ಸೋ ಆ ನಿಟ್ಟಿನಲ್ಲಿ ಇಂಥ ಕ್ರೇಜ್ ಕನ್ನಡ ಸಿನಿಮಾಗೆ ಒಳ್ಳೇದು. ದೊಡ್ಮನೆ ಅಭಿಮಾನಿಗಳಿಗಂತು ಈ ಸಿನಿಮಾ ಹಬ್ಬ. Anyways ಸಧ್ಯಕ್ಕೆ Straight ಆಗಿ ಯುವ ಸಿನಿಮಾ ಹೇಗಿದೆ ಅಂತ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ ಬನ್ನಿ. ಸ್ನೇಹಿತರೇ, ನಿಮಗೆಲ್ಲ ಗೊತ್ತಿರೋ ಹಾಗೆ ಯುವ ಟ್ರೈಲರ್ ನಲ್ಲಿ ಸಂತೋಷ್ ಆನಂದ್ ರಾಮ್ ಅವರ ಹಳೆಯ ಸಿನಿಮಾಗಳ ಛಾಯೆ ಇದ್ದದ್ದು ಸತ್ಯ, ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಸಿನಿಮಾದಲ್ಲಿ ಬೇರೇನೇ ಹೊಸ ಕಥೆ ಇದೆ, ಟ್ರೈಲರ್ ನಲ್ಲಿ ಇಲ್ಲದ additional elements ಕೂಡ ಇದೆ, ಇದು ಈ ಸಿನಿಮಾದ ಮೊದಲ ಧನಾತ್ಮಕ ಅಂಶ. ಆದ್ರೆ ಒಂದಿಡೀ ಸಿನಿಮಾ ಆಗಿ ಯುವ ಚಿತ್ರ ಎಂಗೇಜಿಂಗ್ ಆಗಿದ್ಯಾ ಅಂತ ಪ್ರಶ್ನೆ ಮಾಡಿದ್ರೆ its debatable ಅನ್ನೋ ಉತ್ತರವನ್ನು ಕೊಡಬಹುದು. ಇನ್ನು ಸ್ನೇಹಿತರೇ, ಯುವ ಅವ್ರ ಪರ್ಫಾರ್ಮೆನ್ಸ್ ಬಗ್ಗೆ ಹೇಳಬೇಕು ಅಂದ್ರೆ as a raging angry young man ಅವರು ಚೆನ್ನಾಗಿ ಪರ್ಫಾಮ್ ಮಾಡಿದ್ದಾರೆ. Especially ಸ್ಟಂಟ್ ಸೀಕ್ವೆನ್ಸ್ ಗಳ ಮೂಲಕ, ಸೈಲೆನ್ಸ್ ಮೂಲಕ, ಲುಕ್ಸ್ ಮತ್ತು swag ಮೂಲಕ ಅವರು ಫರ್ಸ್ಟ್ ಹಾಫ್ ಅಲ್ಲಿ ಇಷ್ಟ ಆಗ್ತಾರೆ. ಇಡೀ ಸಿನಿಮಾದ performance ನಲ್ಲಿ ಎಲ್ಲಾ ವಿಭಾಗಗಳಲ್ಲೂ ಅವರ ಪ್ರಾಮಾಣಿಕ ಪ್ರಯತ್ನ ಎದ್ದು ಕಾಣತ್ತೆ. ನಟನೆ, ನೃತ್ಯ, ಫೈಟ್ಸ್ ಗಳಲ್ಲಿ ಇನ್ನಷ್ಟು ಪಳಗುವ ಅವಕಾಶವಿದೆ. ಅದನ್ನ ಮುಂದಿನ ಸಿನಿಮಾಗಳಲ್ಲಿ ಅವರು ಮಾಡ್ತಾರೆ ಅನ್ನೋ ನಂಬಿಕೆ ಅಂತೂ ಈ ಸಿನಿಮಾದಿಂದ ಸೃಷ್ಟಿಯಾಗಿದೆ. ಭಾವನಾತ್ಮಕ ದೃಶ್ಯಗಳಲ್ಲಿ ಭಾವನೆಗಳ ಏರಿಳಿತಗಳನ್ನ ಇನ್ನೂ ಚೆನ್ನಾಗಿ ತೋರಿಸುವ ಚಾನ್ಸ್ ಇತ್ತು, ಆದ್ರೆ it's ok ಪರ್ವಾಗಿಲ್ಲ ಮೊದಲ್ನೇ ಸಿನಿಮಾ ಅನ್ನುವ ಕಾರಣಕ್ಕೆ ಅದನ್ನ ಇಗ್ನೋರ್ ಮಾಡಬಹುದು. ಅದು ಬಿಟ್ರೆ 2nd half ನಲ್ಲಿ ತಮ್ಮ ಇನ್ನೋಸ್ವೆನ್ಸ್ ಮೂಲಕ ಯುವ ಅಪ್ತರಾಗುತ್ತಾರೆ. ಒಟ್ನಲ್ಲಿ ಈ ಸಿನಿಮಾಗೆ ಯುವ ಅವರ ಕಡೆಯಿಂದ ಒಬ್ಬ ಫರ್ಸ್ಟ್ timer ಆಗಿ ಎಷ್ಟು ಕಾಂಟ್ರಿಬ್ಯೂಟ್ ಮಾಡಬಹುದೋ ಅದನ್ನ ಅವರು ಮಾಡಿದ್ದಾರೆ. ಚಿತ್ರದ ಫರ್ಸ್ಟ್ ಹಾಫ್ ನಲ್ಲಿ ನಾಯಕ ಯುವನ ಕ್ಯಾರೆಕ್ಟರ್ establish ಆಗತ್ತೆ. ಇದಕ್ಕೆ ಪುಷ್ಟಿ ಕೊಡುವ ರೀತಿಯಲ್ಲಿ ಕಾಲೇಜ್ ಗ್ಯಾಂಗ್ ವಾರ್, hostalite ಪ್ಲಸ್ localities ನಡುವಿನ ego clash, ಇದರ ಮಧ್ಯೆ ಒಂದು ಪ್ರೀತಿ, ಸಾಮಾನ್ಯವಾಗಿ ಕಾಲೇಜ್ ಹುಡುಗರಿಗೆ ಇರುವ ಅಪ್ಪನ ಜೊತೆಗಿನ ವೈಮನಸ್ಯ, ಈ ಎಲ್ಲ ವಿಷಯಗಳಿಗೆ ಯುವ ಹೇಗೆ ರಿಯಾಕ್ಟ್ ಮಾಡ್ತಾನೆ ಅನ್ನೋದನ್ನ ತೋರಿಸುವ ಮೂಲಕ as a person ಯುವ ಹೇಗೆ ಅನ್ನೋದನ್ನ establish ಮಾಡಿದ್ದಾರೆ. ಚಿತ್ರದ 2nd ಹಾಫ್ ನಲ್ಲಿ ಬೇಜಾಬ್ಬಾರಿಯಾಗಿದ್ದ ಕಾಲೇಜ್ ಹುಡುಗ ಯುವ ಹೇಗೆ ಕುಸಿದುಹೋದ ತನ್ನ ಕುಟುಂಬದ ಬೆನ್ನಿಗೆ ಬೆನ್ನೆಲುಬು ಆಗ್ತಾನೆ ಅನ್ನೋದನ್ನ explore ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಯುವನಿಗೆ  ಲೈಫ್ ಅಲ್ಲಿ ಅವನದ್ದೇ ಆದ ಒಂದು ಗುರಿ ಇದೆ, ಒಂದು ಪ್ಯಾಶನ್ ಇದೆ. ಅದೇ ಈ ಚಿತ್ರದ additional element ಜೊತೆಗೆ ಒಂದು ಸಸ್ಪೆನ್ಸ್ element ಕೂಡ. ಒಟ್ನಲ್ಲಿ ಯುವ ಅನ್ನುವ ಒಬ್ಬ ಕಾಮನ್ ಮ್ಯಾನ್ ತನ್ನ ಕುಟುಂಬವನ್ನು ಕಾಡುತ್ತಿರುವ ಸಮಸ್ಯೆಯನ್ನ ಹೇಗೆ ಸರಿ ಮಾಡ್ತಾನೆ? ಸಂಸಾರದ ಸುಳಿಯಲ್ಲಿ ಸಿಕ್ಕು ತನ್ನ ಪ್ಯಾಶನ್ ಅನ್ನ ಆತ ನೆಗ್ಲೆಕ್ಟ್ ಮಾಡ್ತಾನ? Finally ಯುವ ಜೀವನದಲ್ಲಿ ಗೆಲ್ತಾನ ಇಲ್ವಾ ಅನ್ನೋದೇ ಸಿನಿಮಾದ ಕಥೆ. ಇನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಒಂದು ದೊಡ್ಡ ಸಿನಿಮಾ ಕುಟುಂಬದಿಂದ ಲಾಂಚ್ ಆಗ್ತಾ ಇರುವ ನಟನ ಸಿನಿಮಾದಲ್ಲಿ ಏನೆಲ್ಲಾ ಇರಬೇಕೋ ಅದನ್ನ ಸರಿತೂಗಿಸುವ ಜವಾಬ್ದಾರಿಯನ್ನ meticulous ಆಗಿ ನಿಭಾಯಿಸುವ ಪ್ರಯತ್ನ ಅಂತೂ ಮಾಡಿದ್ದಾರೆ, ಆದ್ರೆ ಆ ಜವಾಬ್ದಾರಿಯನ್ನ ನಿಭಾಯಿಸುವ ಭರದಲ್ಲಿ ಚಿತ್ರದ ಒಟ್ಟು ಹೂರಣದಲ್ಲಿ ಅಲ್ಲಲ್ಲಿ ಕೆಲವು ಗೊಂದಲಗಳಿವೆ ಅನ್ನೋದನ್ನ ತಳ್ಳಿ ಹಾಕೊದಕ್ಕೆ ಸಾಧ್ಯ ಇಲ್ಲ. ಚಿತ್ರದಲ್ಲಿ ಹೀರೋಯಿಸಂ ಇದೆ, ಆದ್ರೆ ಹೀರೋ ನಮ್ಮೆಲ್ಲರ ಥರ ಸಾಮಾನ್ಯ ಮನುಷ್ಯ ಕೂಡ ಹೌದು, ಒಬ್ಬ youngster ಅನ್ನ ರೆಪ್ರೆಸೆಂಟ್ ಮಾಡುವ ಇವತ್ತಿನ ಯುವಕರಿಗೆ ಇರುವ ಎಲ್ಲ ಚಟಗಳು ಹೀರೋಗೆ ಇವೆ, ಆದ್ರೂ ಫ್ಯಾಮಿಲಿ ಅಂತ ಬಂದಾಗ ಅವನಲ್ಲಿ ಫ್ಯಾಮಿಲಿ values ಜಾಗೃತವಾಗತ್ತೆ, ಚಟಗಳೆಲ್ಲ ಹಿಂದೆ ಸರಿಯುತ್ತವೆ. ಚಿತ್ರದಲ್ಲಿ delivery boys ಗಳ ಮೂಲಕ ಡಿಗ್ನಿಟಿ of ಲೇಬರ್ ಮಹತ್ವವನ್ನ ಸಾರಿ ಹೇಳೋಕೆ ಹೀರೋ ಮಾಸ್ ಹೀರೋ ಕೂಡ ಆಗ್ತಾನೆ, ಹಾಗೇನೇ ಕುಟುಂಬದ ಏಳಿಗೆಗೋಸ್ಕರ ತನಗೆ ಇರುವ ಪ್ಯಾಶನ್ ಅನ್ನ ಅದುಮಿಟ್ಟುಕೊಂಡು, ತೆಗಳಿಕೆಗಳನ್ನ ರಿಸೀವ್ ಮಾಡಿಕೊಂಡು ಬದುಕೋದು ಹೇಗೆ ಅನ್ನೋ ತಾಳ್ಮೆಯ ಪಾಠವನ್ನೂ ಕೂಡ ಆತ ಮಾಡ್ತಾನೆ.  ಚಿತ್ರದಲ್ಲಿ ಲವ್ ಆಂಗಲ್ ಇದೆ, family sentiment ಕೂಡ ಇದೆ, heroic elements ಇದೆ, ಜೊತೆಗೆ ಕಥೆಗೆ ಸಂಬಂಧವೇ ಇಲ್ಲದ ಅಪ್ಪು ಅವರ ರೆಫರೆನ್ಸ್ ಕೂಡ ಚಿಕ್ಕದಾಗಿ  ಬರತ್ತೆ. ಹೀಗೆ ಸಿನಿಮಾದಲ್ಲಿ ಬೇರೆ ಬೇರೆ ಸೆಟ್ of audience ಗೆ cater ಆಗುವ ಸಾಕಷ್ಟು layers ಇದೆ. ಆದ್ರೆ ಯಾವುದೇ ಪದರವನ್ನ ಕೂಡ ಪರಿಣಾಮಕಾರಿಯಾಗಿ justify ಮಾಡಲಿಕ್ಕೆ ಆಗದಿರುವ ಸುಳಿಗೆ ಸಂತೋಷ್ ಸಿಲುಕಿಕೊಂಡಿದ್ದಾರೆ. ಯುವ ಅವರನ್ನ young angry man ಆಗಿ, bad boy ಆಗಿ, rebellion ಆಗಿ, ಒಳ್ಳೆ ಡಾನ್ಸರ್ ಆಗಿ, ಒಳ್ಳೆ ಫೈಟರ್ ಆಗಿ, delivery boy ಆಗಿ, ಕಾಮನ್ ಮ್ಯಾನ್ ಆಗಿ, boy next door ಆಗಿ, ದೊಡ್ಮನೆಯ ಕುಡಿಯಾಗಿ ಜೊತೆಗೆ ಸ್ಟಾರ್ ಆಗಿ ತೋರಿಸುವ ಎಲ್ಲ ಪ್ರಯತ್ನ ಒಂದೇ ಸಿನಿಮಾದಲ್ಲಿ ಮಾಡಿರೋದ್ರಿಂದ ಚಿತ್ರಕಥೆಯಲ್ಲಿ ಬಿಗಿ ಕಮ್ಮಿ ಆಗಿದೆ. ಗೋಪಾಲ್ ಕೃಷ್ಣ ದೇಶಪಾಂಡೆ, ಕಿಶೋರ್ ನಟಿಸಿರುವ ದೃಶ್ಯಗಳು ಚೆನ್ನಾಗಿವೆ, ಆದ್ರೆ ಆ ಪಾತ್ರಗಳ ಔಚಿತ್ಯವನ್ನ ಸರಿಯಾಗಿ ಸಮರ್ಥಿಸಿಕೊಳ್ಳಬಹುದಿತ್ತು. ಈ ಎರಡು ಪಾತ್ರಗಳ ಬರವಣಿಗೆ ಉತ್ತಮವಾಗಬಹುದಿತ್ತು. ಇನ್ನು ಸಪ್ತಮಿ ಗೌಡ ಅವರಿಗೆ perform ಮಾಡೋಕೆ ಹೆಚ್ಚು ಅವಕಾಶ ಇಲ್ಲ, ಹಾಡುಗಳಿಗೆ ಸೀಮಿತ ವಾಗಿದ್ದಾರೆ. ಕಥೆಗೆ ಅವರ ಪಾತ್ರದಿಂದ ಆಗುವ ಪರಿಣಾಮ ಬಹಳ ಕಡಿಮೆ. ಹಿತ ಚಂದ್ರಶೇಕರ್ ಮತ್ತು ಸುಧಾರಾಣಿ ಪಾತ್ರಗಳ ಬರವಣಿಗೆ ಸುಧಾರಿಸಬಹುದಿತ್ತು. ಇನ್ನು ಸಂತೋಷ್ ಅವರ ಸಂಭಾಷಣೆ ಮತ್ತು one liners are enjoyable in parts ಕೆಲವು ಕಡೆ ಪ್ರೀಚಿ ಕೂಡ ಆಗಿದೆ. ಆದ್ರೆ ಚಿತ್ರದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಮತ್ತು inspire ಮಾಡುವ ಕೆಲಸ ಈ ಸಿನಿಮಾದಲ್ಲೂ ವರ್ಕ್ ಆಗಿದೆ. ಇಷ್ಟೆಲ್ಲದರ ಮಧ್ಯೆ ತಕ್ಕ ಮಟ್ಟಿಗೆ ನಮ್ಮನ್ನ ಭಾವುಕರಾಗಿ ಮಾಡೋದು ಅಚ್ಯುತ್ ಕುಮಾರ ಅವರ ಪಾತ್ರ. ಹಲವು ಪದರಗಳ ನಡುವೆ ಸಿಲುಕಿ ನಲುಗುತ್ತಿರುವ ಕಥಾ ಹಂದರದಲ್ಲಿ ತಕ್ಕ ಮಟ್ಟಿಗೆ ಭಾವನಾತ್ಮಕ ಲೇಪನ ಸಿಗುವುದು ಈ ಪಾತ್ರದ ಮೂಲಕವೇ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ತಂದೆ ಮತ್ತು ಮಗನ ಬಾಂಧವ್ಯದ ಅನಾವರಣ ಬಹುತೇಕ ಮಧ್ಯಮ ವರ್ಗದ ಕುಟುಂಬಗಳಿಗೆ ಆಪ್ತವಾಗುವುದರಲ್ಲಿ ಅನುಮಾನವಿಲ್ಲ. ಇದೆಲ್ಲವನ್ನು ಹೊರತು ಪಡಿಸಿದರೆ ಅಜನೀಶ್ ಅವರ ಸಂಗೀತ ಮತ್ತು BGM ಚೆನ್ನಾಗಿದೆ, ಅರ್ಜುನ ಮಾಡಿರುವ ಸ್ಟಂಟ್ ಕೊರಿಯೋಗ್ರಫಿಯ staging ಚೆನ್ನಾಗಿದೆ. Dj night fight ಮತ್ತು late night outer ring road fight sequence ಗಳ styling ಅದ್ಭುತವಾಗಿದೆ, ಪ್ರೊಡಕ್ಷನ್ values top notch ಇದೆ. Cinematography, editing, color grading over all technical team ನ ಕೆಲಸಕ್ಕೆ ಫುಲ್ ಮಾರ್ಕ್ಸ್. ಒಟ್ನಲ್ಲಿ ಅಣ್ಣಾವ್ರ ಕುಟುಂಬದ ಅಭಿಮಾನಿಗಳಿಗೆ, ಚಿತ್ರದಲ್ಲಿ ಫೈಟ್ಸ್, ಸ್ಟಂಟ್ಸ್  ಇರೋ ಫ್ಯಾಮಿಲಿ values ಇರುವ ಸಿನಿಮಾ ನೋಡೋಕೆ ಇಷ್ಟ ಪಡುವ ಸಿನಿಮಾ ಪ್ರೇಮಿಗಳಿಗೆ, ಜೊತೆಗೆ ಯುವ ಅವರಲ್ಲಿ ಅಪ್ಪು ಅವರನ್ನ ಹುಡುಕುತ್ತಿರುವ ಸಿನಿಪ್ರೇಕ್ಷಕರಿಗೆ ಈ ಸಿನಿಮ ಇಷ್ಟ ಆಗತ್ತೆ, ಬೇರೆಯವರು ಒಂದು ಸಲ ನೋಡಬಹುದು. Ofcourse ಯುವ ಅವರ ಸ್ಟಂಟ್ sequences ಗಳಲ್ಲಿ ಅಪ್ಪು ಕಾಣ್ತಾರೆ, ಆದರೆ ಯುವ ಅವರಿಗೆ ಅವರದ್ದೇ ಆದ ಸ್ವಂತಿಕೆ ಕೂಡ ಇದೆ, ಅದು ಮುಂದಿನ ಸಿನಿಮಾಗಳಲ್ಲಿ ಇನ್ನಷ್ಟು ಗಟ್ಟಿಯಾಗಲಿ ಎಂದು ಆಶಿಸುತ್ತಾ ಈ ವಿಮರ್ಶೆಯನ್ನು ಮುಗಿಸುತ್ತ ಇದ್ದೇನೆ ನಮಸ್ಕಾರ. -ಸುಜಯ್ ರಾಜ್, ಫಿಲ್ಮ್ ಬ್ಯೂರೋ, ನ್ಯಾಷನಲ್ ಟಿವಿ

No Ads
No Reviews
No Ads

Popular News

No Post Categories
Sidebar Banner
Sidebar Banner