No Ads

ಅಪ್ಪುವಿನಂತೆ ಭರವಸೆ ಉಳಿಸಿಕೊಂಡ ಯುವ ರಾಜ್ ಕುಮಾರ್

ಮನರಂಜನೆ 2024-03-30 13:26:01 47
post

ಅಪ್ಪುವಿನಂತೆ ಭರವಸೆ ಉಳಿಸಿಕೊಂಡ ಯುವ ರಾಜ್ ಕುಮಾರ್; ಸಿನಿಮಾ ನೋಡಿ ಫ್ಯಾನ್ಸ್ ಕಣ್ಣೀರು! ಸ್ಯಾಂಡಲ್​ವುಡ್​ನ ಬಹುನಿರೀಕ್ಷೆಯ ‘ಯುವ’ ಸಿನಿಮಾ ರಿಲೀಸ್ ಆಗಿದೆ. ದೊಡ್ಮನೆಯ ಫ್ಯೂಚರ್ ಸ್ಟಾರ್​ ಯುವ ರಾಜ್ ಕುಮಾರ್ ನಟನೆಯ​ ಚೊಚ್ಚಲ ಸಿನಿಮಾ ಭರ್ಜರಿಯಾಗಿ ತೆರೆಗೆ ಅಪ್ಪಳಿಸಿದೆ. ಕಳೆದ ಒಂದು ವರ್ಷದಿಂದ ಯುವ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಕೊನೆಗೂ ಯುವ ಸಿನಿಮಾ ರಾಜ್ಯಾದ್ಯಂತ ಸುಮಾರು 350ಕ್ಕೂ ಹೆಚ್ಚು ಥಿಯೇಟರ್​​ಗಳಲ್ಲಿ ರಿಲೀಸ್​ ಆಗಿದೆ. ಈ ಸಿನಿಮಾವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಯುವ ರಾಜ್​ಕುಮಾರ್​ ನಟನೆ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಪ್ರೇಕ್ಷಕರು, ನಾವು ಇಟ್ಟುಕೊಂಡ ನಿರೀಕ್ಷೆಗಿಂತ ಮೀರಿ ಬಾಸ್​​ ಅನ್ನು ತೆರೆ ಮೇಲೆ ತಂದಿದ್ದಾರೆ. ಈ ಮೂವಿ ಸೂಪರ್​ ಆಗಿದೆ. ಫುಲ್​​ ಫ್ಯಾಮಿಲಿ ಕುಳಿತುಕೊಂಡು ನೋಡುವಂತಹ ಸಿನಿಮಾ ಇದು. ಅಪ್ಪು ಅಣ್ಣನನ್ನೇ ನೋಡಿದ ಹಾಗೇ ಅನುಭವ ಆಯ್ತು. ಕೊನೆಯಲ್ಲಿ ಅಪ್ಪ-ಮಗನ ಸಂಬಂಧ ಇರುವುದರಿಂದ ಕ್ಲೈಮ್ಯಾಕ್ಸ್ ತುಂಬಾ ಇಷ್ಟ ಆಯ್ತು. ಸಂತೋಷ್ ಆನಂದ್‌ರಾಮ್ ಅವರು ಬೇರೆ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಕೌಟುಂಬಿಕ ಸಂದೇಶ ಸಾರುತ್ತದೆ. ತುಂಬಾ ಅದ್ಭುವಾಗಿದೆ ಯುವ ರಾಜ್​​ಕುಮಾರ್​ ಅವರ ಮೊದಲ ಸಿನಿಮಾ ಅಂತಾ ಅನಿಸೋದಿಲ್ಲ ಎಂದು ವೀಕ್ಷಕರು ಹಾಡಿ ಹೊಗಳುತ್ತಿದ್ದಾರೆ. ಜೊತೆಗೆ ಇನ್ನೂ ಕೆಲ ಅಭಿಮಾನಿಗಳು ಯುವ ಸಿನಿಮಾವನ್ನು ನೋಡಿ ಕಣ್ಣೀರು ಹಾಕುತ್ತಾ ಥಿಯೇಟರ್​ನಿಂದ ಆಚೆ ಬರುತ್ತಿದ್ದರು. ಈ ಸಿನಿಮಾವನ್ನು ವಿಜಯ್ ಕಿರಗಂದೂರು ಅವರು ತಮ್ಮ ಹೊಂಬಾಳೆ ಫಿಲ್ಮ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಡಾ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಕಿರಿಯ ಪುತ್ರ ಯುವ ರಾಜ್‌ಕುಮಾರ್‌ಗೆ ಇದು ಮೊದಲ ಸಿನಿಮಾ ಎಂಬುದು ವಿಶೇಷ. ಈ ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಫೈಟ್, ಡ್ಯಾನ್ಸ್​, ಡೈಲಾಗ್​ ಮೂಲಕ ಅಬ್ಬರಿಸೋ ಮೂಲಕ ಬಾಕ್ಸಾಫೀಸ್​ನಲ್ಲೂ ಧೂಳೆಬ್ಬಿಸುವ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಸಂತೋಷ್ ಆನಂದ್ ರಾಮ್ ಡೈರೆಕ್ಷನ್, ಹೊಂಬಾಳೆ ಫಿಲಂಸ್ ಪ್ರೊಡಕ್ಷನ್​ ಚಿತ್ರದ ಕಿಕ್ ಹೆಚ್ಚಿಸುತ್ತಿದೆ  

No Ads
No Reviews
No Ads

Popular News

No Post Categories
Sidebar Banner
Sidebar Banner