ಯುವ.. ಯುವರಾಜ್.. ಯುವರಾಜ್ ಕುಮಾರ್. ಸದ್ಯ ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡಲು ರೆಡಿಯಾದ ರಾಜ್ ಕುಟುಂಬದ ಕುಡಿ. ತನ್ನ ಹೆಸರನ್ನೇ ಇಟ್ಟುಕೊಂಡು ಮೊದಲ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಲು ಹೊರಟಿದ್ದಾರೆ. ಇಂದು ಇವರ ನಟನೆಯ ‘ಯುವ’ ಸಿನಿಮಾದ ಟ್ರೇಲರ್ ಲಾಂಚ್ ಆಗಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿಸಿದ್ದಾರೆ. ಆ್ಯಕ್ಟಿಂಗ್, ಫೈಟಿಂಗ್ , ಡ್ಯಾನ್ನಲ್ಲಿ ಸಖತ್ ಸೈ ಎನಿಸಿಕೊಂಡಿರುವ ಯುವರಾಜ್ ಕುಮಾರ್ ‘ಯುವ’ ಸಿನಿಮಾದಲ್ಲಿ ಕಾಲೇಜ್ ಸ್ಟೂಡೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಖತ್ ಡೈಲಾಗ್ ಹೊಡೆಯುತ್ತಾ ಪುನೀತ್ ರಾಜ್ ಕುಮಾರಂತೆ ಕಾಣಿಸುವ ಯುವ ಅಭಿಮಾನಿಗಳ ಮನಗೆದ್ದಿದ್ದಾರೆ. ಯುವನಿಗೆ ನಾಯಕಿಯಾಗಿ ಸಪ್ತಮಿ ಗೌಡ ಮಿಂಚಿದ್ದಾರೆ. ಕಾಲೇಜು ಜೀವನದ ಗ್ಯಾಂಗ್ವಾರ್ನಿಂದ ಹಿಡಿದು, ತಂದೆ-ಮಗನ ಬಾಂಧವ್ಯವನ್ನು ಈ ಸಿನಿಮಾ ಕಟ್ಟಿಕೊಟ್ಟಂತೆ ಮೇಲ್ನೋಟಕ್ಕೆ ಕಂಡಿದೆ. ಇದಲ್ಲದೆ, ಜೀವನದಲ್ಲಿ ಕಷ್ಟಪಟ್ಟು ಬದುಕು ಕಟ್ಟಿಕೊಳ್ಳುವ ಯುವ, ಫುಡ್ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡೋದನ್ನ ಟ್ರೇಲರ್ ಬಿಟ್ಟುಕೊಟ್ಟಿದೆ. ಅಂದಹಾಗೆಯೇ ಸಂತೋಷ್ ಆನಂದ್ ರಾಮ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಯುವ ಸಿನಿಮಾ ಮೂಡಿಬಂದಿದೆ. ಇನ್ನು ಬಿಡುಗಡೆ ಮಾತ್ರ ಬಾಕಿ ಉಳಿದಿದೆ. ಮಾರ್ಚ್ 29ಕ್ಕೆ ರಾಜ್ಯಾದ್ಯಂತ ಅದ್ಧೂರಿ ಬಿಡುಗಡೆಗೆ ಯುವ ರೆಡಿಯಾಗಿದೆ.
ಕಾಲೇಜ್ ಸ್ಟೂಡೆಂಟ್ ಆಗಿ ಎಂಟ್ರಿ ಕೊಡಲು ‘ಯುವ’ ರೆಡಿ.. ಟ್ರೇಲರ್ ಮೂಲಕ ನಿರೀಕ್ಷೆ ದುಪ್ಟಟ್ಟು ಮಾಡಿದ ದೊಡ್ಡನೆ ಕುಡಿ
No Ads
Log in to write reviews