ಇತ್ತೀಚಿಗೆ ಟಾಕ್ಸಿಕ್ ಸಿನಿಮಾ ತಂಡದಿಂದ ಬಂದ ಸುದ್ದಿಯ ಪ್ರಕಾರ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸುತ್ತಿದ್ದಾರೆ . ಇದೀಗ ಕರೀನಾ ಕಪೂರ್ ಮಾತ್ರವಲ್ಲ ಬಹುಭಾಷಾ ನಟಿ ಶ್ರುತಿ ಹಾಸನ್ ಕೂಡ ಟಾಕ್ಸಿಕ್ ಸಿನಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಯಶ್ ಟಾಕ್ಸಿಕ್ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ವಿಶೇಷ ಪಾತ್ರ ಮಾಡಲಿದ್ದಾರಂತೆ. ಕರೀನಾ ಕಪೂರ್ ಜೊತೆ ಶ್ರುತಿ ಹಾಸನ್ ಸಹ ಅಭಿನಯಿಸ್ತಾರೆ ಎಂದು ಹೇಳಲಾಗಿದೆ. ಕೊನೆಯದಾಗಿ ಸಲಾರ್ ಚಿತ್ರದಲ್ಲಿ ಮೋಡಿ ಮಾಡಿದ್ದ ಶ್ರುತಿ ಹಾಸನ್ ಅವರು ಸದ್ಯ ಟಾಕ್ಸಿಕ್ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಟಾಕ್ಸಿಕ್ ಸಿನಿಮಾ ತಂಡ ಬಿಗ್ ಬಜೆಟ್‌ನಲ್ಲಿ ಶೂಟಿಂಗ್ ಆರಂಭಿಸಲು ಸಜ್ಜಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಸಿನಿಮಾ ಸಖತ್ ಹವಾ ಸೃಷ್ಟಿಸುತ್ತಿದೆ. ಲೇಟೆಸ್ಟ್ ಮಾಹಿತಿಯ ಪ್ರಕಾರ ಟಾಕ್ಸಿಕ್ ಸಿನಿಮಾದಲ್ಲಿ ಒಬ್ಬರಲ್ಲ, ಇಬ್ಬರು ಸ್ಟಾರ್ ಹೀರೋಯಿನ್‌ಗಳು ಇರ್ತಾರೆ ಅನ್ನೋ ಅಪ್ಡೇಟ್ ಸಿಕ್ಕಿದೆ. ಕೆಜಿಎಫ್ ಚಾಪ್ಟರ್ 2 ಮುಗಿದ ಮೇಲೆ ಯಶ್ ತಮ್ಮ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಪ್ಲಾನ್ ಆರಂಭಿಸಿದ್ದಾರೆ. ಕೆವಿಎನ್ ನಿರ್ಮಾಣದಲ್ಲಿ ತಯಾರಾಗ್ತಿರುವ ಟಾಕ್ಸಿಕ್ ಸಿನಿಮಾ ಜವಾಬ್ದಾರಿ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರಿಗೆ ನೀಡಲಾಗಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಗೆ ಇಬ್ಬರೂ ಸ್ಟಾರ್ ಹೀರೋಯಿನ್
No Ads
Log in to write reviews