ಬಾಲಿವುಡ್ನ ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗುವ ರಣ್ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಅಭಿನಯಿಸ್ತಾರೋ, ಇಲ್ವೋ ? ಇದಕ್ಕೆ ಅಪ್ಡೇಟ್ ಸಿಕ್ಕಿದ್ದು ಕೆಜಿಎಫ್ ಹೀರೋ ಯಶ್ ರಾಮಾಯಣ ಸಿನಿಮಾಕ್ಕೆ ಕೋ-ಪ್ರಡ್ಯೂಸರ್ ಆಗಿ ಬಂಡವಾಳ ಹೂಡುತ್ತಿದ್ದಾರೆ. ರಾಮಾಯಣ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ಅಭಿನಯ ಮಾಡುತ್ತಿಲ್ಲ. ಬದಲಿಗೆ ಸಿನಿಮಾಕ್ಕೆ ಅವರು ಬಂಡವಾಳ ಹೂಡುತ್ತಿದ್ದಾರೆ. ರಾವಣನಾಗಿ ನಟಿಸುವ ಆಫರ್ ತಿರಸ್ಕಾರ ಮಾಡಿರುವ ಯಶ್, ದುಡ್ಡು ಬೇಕಾದರೆ ಹಾಕುತ್ತೇನೆ ಎಂದು ಹೇಳಿದ್ದಾರೆ. ಸಿನಿಮಾದಲ್ಲಿ ರಾಣವನಾಗಿ ಯಶ್ ಅಭಿನಯ ಮಾಡುತ್ತಾರೋ, ಇಲ್ವೋ ಎನ್ನುವ ಗೊಂದಲ ಫ್ಯಾನ್ಸ್ ವಲಯದಲ್ಲಿ ಇತ್ತು. ಸದ್ಯ ಇದಕ್ಕೆ ಉತ್ತರ ಸಿಕ್ಕಂತೆ ಆಗಿದೆ. ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನಾಗಿ ನಟಿಸುತ್ತಿದ್ದಾರೆ ಎಂದು ಮೊದಲೇ ಹೇಳಲಾಗುತ್ತಿತ್ತು. ಆದರೆ ಆಫರ್ ಬಂದಿದ್ದು ನಿಜ, ನಾನು ನಟಿಸುತ್ತಿಲ್ಲ ಎಂದು ಯಶ್ ಹೇಳಿದ್ದರು. ಅವರು ಹೇಳಿದಂತೆ ಆಗಿದೆ. ಸದ್ಯ ಬಾಲಿವುಡ್ನ ರಾಮಾಯಣ ಸಿನಿಮಾದಲ್ಲಿ ಯಶ್ ಸಹ-ಪ್ರಡ್ಯೂಸರ್ ಆಗಿ ಬಂಡವಾಳ ಹೂಡುತ್ತಿದ್ದಾರೆ. ರಣ್ಬೀರ್ ಕಪೂರ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತಾ ಪಾತ್ರದಲ್ಲಿ ನಟನೆಗೆ ಇಳಿದಿದ್ದಾರೆ. ರಾವಣನ ಪಾತ್ರವನ್ನು ಯಶ್ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಅದನ್ನು ಯಾರು ಮಾಡುತ್ತಾರೆ ಎನ್ನುವುದು ರಹಸ್ಯವಾಗಿ ಉಳಿದಿದೆ. ಇನ್ನು ರಾಮನ ಪಾತ್ರ ಮಾಡುತ್ತಿರುವ ಹಿನ್ನೆಲೆ ರಣ್ಬೀರ್ ಕಪೂರ್ ಮದ್ಯಪಾನ, ಮಾಂಸ ತೊರೆದಿದ್ದಾರೆ. ಈ ಸಿನಿಮಾವನ್ನು ಒಟ್ಟು ಮೂರು ಭಾಗಗಳಲ್ಲಿ ಮಾಡಲಾಗುತ್ತಿದ್ದು, ಮೊದಲ ಭಾಗ 2025ರ ಕೊನೆಯಲ್ಲಿ ರಿಲೀಸ್ ಆಗಲಿದೆ.
ಬಾಲಿವುಡ್ನ ರಾಮಾಯಣ ಚಿತ್ರದಲ್ಲಿ ರಣ್ಬೀರ್ ಕಪೂರ್ ರಾಮನಾದರೇ ಯಶ್ ಪಾತ್ರ ಏನು..?
No Ads
Log in to write reviews