ಭಾರತಕ್ಕೆ ಹೆಮ್ಮೆ ತಂದಿರುವ ವಿಶ್ವ ಚೆಸ್ ಚಾಂಪಿಯನ್ ಡಿ. ಗುಕೇಶ್ ಅವರಿಗೆ ಈಗಾಗಲೇ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ. ಚೆನೈನಲ್ಲಿ ನೆಲೆಸಿರುವ ಅವರನ್ನು ಕಾಲಿವುಡ್ ಸೆಲೆಬ್ರಿಟಿಗಳು ಕೂಡ ಭೇಟಿ ಮಾಡುತ್ತಿದ್ದಾರೆ. ‘ಸೂಪರ್ ಸ್ಟಾರ್’ ರಜನಿಕಾಂತ್, ನಟ ಶಿವಕಾರ್ತಿಕೇಯನ್ ಮುಂತಾದವರು ಡಿ. ಗುಕೇಶ್ ಅವರನ್ನು ಭೇಟಿ ಮಾಡಿ ಬೆನ್ನು ತಟ್ಟಿದ್ದಾರೆ. ಇಂಥ ಸೆಲೆಬ್ರಿಟಿಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಗುಕೇಶ್ ಅವರು ಧನ್ಯವಾದ ಅರ್ಪಿಸಿದ್ದಾರೆ. ಗುಕೇಶ್ ಅವರಿಂದಾಗಿ ಭಾರತಕ್ಕೆ 11 ವರ್ಷಗಳ ಬಳಿಕ ಚೆಸ್ ಚಾಂಪಿಯನ್ಶಿಪ್ ದೊರೆತಿದೆ. ಹಾಗಾಗಿ ಅವರನ್ನು ಕಂಡರೆ ಎಲ್ಲರಿಗೂ ಹೆಮ್ಮೆ. ಗುಕೇಶ್ ಅವರು ತಮ್ಮ ಪೋಷಕರ ಜೊತೆ ರಜನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ರಜನಿಕಾಂತ್ ಅವರು ಗುಕೇಶ್ಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಅಲ್ಲದೇ, ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್ಗೆ ರಜನಿಕಾಂತ್ ಉಡುಗೊರೆ
No Ads
Log in to write reviews