ಟಾಟಾ ಸ್ಟೀಲ್ ಚೆಸ್; ರೋಮಾಂಚಕ ಟೈಬ್ರೇಕ್ ನಲ್ಲಿ ವಿಶ್ವ ಚಾಂಪಿಯನ್ ಡಿ ಗುಕೇಶ್ (D Gukesh) ಅವರನ್ನು ಸೋಲಿಸಿ ಟ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ (R Praggnanandhaa) ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಟೈಟಲ್ ಗೆದ್ದುಕೊಂಡಿದ್ದಾರೆ.
2006 ರಲ್ಲಿ ವಿಶ್ವನಾಥನ್ ಆನಂದ್ ಗೆದ್ದ ನಂತರ ಟಾಟಾ ಸ್ಟೀಲ್ ಮಾಸ್ಟರ್ಸ್‌ನಲ್ಲಿ ಅತ್ಯುನ್ನತ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಆರ್. ಪ್ರಜ್ಞಾನಂದ ಪಾತ್ರರಾದರು.
14 ಆಟಗಾರರ ರೌಂಡ್-ರಾಬಿನ್ ಈವೆಂಟ್‌ನಲ್ಲಿ ಗುಕೇಶ್ ಮತ್ತು ಪ್ರಜ್ಞಾನಂದ 13 ಕ್ಲಾಸಿಕಲ್ ಸುತ್ತುಗಳ ಕೊನೆಯಲ್ಲಿ ಸಮಬಲ ಸಾಧಿಸಿದ್ದರು.
ಭಾನುವಾರ ನಡೆದ ತಮ್ಮ ಕೊನೆಯ ಕ್ಲಾಸಿಕಲ್ ಪಂದ್ಯಗಳಲ್ಲಿ ಪ್ರಜ್ಞಾನಂದ ಮತ್ತು ಗುಕೇಶ್ ಇಬ್ಬರೂ ತಲಾ 8.5 ಅಂಕಗಳೊಂದಿಗೆ ಸೋತರು. ಪಂದ್ಯಾವಳಿಯ ಕೊನೆಯ ಸುತ್ತಿನವರೆಗೂ ಅಜೇಯರಾಗಿದ್ದ ಗುಕೇಶ್, ವಿಶ್ವ ಚಾಂಪಿಯನ್ ಆಗಿ ಮೊದಲ ಬಾರಿಗೆ ಕ್ಲಾಸಿಕಲ್ ಪಂದ್ಯವನ್ನು ಗ್ರಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ವಿರುದ್ಧ 31 ನಡೆಗಳಲ್ಲಿ ಸೋತರು. 13 ನೇ ಸುತ್ತಿನಲ್ಲಿ ಮ್ಯಾರಥಾನ್ ಪಂದ್ಯದಲ್ಲಿ ಪ್ರಜ್ಞಾನಂದ ಗ್ರಾಂಡ್ ಮಾಸ್ಟರ್ ವಿನ್ಸೆಂಟ್ ಕೀಮರ್ ವಿರುದ್ಧ ಸೋತರು.
ಭಾನುವಾರ ನಡೆದ ಎರಡು ಪಂದ್ಯಗಳ ಬ್ರಿಡ್ಜ್ ಟೈಬ್ರೇಕರ್ ನಲ್ಲಿ ಗುಕೇಶ್ ಮೊದಲ ಪಂದ್ಯವನ್ನು ಗೆದ್ದರು. ಮೊದಲ ಪಂದ್ಯವನ್ನು ಬಿಳಿ ಕಾಯಿಗಳೊಂದಿಗೆ ಗೆದ್ದರು. ಗುಕೇಶ್ ಗೆ ಕಿರೀಟವನ್ನು ಗೆಲ್ಲಲು ಎರಡನೇ ಬಿಟ್ಸ್ ಟೈಬ್ರೇಕರ್‌ನಲ್ಲಿ ಡ್ರಾ ಮಾತ್ರ ಅಗತ್ಯವಿತ್ತು. ಆದರೆ ಪ್ರಜ್ಞಾನಂದ ಅದ್ಭುತ ಕಮ್‌ಬ್ಯಾಕ್ ಮಾಡಿದ್ದು, ಮೂಲಕ ಎರಡೂ ಬಿಟ್ಸ್ ಪಂದ್ಯಗಳನ್ನು ಗೆದ್ದರು. ಈ ಮೂಲಕ ವಿಶ್ವ ಚಾಂಪಿಯನ್ ಗುಕೇಶ್ ಅವರ ಕನಸು ನುಚ್ಚುನೂರಾಗಿ ಪ್ರಜ್ಞಾನಂದ ಗೆಲುವು ಸಾಧಿಸಿದರು.
Log in to write reviews