No Ads

ಮಹಿಳೆಯರೇ ಎಚ್ಚರ.. ಸ್ಪಲ್ಪ ಕೇರ್​​ಲೆಸ್ ಮಾಡಿದ್ರು ಅಪಾಯ ಕಟ್ಟಿಟ್ಟ ಬುತ್ತಿ

ಕರ್ನಾಟಕ 2024-03-21 15:49:25 47
post

ಇತ್ತೀಚಿನ ಲೈಫ್ ಸ್ಟೈಲ್ ಹಾಗೂ ಟೆಕ್ನಾಲಜಿ ಬದುಕಿಗೆ ಮಾರು ಹೋಗುತ್ತಿರುವ ವೇಳೆ ಹಲವು ಕಾಯಿಲೆಗಳು ಜನರನ್ನು ಹುಡುಕಿಕೊಂಡು ಬರುತ್ತಿದೆ. ಅದರಲ್ಲೂ ಮಹಿಳೆಯರು ಕೊಂಚ ಎಚ್ಚರ ತಪ್ಪಿದ್ರು ಅವರ ದೈಹಿಕ‌ ಸ್ಥಿತಿ ‌ಹೆಚ್ಚು ಕೆಡುವ ಸಾಧ್ಯತೆಯಿದೆ. ಯಾಕಂದ್ರೆ ಮಹಿಳೆಯರಲ್ಲಿ ಕೋವಿಡ್ ನಂತರ ಈ ಕಾಯಿಲೆ ಮಿತಿ ಮಿರುತ್ತಿದೆ ಮಹಿಳೆಯರೇ ಎಚ್ಚರ ಸ್ಪಲ್ಪ ಕೇರ್ ಲೆಸ್ ಮಾಡಿದ್ರು ತೀವ್ರವಾದ ಕಾಯಿಲೆಗೆ ತುತ್ತಾಗೋದು ಪಕ್ಕಾ. ಹೌದು, ಮಹಿಳೆಯರ ದೇಹವು ಜೀವಿತಾವಧಿಯಲ್ಲಿ ಅಸಂಖ್ಯಾತ ಬದಲಾವಣೆಗಳನ್ನು ಕಾಣುತ್ತದೆ. ಪ್ರೌಢಾವಸ್ಥೆಯನ್ನು ಋತುಸ್ರಾವದಿಂದ ಹಿಡಿದು ಗರ್ಭಧಾರಣೆಯನ್ನು ಅನುಭವಿಸುವವರೆಗೆ ಋತು ಬಂಧದ ಸ್ಥಿತಿ ತಲುಪುವವರೆಗೆ ಅನೇಕ ದೈಹಿಕ ಸವಾಲುಗಳನ್ನು ಎದುರಿಸಬೇಕಾಗುತ್ತೆ ಎಚ್ಚರ. ದಿನೇ ದಿನೇ ಮಹಿಳೆಯರಲ್ಲಿ PCOD ಕಾಯಿಲೆ ಹೆಚ್ಚಾಗುತ್ತಿದೆ. ಕೋವಿಡ್ ನಂತರ ಮಹಿಳೆಯರಲ್ಲಿ ಈ ಕಾಯಿಲೆ ಏರಿಕೆ ಕಂಡಿದೆ. ಅಂಡಾಣು ತಯಾರಿಸುವ ಅಂಶದಲ್ಲಿ ನೀರಿನ ಗುಳ್ಳೆಗಳಿಂದ ಹೆಚ್ಚಳವಾಗಿ PCOD ಕಾಯಿಲೆಗೆ ಕಾರಣವಾಗ್ತಿದೆ. PCOD ಕಾಯಿಲೆಯಲ್ಲಿ ಆಂಡ್ರೊಜೆನ್ ಹಾರ್ಮೋನ್ ಬಿಡುಗಡೆಯಾಗಿ ಮಹಿಳೆಯರ ಫಲವತ್ತತೆ ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತಿದೆ. PCOS ಅನುವಂಶಿಕ ಕಾಯಿಲೆ. ಇನ್ನು ಈ ಕಾಯಿಲೆಯನ್ನು ಸಾಮಾನ್ಯವಾಗಿ ಆಲ್ಟ್ರಾ ವೈಲೆಟ್ ಸ್ಕ್ಯಾನಿಂಗ್ ಮೂಲಕ ಕಂಡುಹಿಡಿಯಲಾಗುತ್ತೆ. PCOS ಕಾಯಿಲೆ PCOD ಗಿಂತ ತೀವ್ರವಾದ ಕಾಯಿಲೆ ಅಂತಾರೆ ವೈದ್ಯರು. ಇನ್ನು ಪುರುಷರಲ್ಲಿರುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಹಿಳೆಯರಲ್ಲಿ ಹೆಚ್ಚಾದಾಗ PCOS ಕಾಯಿಲೆ ಸಮಸ್ಯೆ ಉಂಟಾಗುತ್ತದೆ. PCOS ಮತ್ತು PCOD ಜೇವಿನ ಶೈಲಿಯ ಕಾಯಿಲೆ. ವರ್ಕ್ ಪ್ರೆಜರ್, ಕಡಿಮೆ ದೈಹಿಕ ಚಟುವಟಿಕೆ, ಜಂಗ್ ಫುಡ್​ನಿಂದಾಗಿ PCOS ಮತ್ತು PCOD ಕಾಯಿಲೆಗೆ ಕಾರಣವಾಗ್ತಿದೆ. ಇನ್ನು, ಇದರಿಂದ ಪ್ರೆಗ್ನೆನ್ಸಿಯಲ್ಲಿ ತೊಂದರೆ, ಡಯಾಬಿಟಿಸ್ ಹಾಗೂ ಒಬೆಸಿಟಿ ಹೆಚ್ಚಳವಾಗ್ತಿದೆ. PCOS ಮತ್ತು PCOD ಕಾಯಿಲೆ ರೋಗಲಕ್ಷಣಗಳು.. – ಹೆಣ್ಣು ಮಕ್ಕಳ ಋತ್ತು ಚಕ್ರದಲ್ಲಿ ಏರುಪೇರು – ಮುಖದ ಮೇಲೆ ಹೆಚ್ಚು ಮೊಡವೆ ಮತ್ತು ಕೂದಲು – ತಲೆ ಕೂದಲು ಉದುರುವಿಕೆ – ತೂಕದಲ್ಲಿ ಏರುಪೆರು – ಮಾನಸಿಕ ಖಿನ್ನತೆ ವೈದ್ಯರ ವರದಿ ಪ್ರಕಾರ, PCOS ಮತ್ತು PCOD ಕಾಯಿಲೆ ಪ್ರಮಾಣ 2010 ರಲ್ಲಿ ಶೇ. 5.6% ಇತ್ತು. ಕೋವಿಡ್​ ಸಂದರ್ಭದಲ್ಲಿ PCOS ಮತ್ತು PCOD ಕಾಯಿಲೆ ಪ್ರಮಾಣ 2020ರಲ್ಲಿ ಶೇ. 8.6% ಇತ್ತು. ಕೋವಿಡ್​ ನಂತರ PCOS ಮತ್ತು PCOD ಕಾಯಿಲೆಯಲ್ಲಿ ಶೇ. 22.6% ಹೆಚ್ಚಳವಾಗಿದೆ. ಆಧುನಿಕ ಬದುಕಿನ ಜೀವನ ಶೈಲಿಯ ಜೊತೆಗೆ ಕೊಂಚ ಉತ್ತಮ ಆಹಾರದತ್ತ ಮಹಿಳಾ ಮಣಿಗಳು ಒಲವು ತೋರಬೇಕಿದೆ. ಮಹಿಳೆಯರು ಕೊಂಚ ಎಚ್ಚರ ವಹಿಸಿ ವೈದ್ಯರ ಸಲಹೆ ಪಡೆದರೇ ಸೂಕ್ತ ಅಂತಾರೆ ಸ್ತ್ರೀರೋಗತಜ್ಞರು.

No Ads
No Reviews
No Ads

Popular News

No Post Categories
Sidebar Banner
Sidebar Banner