No Ads

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ ₹ 10,000 ನೆರವು: ಜಮೀರ್ ಅಹ್ಮದ್

ಕರ್ನಾಟಕ 2024-04-18 11:56:49 295
post

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಧಿಕಾರಕ್ಕೆ ಬಂದರೆ, ದೇಶದ ಎಲ್ಲ ಬಡವರ್ಗದ ಮಹಿಳೆಯರಿಗೆ ವಾರ್ಷಿಕ ತಲಾ ಒಂದು ಲಕ್ಷ ರೂ. ಕೊಡುವ ಭರವಸೆಯನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೀಡಿದ್ದಾರೆ. ವಾರ್ಷಿಕ ₹ 1,00,000 ಅಂದರೆ, ತಿಂಗಳಿಗೆ ₹ 8,000, ತಮ್ಮ ಸರ್ಕಾರ ಪ್ರತಿ ತಿಂಗಳು ಕೊಡುತ್ತಿರುವ ₹ 2,000 ಸೇರಿಸಿದರೆ ಪ್ರತಿ ಹೆಣ್ಣುಮಗಳಿಗೆ ತಿಂಗಳಿಗೆ ₹ 10,000 ಸಿಗಲಿದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ   ಇಂದು ಹೊಸಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ (Raj Shekhar Hitnal) ಪರ ಪ್ರಚಾರ ಮಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಈಗಿನ ಬೆಲೆಗಳೊಂದಿಗೆ ಹೋಲಿಕೆ ಮಾಡಿದ ಜಮೀರ್, ಈಗ ಎಲ್ಲ ಬೆಲೆಗಳು ಎರಡು ಪಟ್ಟು ಹೆಚ್ಚಿವೆ ಅಂತ ಹೇಳಿದರು. ನಂತರ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡುವಾಗ ಅವರು, ತಮ್ಮ ಗುರು ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಶೈಲಿಯನ್ನು ಅನುಕರಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಧಿಕಾರಕ್ಕೆ ಬಂದರೆ, ದೇಶದ ಎಲ್ಲ ಬಡವರ್ಗದ ಮಹಿಳೆಯರಿಗೆ ವಾರ್ಷಿಕ ತಲಾ ಒಂದು ಲಕ್ಷ ರೂ. ಕೊಡುವ ಭರವಸೆಯನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೀಡಿದ್ದಾರೆ. ವಾರ್ಷಿಕ ₹ 1,00,000 ಅಂದರೆ, ತಿಂಗಳಿಗೆ ₹ 8,000, ತಮ್ಮ ಸರ್ಕಾರ ಪ್ರತಿ ತಿಂಗಳು ಕೊಡುತ್ತಿರುವ ₹ 2,000 ಸೇರಿಸಿದರೆ ಪ್ರತಿ ಹೆಣ್ಣುಮಗಳಿಗೆ ತಿಂಗಳಿಗೆ ₹ 10,000 ಸಿಗಲಿದೆ ಎಂದು ಜಮೀರ್ ಅಹ್ಮದ್ ಹೇಳಿದರು.

No Ads
No Reviews
No Ads

Popular News

No Post Categories
Sidebar Banner
Sidebar Banner