No Ads

ಹೆಂಗಸರೆ ‘ ಡೆಲಿವರಿ ಬಾಯ್ ಬಂದ ಅಂತ ಬಾಗಿಲು ತೆಗೆಯೋ ಮುನ್ನ ಇರಲಿ ಎಚ್ಚರ ; ಈ ಸುದ್ದಿ ಕೇಳಿದ್ರೆ ಭಯ ಬೀಳ್ತೀರ

ಜಿಲ್ಲೆ 2025-05-30 16:46:43 475
post

ಚಾಮರಾಜನಗರ; ಗ್ಯಾಸ್ ಡೆಲವರಿ ನೀಡಲು ಬಂದ ಡೆಲಿವರಿ ಬಾಯ್​ (Delivery boy) ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ; ಮೇ 21 ರಂದು ಪ್ರಕರಣ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

“ಮಹಿಳೆ ಅನಾರೋಗ್ಯದ ನಿಮಿತ್ತ ಮೇ.21 ರಂದು ಮೈಸೂರಿಗೆ ತೆರಳಲು ಸಿದ್ಧವಾಗುತ್ತಿದ್ದರು. ಮಧ್ಯಾಹ್ನ 12-30 ರ ಸುಮಾರಿಗೆ, ಮಹಿಳೆ ಇದ್ದ ಮನೆಗೆ ಗ್ಯಾಸ್ ಡೆಲಿವರಿ ಬಾಯ್ ಮಹೇಶ್ ಬಂದು, ಬಾಗಿಲು ಬಡೆದಿದ್ದಾನೆ. ಮಹಿಳೆ ಯಾರು ಎಂದು ಕೇಳಿದಾಗ, ಗ್ಯಾಸ್ ಡೆಲಿವರಿ ಮಾಡುವನು ಅಂತ ಆರೋಪಿ ಮಹೇಶ್​ ಹೇಳಿದ್ದಾನೆ. ನಾನು ಗ್ಯಾಸ್ ಬುಕ್ ಮಾಡಿಲ್ಲ” ಎಂದು ಮಹಿಳೆ ಹೇಳಿದ್ದಾರೆ. ಅದಕ್ಕೆ, ಆರೋಪಿ ಮಹೇಶ್​ “ಬುಕ್ ಮಾಡದಿದ್ದರೂ ಕೊಡುತ್ತೇವೆ ಖಾಲಿ ಇದ್ದರೆ ತೆಗೆದುಕೊಳ್ಳಿ” ಎಂದು ಹೇಳಿದ್ದಾನೆ.

“ಅಮೌಂಟ್ ಎಷ್ಟು ಎಂದು ಮಹಿಳೆ ಕೇಳಿದಾಗ 920 ರೂ. ಎಂದು ಹೇಳಿ ಹಣವನ್ನು ಪಡೆದುಕೊಂಡಿದ್ದಾನೆ. ತದನಂತರ, ಗ್ಯಾಸ್ ಕಂಪನಿ ಕಡೆಯಿಂದ ಕೆವೈಸಿ ಮಾಡಬೇಕು. ಹೀಗಾಗಿ, ಮನೆಯ ಫೋಟೊ ತೆಗೆಯಬೇಕು ಅದನ್ನು ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಬೇಕೆಂದು ಆರೋಪಿ ಮಹೇಶ್​ ಹೇಳಿದ್ದಾನೆ. ನಂತರ,  ಎಂದು ಮಹಿಳೆ ದೂರು ದಾಖಲಿಸಿದ್ದಾರೆ.

ಆನಂತರ ಕೇಂದ್ರ ಸರ್ಕಾರದ ಆದೇಶ ಇದೆ. ನಿಮ್ಮ, ಅಡುಗೆ ಮನೆಯಲ್ಲಿ ಗಾಳಿ, ಬೆಳಕು ಸರಿಯಾಗಿ ಬರುತ್ತದೆಯೋ, ಇಲ್ಲವೋ ಪರಿಶೀಲಿಸಬೇಕು. ಫೋಟೋ ತೆಗೆಯಬೇಕು ಎಂದು ಆರೋಪಿ ಮಹೇಶ್​ ಹೇಳಿದ್ದಾನೆ. ಸರಿ ಅಂತ, ಮಹಿಳೆ ಆರೋಪಿ ಮಹೇಶ್​ನನ್ನು ಮನೆಯೊಳಗೆ ಬಿಟ್ಟುಕೊಂಡಿದ್ದಾರೆ. ಆರೋಪಿ ಮಹೇಶ್​ ಮನೆಯೊಳಗೆ ಬಂದ ಕೂಡಲೆ, ಮಹಿಳೆಯನ್ನು ತಳ್ಳಿದ್ದಾನೆ. ಚಾಕು ತೋರಿಸಿ ಕಿರುಚಿದರೆ ನಿನ್ನನ್ನು ಇಲ್ಲೇ ಮುಗಿಸಿಬಿಡುತ್ತೇನೆ ಅಂತ ಆರೋಪಿ ಮಹೇಶ್​ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.

ಬಳಿಕ ಮಹಿಳೆ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದನು. ಅಲ್ಲದೆ, ಮಹಿಳೆಯ ಮುಖಕಕ್ಕೆ ಹೊಡೆದಿದ್ದಾನೆ. ನಂತರ, ಮಹಿಳೆಯನ್ನು ಎಳೆದಾಡಿ ಕಿರುಕುಳ ನೀಡಿದ್ದಾನೆ. ಮಹಿಳೆಯ ಎದೆ ಮತ್ತು ಮುಖಕ್ಕೆ ಚಾಕುವಿನಿಂದ ಇರಿದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ನೀಡಿದ ದೂರಿನಲ್ಲಿ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner