ಕೊಪ್ಪಳದ 42 ವಯಸ್ಸಿನ ಮೃತ್ಯುಂಜವ್ವ ನಿರಂತರ ಪರಿಶ್ರಮ ಹಾಗೂ ಗುರಿಯೆಡೆಗಿನ ದೃಷ್ಟಿಯಿಂದ ಎಲ್ಲ ಅಸಾಧ್ಯತೆಯನ್ನು ಸಾಧ್ಯತೆಯನ್ನಾಗಿ ಮಾಡುತ್ತದೆ ಎಂಬುದನ್ನು ನಿರೂಪಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರಿನ ಮೃತ್ಯುಂಜವ್ವ ಕಂಬಳಿ ಎಂಬುವವರು ತಮ್ಮ 42ನೇ ವಯಸ್ಸಿನಲ್ಲಿ ಪಿಯುಸಿ ಪ್ರವೇಶ ಪಡೆದು, ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅಡ್ಮಿಷನ್ ಮಾಡಿ ಮೊದಲ ಪ್ರಯತ್ನದಲ್ಲಿಯೇ ಮೃತ್ಯುಂಜವ್ವ ಪಿಯುಸಿಯನ್ನು ಸರಳವಾಗಿ ಪಾಸ್ ಮಾಡಿದ್ದಾರೆ. ಎಲ್ಲಾ ವಿಷಯದಲ್ಲೂ ಉತ್ತಮ ಅಂಕ ಪಡೆದು ಸಾಧನೆ ಮಾಡಿರುವ ಗೃಹಿಣಿ, ಓದುವ ಹಂಬಲ ಮತ್ತು ಮಕ್ಕಳ ಸ್ಪೂರ್ತಿಯಿಂದಾಗಿ ಆಸೆ ಈಡೇರಿದೆ ಎಂದು ಹೇಳಿದ್ದಾರೆ. ಇನ್ನು ಮೃತ್ಯುಂಜವನ್ನ ಕಂಬಳಿ ಅವರ ಈ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
42ನೇ ವಯಸ್ಸಿನಲ್ಲಿ ಪಿಯು ಪರೀಕ್ಷೆ ಪಾಸ್ ಮಾಡಿದ ಮಹಿಳೆ

No Ads
Log in to write reviews