No Ads

ಸೋದರಳಿಯನ ಮೇಲೆ ಪ್ರೀತಿ, ಪತಿಯನ್ನೇ ಕೊಂದ ಮಹಿಳೆ ಅರೆಸ್ಟ್

India 2025-05-20 12:56:13 283
post

ಕಾನ್ಪುರದ ಸಾದ್​ನ ಲಕ್ಷ್ಮಣಖೇಡಾ ಗ್ರಾಮದಲ್ಲಿ ಮೇ 10ರಂದು ಕೊಲೆ ನಡೆದಿದ್ದು, ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಪೊಲೀಸರು ಆತನ ಪತ್ನಿ ಮತ್ತು ಸೋದರಳಿಯನನ್ನು ಬಂಧಿಸಿದ್ದಾರೆ. ಹೆಂಡತಿ ಮತ್ತು ಸೋದರಳಿಯ ಅಕ್ರಮ ಸಂಬಂಧ ಹೊಂದಿದ್ದರು. ಈ ಸಂಬಂಧ ಪತಿಗೆ ತಿಳಿದುಬಿಟ್ಟಿತ್ತು, ತಮ್ಮ ದಾರಿಗೆ ಮುಳ್ಳಾದರೆ ಎನ್ನುವ ಭಯದಲ್ಲಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದಿದ್ದಾಳೆ.

 

 

ಸೋದರಳಿಯನನ್ನು ಆಕೆ ಪ್ರೀತಿಸುತ್ತಿದ್ದಳು. ಕೊಲೆ ಮಾಡಿ ಆ ಕೊಲೆಯನ್ನು ಪಕ್ಕದ ಮನೆಯವನ ಮೇಲೆ ಹಾಕಿದ್ದರು. ಪತಿಯ ಕೊಲೆಗಾಗಿ ಇಬ್ಬರು ಅಮಾಯಕರನ್ನು ಜೈಲಿಗೆ ಕಳುಹಿಸಿದ್ದಳು.ಪತಿಯ ಕೊಲೆಯ ನಂತರ, ಪತ್ನಿ ನೆರೆಯ ತಂದೆ ಮತ್ತು ಮಗನ ಮೇಲೆ ಆರೋಪ ಹೊರಿಸಿ ಗಲಾಟೆ ಮಾಡಿದ್ದಳು.

ಆಕೆಗೆ ಬೆಂಬಲವಾಗಿ ಗ್ರಾಮಸ್ಥರು ಮತ್ತು ಪಕ್ಷದ ಸದಸ್ಯರು ಕೂಡ ಪ್ರತಿಭಟನೆ ನಡೆಸಿದ್ದರು. ಈಗ ಪೊಲೀಸರು ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಮತ್ತು ಅಮಾಯಕ ತಂದೆ ಮತ್ತು ಮಗನನ್ನು ಜೈಲಿನಿಂದ ಬಿಡುಗಡೆ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner