No Ads

ಪತಿಯ ಕೊಂದು ತುಂಡರಿಸಿದ್ದ ಪತ್ನಿ ಹಾಗು ಪ್ರಿಯಕರ; ಮಗಳನ್ನ ಗಲ್ಲಿಗೇರಿಸಿ ಎಂದು ಕಣ್ಣೀರಿಟ್ಟ ಪೋಷಕರು

India 2025-03-20 12:43:22 695
post

‘‘ನನ್ನ ಮಗಳನ್ನು ಗಲ್ಲಿಗೇರಿಸಿ ಆಕೆಗೆ ಬದುಕುವ ಅರ್ಹತೆ ಇಲ್ಲ’’ ಎಂದು ಆರೋಪಿ ಮಹಿಳೆ ಮುಸ್ಕಾನ್ ಪೋಷಕರು ಕಣ್ಣೀರಿಟ್ಟಿದ್ದಾರೆ. ಉತ್ತರ ಪ್ರದೇಶದ ಮೀರತ್​ನಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಂದು 15 ತುಂಡುಗಳಾಗಿ ಕತ್ತರಿಸಿ ಡ್ರಮ್​ನಲ್ಲಿಟ್ಟು ಸಿಮೆಂಟ್​ ಹಾಕಿ ಸೀಲ್ ಮಾಡಿರುವ ಘಟನೆ ನಡೆದಿತ್ತು.

ಈ ಕುರಿತು ಆಕೆಯ ಪೋಷಕರು ಪ್ರತಿಕ್ರಿಯೆ ನೀಡಿದ್ದು, ಆಕೆಗೆ ಬದುಕುವ ಯಾವ ಯೋಗ್ಯತೆಯೂ ಇಲ್ಲ, ಆಕೆಯನ್ನು ಗಲ್ಲಿಗೇರಿಸಿ ಎಂದು ಮನವಿ ಮಾಡಿದ್ದಾರೆ. ಹಾಗೆಯೇ ನ್ಯಾಯಕ್ಕಾಗಿ ಸೌರಭ್ ಕುಟುಂಬದ ಹೋರಾಟದಲ್ಲಿ ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

ಪ್ರಕರಣದ ತನಿಖೆಯು ಸೌರಭ್ ರಜಪೂತ್ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ನಡುವಿನ ವಿವಾಹೇತರ ಸಂಬಂಧವನ್ನು ಬೆಳಕಿಗೆ ತಂದಿತು. ಸೌರಭ್​ ತಮ್ಮ ಮಗಳನ್ನು ಕಣ್ಣುಮುಚ್ಚಿ ನಂಬುತ್ತಿದ್ದ, ಪ್ರತಿ ಹಂತದಲ್ಲೂ ಆಕೆಗೆ ಬೆಂಬಲ ನೀಡುತ್ತಿದ್ದ

ನಮ್ಮ ಮಗಳೇ ಸಮಸ್ಯೆಯಾಗಿದ್ದಳು. ಅವಳು ಅವನನ್ನು ಅವನ ಕುಟುಂಬದಿಂದ ಬೇರ್ಪಡಿಸಿದಳು. ಮತ್ತು ಈಗ ಅವಳು ಹೀಗೆ ಮಾಡಿದ್ದಾಳೆ. ಅವನು ಎಲ್ಲವನ್ನೂ ಪಣಕ್ಕಿಟ್ಟು, ತನ್ನ ಹೆತ್ತವರನ್ನು, ಅವರ ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು ಬಿಟ್ಟುಹೋದ. ಈಗ ಆತನನ್ನೇ ಕೊಲೆ ಮಾಡಿದ್ದಾಳೆ.

ಸೌರಭ್ ರಜಪೂತ್ ಮತ್ತು ಮುಸ್ಕಾನ್ ರಸ್ತೋಗಿ 2016 ರಲ್ಲಿ ಪ್ರೇಮ ವಿವಾಹವಾದರು, ನಂತರ ಮರ್ಚೆಂಟ್ ನೇವಿ ಅಧಿಕಾರಿ ತನ್ನ ಹೆಂಡತಿಯೊಂದಿಗೆ ಹೆಚ್ಚು ಸಮಯ ಕಳೆಯಲು ತನ್ನ ಕೆಲಸವನ್ನು ಬಿಟ್ಟಿದ್ದ, ಅವರು ಅವಳಿಗಾಗಿ ತಮ್ಮ ಕುಟುಂಬವನ್ನು ದೂರವಿಟ್ಟರು. 2019 ರಲ್ಲಿ, ಮುಸ್ಕಾನ್ ಮತ್ತು ಸೌರಭ್ ಅವರಿಗೆ ಒಂದು ಹೆಣ್ಣು ಮಗು ಜನಿಸಿತು, ನಂತರ ಮುಸ್ಕಾನ್ ತನ್ನ ಸ್ನೇಹಿತ ಸಾಹಿಲ್ ಜೊತೆ ಸಂಬಂಧ ಹೊಂದಿದ್ದಾಳೆಂದು ಸೌರಭ್​ಗೆ ಗೊತ್ತಾಯಿತು. ಇದರಿಂದ ಅವರಿಬ್ಬರ ನಡುವೆ ಜಗಳ ಹೆಚ್ಚಾಗಿತ್ತು. ಇಅಂತಿಮವಾಗಿ, ಸೌರಭ್ ಮತ್ತೆ ಮರ್ಚೆಂಟ್ ನೇವಿ ಸೇರಲು ನಿರ್ಧರಿಸಿದ್ದ.

ಫೆಬ್ರವರಿ 28 ರಂದು ಸೌರಭ್ ಅವರ ಮಗಳಿಗೆ ಆರು ವರ್ಷ ತುಂಬಿತು, ಆಕೆಯ ತಂದೆ ಲಂಡನ್‌ನಿಂದ ಮನೆಗೆ ಮರಳಿದರು. ಮುಸ್ಕಾನ್ ಮತ್ತು ಸಾಹಿಲ್ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಸೌರಭ್‌ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಮಾರ್ಚ್ 4 ರಂದು ಮುಸ್ಕಾನ್ ಸೌರಭ್‌ನ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಮಲಗಿದ್ದಾಗ  ಅವಳು ಮತ್ತು ಸಾಹಿಲ್ ಅವನನ್ನು ಚಾಕುವನ್ನು ಚುಚ್ಚಿ ಕೊಲೆ ಮಾಡಿದ್ದಾರೆ.

ಇದರ ನಂತರ, ಮುಸ್ಕಾನ್ ಮತ್ತು ಸಾಹಿಲ್ ದೇಹವನ್ನು ಕತ್ತರಿಸಿ, ಡ್ರಮ್‌ನಲ್ಲಿ ತುಂಡುಗಳನ್ನು ಹಾಕಿ, ಸಿಮೆಂಟಿನಿಂದ ಮುಚ್ಚಿ ದೇಹವನ್ನು ವಿಲೇವಾರಿ ಮಾಡಿದರು.

 

 

No Ads
No Reviews
No Ads

Popular News

No Post Categories
Sidebar Banner
Sidebar Banner