ಇತ್ತೀಚೆಗೆ ರುದ್ರಾಕ್ಷಿ ಮಾರುವ ಹುಡುಗಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದಾಳೆ. ಈಕೆಯ ಸೌಂದರ್ಯಕ್ಕೆ ಜನ ಮಾರು ಹೋಗಿದ್ದಾರೆ. ಹಾಗಾದರೆ ಈ ಹುಡುಗಿ ಯಾರು? ಎಲ್ಲಯವಳು? ಈಕೆಯ ಹೆಸರೇನು?
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಕಂಡು ಇಡೀ ವಿಶ್ವವೇ ಬೆರಗಾಗಿದೆ. ಈ ಮೇಳದಲ್ಲಿ ಒಟ್ಟಿಗೆ ಭಾಗವಹಿಸುವ ಕೋಟ್ಯಾಂತರ ಭಕ್ತ ಸಾಗರವನ್ನು ಯಾವ ದೇಶದಲ್ಲೂ ಕಾಣಲು ಸಾಗುವುದಿಲ್ಲ. ಸಾಧುಗಳು, ಸಂತರು, ನಾಗಸಾಧುಗಳು ಹೀಗೆ ಬಗೆ ಬಗೆಯ ಭಕ್ತರು ಮಹಾ ಕುಂಭ ಮೇಳದಲ್ಲಿ ಭಾಗವಹಿಸಿ ಪವಿತ್ರ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಈ ಧಾರ್ಮಿಕ ಸ್ಥಳದಲ್ಲಿ ಒಬ್ಬ ಸುಂದರವಾದ ಹುಡುಗಿ ರುದ್ರಾಕ್ಷಿ ಮಾರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಕೆಯ ಸೌಂದರ್ಯ ಹಾಗೂ ಈಕೆಯ ಆಕರ್ಷಕ ಕಣ್ಣುಗಳಿಗೆ ಯುವಕರು ಬೆರಗಾಗಿದ್ದಾರೆ.
ಮಹಾ ಕುಂಭಮೇಳದ ಅತ್ಯಂತ ಸುಂದರ ಸಾಧ್ವಿ. ಹೆಸರು ಮೊನಾಲಿಸಾ. ಮಧ್ಯಪ್ರದೇಶದ ಮೊನಾಲಿಸಾ ತನ್ನ ಸೌಂದರ್ಯದಿಂದಾಗಿ ಸುದ್ದಿಯಲ್ಲಿದ್ದಾಳೆ. 'ಕಂದು ಸುಂದರಿ' ಎಂದೇ ಕರೆಯಲ್ಪಡುವ ಈ ಹುಡುಗಿ ಮಹಾ ಕುಂಭದಲ್ಲಿ ಮಾಲೆಗಳನ್ನು ಮಾರುತ್ತಾಳೆ. ಯಾರೋ ಒಬ್ಬರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದಾದ ನಂತರ ಈ ವೀಡಿಯೊ 15 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ವೈರಲ್ ಆದ ತಕ್ಷಣ ಜನರು ಮೊನಾಲಿಸಾಳನ್ನು ಹುಡುಕಲು ಕುಂಭಕ್ಕೆ ಬರಲು ಪ್ರಾರಂಭಿಸಿದ್ದಾರೆ.
ವೈರಲ್ ಆದ ನಂತರ ಮೊನಾಲಿಸಾ ಕುಂಭಮೇಳದಲ್ಲಿ ಮಾಲೆಗಳನ್ನು ಮಾರಾಟ ಮಾಡುವುದು ಕಷ್ಟವಾಗಿದೆ. ಅವರ ವಿಡಿಯೋ ವೈರಲ್ ಆಗಿದ್ದರಿಂದ ಅವರ ಸುತ್ತಲೂ ಯಾವಾಗಲೂ ಜನರ ಗುಂಪು ಇರುವುದು ಕಂಡು ಬಂದಿದೆ. ಯೂಟ್ಯೂಬರ್‌ಗಳು ಅವರೊಂದಿಗೆ ವೀಡಿಯೊ ಮಾಡಲು ಪ್ರಾರಂಭಿಸಿದ್ದಾರೆ.
ಇದೆಲ್ಲದರಿಂದ ಬೇಸತ್ತ ಮೊನಾಲಿಸಾ ಕುಂಭ ತೊರೆದು ಝುಸಿ ಪ್ರದೇಶದಲ್ಲಿರುವ ತನ್ನ ಕುಟುಂಬದ ಬಳಿಗೆ ಬಂದಿದ್ದಾಳೆ. ಮೊನಾಲಿಸಾ ಅವರ ಕುಟುಂಬ ಇಲ್ಲಿ ನಿರ್ಮಿಸಲಾದ ಕೊಳೆಗೇರಿಯಲ್ಲಿ ವಾಸಿಸುತ್ತಿದೆ. ಮಾಹಿತಿಯ ಪ್ರಕಾರ, ತಂದೆ ಮೊನಾಲಿಸಾಳನ್ನು ಮನೆಗೆ ಕಳುಹಿಸಿದ್ದಾರೆ, ಆದರೆ ಈಕೆಯ ಇಬ್ಬರು ಸಹೋದರಿಯರು ಇನ್ನೂ ಕುಂಭದಲ್ಲಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದಾರೆ.
Log in to write reviews