ಹಳೆಯ ಬಟ್ಟೆಗಳನ್ನು ಎಸೆಯುವುದು ಅಥವಾ ದಾನ ಮಾಡುವುದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ. ಆದರೆ ಅನಿವಾರ್ಯವಾದರೆ, ಅದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳಿವೆ. ಈ ಸಲಹೆಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ಇದಲ್ಲದೇ ಮನೆ ಸ್ವಚ್ಛಗೊಳಿಸಲು ಹಳೆಯ ಬಟ್ಟೆ ಬಳಸುವುದು ಒಳ್ಳೆಯದಲ್ಲಎಂದು ವಾಸ್ತು ತಜ್ಞರು ಎಚ್ಚರಿಕೆ ನೀಡುತ್ತಾರೆ.
ಹೊಸ ಬಟ್ಟೆಗಳನ್ನು ದೀರ್ಘಕಾಲದವರೆಗೆ ಧರಿಸಿದ ನಂತರ ಅವು ಹಳೆಯದಾಗುತ್ತದೆ. ಇನ್ನೂ ಚಿಕ್ಕ ಮಕ್ಕಳಿಗೆ ಖರೀದಿಸಿದ ಬಟ್ಟೆಗಳು ಅವರು ದೊಡ್ಡವರಾಗುತ್ತಿದ್ದಂತೆ ಚಿಕ್ಕದಾಗುತ್ತಾ ಹೋಗುತ್ತದೆ. ನಂತರ ಇಂತಹ ಬಟ್ಟೆಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಕೆಲವರು ಹಳೆ ಬಟ್ಟೆಗಳನ್ನು ಬೀದಿಯಲ್ಲಿ ಅಥವಾ ಕಸದಲ್ಲಿ ಎಸೆಯುತ್ತಾರೆ. ಕೆಲವರು ತಮ್ಮ ಹಳೆಯ ಬಟ್ಟೆಗಳನ್ನು ಬೇರೆಯವರಿಗೆ ಕೊಡುತ್ತಾರೆ. ಇನ್ನೂ ಕೆಲವರು ಮನೆಯನ್ನು ಸ್ವಚ್ಛಗೊಳಿಸಲು ಹಳೆಯ ಬಟ್ಟೆಗಳನ್ನು ಸಹ ಬಳಸುತ್ತಾರೆ. ಇನ್ನೂ ಕೆಲವೆಡೆ ಹಳೆ ಸೀರೆ ಅಥವಾ ಬಟ್ಟೆ ಇರುವ ಪಾತ್ರೆ, ಬಕೆಟ್ ಖರೀದಿಸುವ ಟ್ರೆಂಡ್ ಇದೆ. ಆದರೆ ಹಳೆಯ ಬಟ್ಟೆಗಳನ್ನು ಬಿಸಾಡುವ ಈ ಅಭ್ಯಾಸ ಒಳ್ಳೆಯದೇ? ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ವಾಸ್ತು ಶಾಸ್ತ್ರದ ಪ್ರಕಾರ, ನೀವು ನಿಮ್ಮ ಬಟ್ಟೆಗಳನ್ನು ಎಸೆಯುವ, ಮಾರಾಟ ಮಾಡುವ ಅಥವಾ ಬೇರೆಯವರಿಗೆ ಕೊಡುವ ಅಭ್ಯಾಸ ಬಿಟ್ಟುಬಿಡಬೇಕು. ಆದರೂ ಕೂಡ ನಿಮಗೆ ಹಳೆ ಬಟ್ಟೆಗಳನ್ನು ಮನೆಯಲ್ಲಿ ಇಡಲು ಜಾಗವಿಲ್ಲ ಅಥವಾ ತೊಂದರೆಯಾಗುತ್ತಿದ್ದರೆ, ಅದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳಿವೆ. ಈ ಸಲಹೆಗಳನ್ನು ರೂಢಿಸಿಕೊಳ್ಳುವುದು ಅಗತ್ಯ.
ಹಳೆಯ ಬಟ್ಟೆಗಳನ್ನು ಕೊಡಲು ನೀವು ಯೋಚಿಸುತ್ತಿದ್ದರೆ ಅದನ್ನು ಮೊದಲು ಉಪ್ಪು ನೀರಿನಲ್ಲಿ ಚೆನ್ನಾಗಿ ನೆನೆಸಿಡಿ. ಮೂರು ಬಾರಿ ಬಟ್ಟೆಯನ್ನು ಸ್ವಚ್ಛಗೊಳಿಸಿ ನೀವು ದಾನ ಮಾಡಿದ್ರೆ ಬಹಳ ಒಳ್ಳೆಯದು. ನಿಮ್ಮ ಪ್ರಭೆ, ಶಕ್ತಿ ಬಟ್ಟೆಯಲ್ಲಿ ಇರದಂತೆ ನೀವು ನೋಡಿಕೊಳ್ಳಬೇಕಾಗುತ್ತದೆ. ಇದಲ್ಲದೇ ಬಟ್ಟೆಗಳನ್ನು ಕೊಡುವಾಗ ಉಚಿತವಾಗಿ ನೀಡಬೇಡಿ. ಬಟ್ಟೆ ಕೊಟ್ಟ ನಂತರ ಅವರಿಂದ ಕನಿಷ್ಠ 1 ರೂಪಾಯಿ ತೆಗೆದುಕೊಳ್ಳಿ. ಇದಲ್ಲದೇ ಬಟ್ಟೆ ಯಾರೂ ತೆಗೆದುಕೊಳ್ಳದಿದ್ದರೆ, ಅದನ್ನು ಕಸದ ತೊಟ್ಟಿಗೆ ಎಸೆಯಬೇಡಿ, ಬದಲಾಗಿ ನೀರಿಗೆ ಬಿಡಿ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
ಇನ್ನೂ ಕೆಲವರಿಗೆ ಹಳೆಯ ಬಟ್ಟೆಗಳನ್ನು ಮನೆಯನ್ನು ಸ್ವಚ್ಛಗೊಳಿಸಲು ಬಳಸುವ ಅಭ್ಯಾಸವಿದೆ. ಅಡುಗೆ ಕೋಣೆಯಲ್ಲಿ ಅಥವಾ ನೆಲ ಒರೆಸಲು ಕೆಲವರು ಹಳೆಯ ಬಟ್ಟೆಯನ್ನು ಬಳಸುತ್ತಾರೆ. ಆದರೆ ಇಂತಹ ಅಭ್ಯಾಸ ಮನೆಗೆ ಒಳ್ಳೆಯದಲ್ಲ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
Log in to write reviews