ಆಸ್ಪತ್ರೆಯ ಹಗರಣಗಳನ್ನು ಬಯಲು ಮಾಡಲು ರೋಗಿಯೊಬ್ಬ ಐಸಿಯುನಿಂದಲೇ ಓಡಿ ಹೋಗಿ, ನಾನು ಕೋಮಾದಲ್ಲಿದ್ದೇನೆ ಎಂದು ಸುಳ್ಳು ಹೇಳಿ ಚಿಕಿತ್ಸೆಯ ನೆಪದಲ್ಲಿ ನನ್ನ ಕುಟುಂಬದವರಿಂದ 1 ಲಕ್ಷ ರೂ. ಹಣ ಪಾವತಿ ಮಾಡುವಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದಾನೆ.
ಖಾಸಗಿ ಆಸ್ಪತ್ರೆಗಳು (Privet Hospitals) ಚಿಕಿತ್ಸೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆಯುವ ಮೂಲಕ ಬಡ ಜನರ ಜೀವವನ್ನು ಹಿಂಡುತ್ತವೆ ಎಂದು ಜನ ಮಾತಾಡಿಕೊಳ್ಳುವುದನ್ನು ಅಥವಾ ದೂರುಗಳು ಕೇಳಿ ಬರುವುದನ್ನು ನೋಡಿರುತ್ತೀರಿ, ಇಲ್ಲೊಂದು ಅಂತಹದ್ದೇ ಘಟನೆ ಬೆಳಕಿಗೆ ಬಂದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ನಡೆಯುವ ಹಗರಣಗಳನ್ನು ಎಲ್ಲರೆದುರಲ್ಲೂ ಬಯಲು ಮಾಡಲು ರೋಗಿಯೊಬ್ಬ ಐಸಿಯುನಿಂದಲೇ ಓಡಿ ಹೋಗಿದ್ದಾನೆ. ನಾನು ಕೋಮಾದಲ್ಲಿದ್ದೇನೆ ಎಂದು ಸುಳ್ಳು ಹೇಳಿ ಚಿಕಿತ್ಸೆಯ ನೆಪದಲ್ಲಿ ನನ್ನ ಕುಟುಂಬದವರಿಂದ 1 ಲಕ್ಷ ರೂ. ಹಣ ಪಾವತಿ ಮಾಡುವಂತೆ ಹೇಳಿದ್ದಾರೆ ಎಂದು ಆತ ಆರೋಪಿಸಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಮಧ್ಯಪ್ರದೇಶ ರತ್ಲಂನಲ್ಲಿ ನಡೆದಿದ್ದು, ನನ್ನನ್ನು ಐಸಿಯುನಲ್ಲಿ ಕೂಡಿ ಹಾಕಿ ನನ್ನ ಕುಟುಂಬದವರ ಬಳಿ 1 ಲಕ್ಷ ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ರೋಗಿಯೊಬ್ಬ ಖಾಸಗಿ ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾನೆ. ಐಸಿಯುನಲ್ಲಿದ್ದ ಆತ ಬ್ರೀಥಿಂಗ್ ಪೈಪ್ ಸಮೇತ ತಪ್ಪಿಸಿಕೊಂಡು ಹೋಗಿ, ಆಸ್ಪತ್ರೆಯ ಆವರಣದಲ್ಲಿ ನಿಂತು, ಅದೇ ಆಸ್ಪತ್ರೆಯ ವಿರುದ್ಧ ಪ್ರತಿಭಟಿಸಿದ್ದಾನೆ.
Log in to write reviews