ಧಾರವಾಡ: ಧಾರವಾಡ ಲೋಕಸಭಾ ವ್ಯಾಪ್ತಿಯ ಕುರುಬಗಟ್ಟಿ, ಮಂಗಳಗಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಇಂದು ಭರ್ಜರಿ ಪ್ರಚಾರ ನಡೆಸಿದರು. ಅಪಾರಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಅವರು ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಆರೋಗ್ಯ ಭಾಗ್ಯ ಘೋಷಿಸಿದೆ. ಸುಮಾರು 25 ಲಕ್ಷದವರೆಗೆ ಒಬ್ಬ ವ್ಯಕ್ತಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಇಂತಹ ಹಲವಾರು ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತರಲಿದೆ. ಬಡವರ ಬಗ್ಗೆ ಕಾಳಜಿಯಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು. ರಾಜಕೀಯ ತುಂಬಾ ಕಲುಷಿತಗೊಂಡಿದೆ. ಕೀಳುಮಟ್ಟಕ್ಕೆ ಇಳಿದು ರಾಜಕೀಯ ಮಾಡಲಾಗುತ್ತಿದೆ. ರಾಜಕೀಯವೆಂದರೆ ಸೇವಕನಾಗಿ ಜನರ ಸೇವೆ ಮಾಡುವುದು. ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಮಂಗಳಗಟ್ಟಿ ಗ್ರಾಮದ ಜಗದ್ಗುರು ರೇಣುಕಾಚಾರ್ಯ ಮಂಗಲ ಭವನ, ಶ್ರೀ ಬೀರಲಿಂಗೇಶ್ವರ ಮತ್ತು ಮರೆಮ್ಮದೇವಿ ದೇವಸ್ಥಾನಕ್ಕೆ" ಭೇಟಿ ನೀಡಿ ಆಶೀರ್ವಾದ ಪಡೆದರು. ಕುರುಬಗಟ್ಟಿ ಗ್ರಾಮದ "ಶ್ರೀ ಮಾರುತಿ ದೇವಸ್ಥಾನಕ್ಕೆ" ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ಕುಲಕರ್ಣಿ, ಈಶ್ವರ ಶಿವಳ್ಳಿ ಮತ್ತು ಪಕ್ಷದ ಹಿರಿಯರು, ಮಂಗಳಗಟ್ಟಿ ಗ್ರಾಮದ ಸಮಸ್ತ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.
ಜನ ಸೇವಕನಾಗಿ ದುಡಿಯಲು ಅವಕಾಶ ಕೊಡಿ; ವಿನೋದ ಅಸೂಟಿ ಭರ್ಜರಿ ಪ್ರಚಾರ
No Ads
Log in to write reviews