No Ads

ರಜತ್-ವಿನಯ್ ಮತ್ತೆ ಪೊಲೀಸ್ ವಶಕ್ಕೆ! ಮಹಜರಿಗೆ ಸಿದ್ಧತೆ

ಮನರಂಜನೆ 2025-03-25 17:21:55 181
post

ವಿನಯ್ ಹಾಗೂ ರಜತ್ (Vinay Rajath) ಇಬ್ಬರನ್ನು ಮತ್ತೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ (Police Arrest). ಮಹಜರು ಬಳಿಕ ಬಹುತೇಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಲಿದ್ದಾರೆ ಎನ್ನಲಾಗಿದೆ. ಸದ್ಯ ರೀಲ್ಸ್ (Reels) ಮಾಡಿದ ಸ್ಥಳಕ್ಕೆ ಆರೋಪಿಗಳನ್ನು ಪೊಲೀಸರು ಮಹಜರಿಗೆ ಕರೆದೊಯ್ಯಲಿದ್ದಾರೆ.

ನಾಗರಭಾವಿ ಅಕ್ಷಯ್ ಸ್ಟೋಡಿಯೋ ಮುಂದೆ ರೀಲ್ಸ್ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ರಜತ್‌. ಸ್ಟುಡಿಯೋ ದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿವಹಿಸಿದ್ವಿ. ಶೂಟಿಂಗ್ ಮುಗಿದ ಮೇಲೆ ಅಲ್ಲೇ ಇದ್ದ ಫೈಬರ್ ಮಚ್ಚನ್ನು ತೆಗೆದುಕೊಂಡು ಹೊರಬಂದು ರೀಲ್ಸ್ ಮಾಡಿದ್ದಿವಿ. ಸ್ಟುಡಿಯೋ ಹೊರಭಾಗದ ರಸ್ತೆಯಲ್ಲಿ ರೀಲ್ಸ್ ಮಾಡಿದ್ವಿ. ಬೇರೆ ಯಾವುದೇ ಉದ್ದೇಶ ಇರಲಿಲ್ಲ ಅಂತಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ನಾಗರಭಾವಿಯ ಅಕ್ಷಯ್ ಸ್ಟುಡಿಯೋಗೂ ಪೊಲೀಸರು ಕರೆದೊಯ್ಯಲಿದ್ದಾರೆ. ಸದ್ಯ ಪೊಲೀಸರ ಬಳಿ ಇರುವ ಮಚ್ಚು ಅದಲ್ಲ ಎಂದು ಆರೋಪಿಗಳು ಹೇಳಿಕೆ ಕೂಡ ನೀಡಿದ್ದಾರೆ ಎನ್ನಲಾಗಿದೆ. ಮಚ್ಚು ಸ್ಟುಡಿಯೋದಲ್ಲಿ ಮಿಸ್ ಮ್ಯಾಚ್ ಆಗಿದೆ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಟುಡಿಯೋಗೆ ಹೋಗಿ ಪರಿಶೀಲನೆಗೆ ಮುಂದಾಗಿದ್ದಾರೆ ಪೊಲೀಸರು. ಅಲ್ಲಿ ಮಚ್ಚು ಸಿಕ್ಕಿಲ್ಲ ಅಂದ್ರೆ ಬಹುತೇಕ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದು ವೇಳೆ ಮಚ್ಚು ಸಿಕ್ಕಿ ಅದು ರಿಯಲ್ ಮಚ್ಚು ಆದರೂ ಬಂಧನ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಬಂಧನದ ಭೀತಿಯಲ್ಲಿ ಇಬ್ಬರು ಬಿಗ್ ಬಾಸ್ ಸ್ಪರ್ಧಿಗಳು ಇದ್ದಾರೆ.

ರಜತ್ ಹಾಗೂ ವಿನಯ್ ಇತ್ತೀಚೆಗೆ ಲಾಂಗ್ ತೋರಿಸಿ ರೀಲ್ಸ್ ಮಾಡಿದ್ದರು. ಆ ಬಳಿಕ ಅವರನ್ನು ಬಂಧಿಸಲಾಯಿತು. ರಾತ್ರಿ ವೇಳೆಗೆ ಸ್ಟೇಷನ್ ಬೇಲ್ ನೀಡಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಈಗ ವಿಚಾರಣೆ ವೇಳೆ ಸಲ್ಲಿಕೆಯಾದ ಫೈಬರ್ ಮಚ್ಚಿನ ಮೇಲೆ ಅನುಮಾನ ಮೂಡಿದೆ. ಹೀಗಾಗಿ ವಿಡಿಯೋ ಮತ್ತು ವಶಕ್ಕೆ ಪಡೆದಿದ್ದ ಫೈಬರ್ ಮಚ್ಚಿನ ತಾಳೆ ನಡೆದಿದೆ.

ವಿಡಿಯೋದಲ್ಲಿ ಬಳಕೆಯಾದ ಮಚ್ಚು ಒರಿಜಿನಲ್ ಮಚ್ಚಿನ ರೀತಿಯೇ ಕಾಣಿಸುತ್ತಿದೆ. ಕೇಸ್​ನಿಂದ ತಪ್ಪಿಸಿಕೊಳ್ಳಲು ರಜತ್, ವಿನಯ್ ಫೈಬರ್ ಮಚ್ಚು ತಂದು ಕೊಟ್ರಾ ಎಂಬ ಅನುಮಾನ ಮೂಡಿದೆ. ಹೀಗಾಗಿ ತನಿಖೆ ಈಗ ಚುರುಕುಗೊಂಡಿದೆ.

ಇದಕ್ಕೂ ಮುಂಚೆ ಬೆಂಗಳೂರು ಬಸವೇಶ್ವರ ನಗರದ ಸಬ್​ ಇನ್​ಸ್ಪೆಕ್ಟರ್​ ಅವರು ಹಲವು ಗಂಟೆಗಳ ಕಾಲ ವಿನಯ್​ ಮತ್ತು ರಜತ್​ ಅವರನ್ನು ವಿಚಾರಣೆ ಮಾಡಿದ್ದರು. ಲಾಂಗ್​ ಬಳಸಿ ರೀಲ್ಸ್​ ಸಂಬಂಧಿಸಿದಂತೆ ಕೇಳಲಾಗಿತ್ತು. ಸಮಾಜಕ್ಕೆ ಯಾವ ಸಂದೇಶ ನೀಡಲು ಈ ರೀತಿ ಮಾಡಿದ್ದೀರಿ ಎಂದು ಕೇಳಿದ್ದರು. ಇದಕ್ಕೆ ವಿನಯ್​ ಮತ್ತು ರಜತ್​ ಅವರು, ‘ರಿಯಾಲಿಟಿ ಶೋ ಸಲುವಾಗಿ ರೀಲ್ಸ್​ ಮಾಡಿದ್ದೇವೆ’ ಎಂದು ಉತ್ತರ ನೀಡಿದ್ದರು.

 

 

No Ads
No Reviews
No Ads

Popular News

No Post Categories
Sidebar Banner
Sidebar Banner