ಬಿಜೆಪಿ ಹಾಗೂ ಜೆಡಿಎಸ್ (BJP- JDS) ನಾಯಕರು ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಶ್ರೀಗಳ ಆಶೀರ್ವಾದವನ್ನು ಪಡೆದಿದ್ದಾರೆ. ಇದೀಗ ಮೈತ್ರಿ ನಾಯಕರ ಈ ಭೇಟಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ (BJP- JDS) ನಾಯಕರು ಇಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಶ್ರೀಗಳ ಆಶೀರ್ವಾದವನ್ನು ಪಡೆದಿದ್ದಾರೆ. ಇದೀಗ ಮೈತ್ರಿ ನಾಯಕರ ಈ ಭೇಟಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಯವರು ಬಂದವರಿಗೆ ಹಾರ ಹಾಕ್ತಾರೆ ವಿಭೂತಿ ಇಡುತ್ತಾರೆ ಬಳಿಕ ಕಳುಹಿಸುತ್ತಾರೆ. ಒಕ್ಕಲಿಗರ ಸರ್ಕಾರ ಬಿಜೆಪಿಯವರೇ ಬೀಳಿಸಿದ್ದಲ್ವ..?. ಅದನ್ನ ಕೇಳುವ ಶಕ್ತಿ ಸ್ವಾಮೀಜಿ ಅವರಿಗೆ ಇದೆಯೋ ಇಲ್ವಾ ನನಗೆ ಗೊತ್ತಿಲ್ಲ ಎನ್ನುವ ಮೂಲಕ ಭೇಟಿ ಆದ ನಾಯಕರ ಬಳಿ ಅದನ್ನ ಕೇಳಲಿ ಎಂಬ ಅರ್ಥದಲ್ಲಿ ಸ್ವಾಮಿಜಿ ವಿರುದ್ಧವೇ ಡಿಸಿಎಂ ಗುಡುಗಿದರು ನಮ್ಮ ಕ್ಯಾಂಡಿಡೇಟ್ಸ್ ಸ್ವಾಮೀಜಿಗಳ ಬಳಿ ಹೋಗಿದ್ದರು. ಇವತ್ತು ಅವರು ಹೋಗಿದ್ದಾರೆ ಎನ್ನುತ್ತಲೇ ನಮ್ಮ ಒಕ್ಕಲಿಗ ಚೀಫ್ ಮಿನಿಸ್ಟರ್ ಇಳಿಸಿದ್ರಲ್ಲ ಅದನ್ನ ಕೇಳುವ ಶಕ್ತಿ ಸ್ವಾಮೀಜಿಗೆ ಇದ್ಯೋ ಇಲ್ವೋ ಗೊತ್ತಿಲ್ಲ ಎಂದು ಶ್ರೀಗಳ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಯಾವುದನ್ನೂ ಮುಚ್ಚಿಡೋದಕ್ಕೆ ಆಗಲ್ವಲ್ಲಾ..? ಎಂದು ನೇರನೇರವಾಗಿ ನಿರ್ಮಿಲಾನಂದ ಶ್ರೀಗಳನ್ನ ಡಿಕೆಶಿ ಟೀಕಿಸಿದರು.ಇದೇ ವೇಳೆ ಬಾಡೂಟ ಹಾಕಿಸಿದ್ದಾರೆಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಊಟ ಕೊಟ್ಟಿದ್ದಕ್ಕೆ ದೂರು ಕೊಡಿಸಿದ್ರು. 500 ಜನರಿಗೆ ನಾವು ಪರ್ಮಿಷನ್ ಪಡೆದಿದ್ವಿ. ಈಗ ಅವರೂ ಬಾಡೂಟ ಕೊಡೋಕೆ ಹೊರಟಿದ್ದಾರಂತೆ. ಬಿಡಿ ಈಗ ಅದೆಲ್ಲಾ ಯಾಕೆ ಮುಂದೆ ಮಾತನಾಡೋಣ. ನಾನು ಗಿಫ್ಟ್ ವೋಚರ್ ಹಂಚುತ್ತಿದ್ದೀನೋ ಇಲ್ವೋ. ನಾನು ಬಾಡೂಟ ಹಾಕ್ತಿದ್ದೇನೋ ಇಲ್ವೋ ಗೊತ್ತಿಲ್ಲ. ನಾವು ನಾಲ್ಕು ಕ್ಷೇತ್ರ ಗೆಲ್ತೇವೆ. ಹಾಸನ, ಮಂಡ್ಯ, ಬೆಂ.ಗ್ರಾಮಾಂತರ, ಕೋಲಾರ ಗೆದ್ದೇ ಗೆಲ್ತೇವೆ ನೋಡ್ತಾ ಇರಿ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿ ಒಕ್ಕಲಿಗ ನಾಯಕರ ಶಕ್ತಿಪ್ರದರ್ಶನ- ನಿರ್ಮಲಾನಂದ ಶ್ರೀಗಳ ಆಶೀರ್ವಾದ
No Ads
Log in to write reviews