ತನ್ನ ಗಂಡನ ಕೈ, ಕಾಲುಗಳನ್ನು ಕಟ್ಟಿ ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಲು ಹೆಂಡತಿ ಯತ್ನಿಸಿದ್ದಾಳೆ. ಬಿಜ್ನೋರ್ ನಗರದ ನಿವಾಸಿ ಮನನ್ ಜೈದಿ ಹಾಗೂ ಮೆಹರ್ ಜಹಾನ್ ಕಳೆದ ವರ್ಷ ನವೆಂಬರ್ 17 ರಂದು ಮದುವೆಯಾಗಿದ್ದರು. ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಷಮ್ಯ ಬೆಳೆದು ಒಂದೇ ಮನೆಯಲ್ಲಿ ಬೇರೆ ಬೇರೆಯಾಗಿ ಜೀವನ ಮಾಡುತ್ತಿದ್ದರು. ಈ ವೇಳೆ ಹೆಂಡತಿ ಮದ್ಯಪಾನ, ಧೂಮಪಾನದ ಚಟಕ್ಕೆ ಬಿದ್ದಿರುವುದು ಗಂಡ ತಿಳಿದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಬಿಜ್ನೋರ್ ನಗರದ ನಿವಾಸಿ ಮನನ್ ಜೈದಿ ಚಿತ್ರಹಿಂಸೆಗೆ ಒಳಗಾದ ಗಂಡ. ಈತನಿಗೆ ಟಾರ್ಚರ್ ಕೊಟ್ಟ ಹೆಂಡತಿ ಮೆಹರ್ ಜಹಾನ್. ಈ ಇಬ್ಬರು ದಂಪತಿಯಾಗಿದ್ದಾರೆ. ಹೆಂಡತಿಯ ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಗಂಡನಿಗೆ ಮಾದಕ ವಸ್ತುವನ್ನು ನೀಡಿ ಕೈ, ಕಾಲುಗಳನ್ನು ಕಟ್ಟಿ ಹಾಕುತ್ತಿದ್ದಳು. ಬಳಿಕ ಗಂಡನ ಮೈ ಮೇಲಿನ ಬಟ್ಟೆಗಳನ್ನ ಬಿಚ್ಚಿ ಎದೆ ಮೇಲೆ ಕುಳಿತು ಕತ್ತು ಹಿಸುಕುತ್ತಿದ್ದಳು. ಚಾಕುವಿನಿಂದ ಎಲ್ಲೆಂದರಲ್ಲಿ ಕುಯ್ಯುತ್ತಿದ್ದಳು. ಇದರಿಂದ ವ್ಯಕ್ತಿಯ ಖಾಸಗಿ ಅಂಗಗಳಿಗೂ ಗಾಯಗಳಾಗಿವೆ. ಹೆಂಡತಿ ಸಿಗರೇಟ್ ಸೇದುತ್ತ ವಿಕೃತಿ ಮೆರೆಯುತ್ತಾ ಗಂಡನಿಗೆ ಎಲ್ಲೆಂದರಲ್ಲಿ ಸಿಗರೇಟ್ನಿಂದ ಸುಡುತ್ತಿದ್ದಳು ಎಂದು ಹೇಳಲಾಗಿದೆ. ಬಿಜ್ನೋರ್ ನಗರದ ಠಾಣೆಯಲ್ಲಿ ಕೇಸ್ ದಾಖಲು ಆಗಿದ್ದು ಪೊಲೀಸರು ಮಹಿಳೆಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಗಂಡನ ಖಾಸಗಿ ಅಂಗಗಳನ್ನಾ ಸಿಗರೇಟ್ನಿಂದ ಸುಟ್ಟು ಹೇಗೆಲ್ಲ ಟಾರ್ಚರ್ ಕೊಡ್ತಿದ್ದಳು ಹೆಂಡತಿ?
No Ads
Log in to write reviews