ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಸಾಮಾನ್ಯ. ಸಾಕಷ್ಟು ಸಿದ್ಧತೆಗಳೊಂದಿಗೆ ಅವರು ನಟನೆಗೆ ಕಾಲಿಡುತ್ತಾರೆ. ಈಗ ಉಪೇಂದ್ರ ಅವರ ಮಗ ಆಯುಷ್ ಬಣ್ಣದ ಲೋಕಕ್ಕೆ ಕಾಲಿಡಲು ರೆಡಿ ಆಗಿದ್ದಾರೆ. ಉಪ್ಪಿ ಪುತ್ರನ ಹುಟ್ಟುಹಬ್ಬದ ದಿನದಂದು ಇಡೀ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದೆ. ಈ ವೇಳೆ ಆಯುಷ್ ಮೊದಲ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದೆ ಎಂದು ವರದಿ ಆಗಿದೆ.
ಉಪೇಂದ್ರ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಿರ್ದೇಶಕರಾಗಿ ಹೆಸರು ಮಾಡಿರೋ ಅವರು ಆ ಬಳಿಕ ಹೀರೋ ಆಗಿ ಮಿಂಚಿದರು. ಆಯುಷ್ ತಾಯಿ ಪ್ರಿಯಾಂಕಾ ಉಪೇಂದ್ರ ಕೂಡ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರು ತಮ್ಮ ಮಗನನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಲು ರೆಡಿ ಆಗಿದ್ದಾರೆ. ಈ ವಿಚಾರ ಉಪ್ಪಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾ ಆದಷ್ಟು ಬೇಗ ತೆರೆಗೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ.
ಯಶ್ ಸಿನಿಮಾ ‘ಮೊದಲ ಸಲ’ ಚಿತ್ರವನ್ನು ಪುರುಷೋತ್ತಮ್ ಡೈರೆಕ್ಷನ್ ಮಾಡಿದ್ದರು. ಈಗ ಅವರು ಆಯುಷ್ ಮೊದಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
Log in to write reviews