ಡಾಕಾ, ಡಿ.24 : ರೂಪುರ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬರೋಬ್ಬರಿ 5 ಬಿಲಿಯನ್ ಡಾಲರ್ ಹಣವನ್ನ ದುರುಪಯೋಗಪಡಿಸಿಕೊಂಡ ಆರೋಪ ಹಿನ್ನೆಲೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರ ವಿರೋಧಿ ಸಮಿತಿ ತನಿಖೆ ಆರಂಭಿಸಿದೆ. ಬಾಂಗ್ಲಾ ಮಾಜಿ ಪ್ರಧಾನಿ ಅವರ ಪುತ್ರ ಸಜೀಬ್ ವಾಝೆದ್ ಜಾಯ್ ಮತ್ತು ಆಕೆಯ ಸೋದರ ಸೊಸೆ ಮತ್ತು ಯುಕೆ ಖಜಾನೆ ಸಚಿವೆ ಟುಲಿಪ್ ಸಿದ್ದಿಕ್ ಅವರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ಶೇಕ್ ಹಸೀನಾ ಸಹೋದರಿ ರೆಹಾನಾ ಜೊತೆಗಿದ್ದಾರೆ, ಪುತ್ರ ಸಜೀಬ್ ವಾಝೆದ್ ಜಾಯ್ ಅಮೇರಿಕಾದಲ್ಲಿ ನೆಲೆಸಿದ್ದಾರೆ, ಸೊಸೆ ಟುಲಿಪ್ ಬ್ರಿಟಿಷ್ ಸಂಸತ್ತಿನ ಸದಸ್ಯರಾಗಿದ್ದಾರೆ. ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಬೃಹತ್ ಧರಣಿಯಿಂದಾಗಿ ತನ್ನ 16 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿದ್ದ ಶೇಖ್ ಹಸೀನಾ ದೇಶ ಬಿಟ್ಟು ಪಲಾನಯಗೈದು, ಆಗಸ್ಟ್ 5ರಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಿನ್ನೆಲೆ ಶೇಖ್ ಹಸೀನಾ ಅವರನ್ನ ಢಾಕಾಗೆ ವಾಪಸ್ ಕಳುಹಿಸಿ ಅಂತಾ ಭಾರತ ದೇಶಕ್ಕೆ ಬಾಂಗ್ಲಾದೇಶ ಮಧ್ಯಂತರ ಸರ್ಕಾರ ಪತ್ರ ಬರೆದಿತ್ತು. ರೂಪುರ್ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಲ್ಲಿನ ಭ್ರಷ್ಟಾಚಾರದ ಆರೋಪಗಳನ್ನು ನ್ಯಾಷನಲ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಎನ್‌ಡಿಎಂ) ಅಧ್ಯಕ್ಷ ಬಾಬಿ ಹಜ್ಜಾಜ್ ಅವರು ಬಯಲಿಗೆ ತಂದಿದ್ದಾರೆAದು ವರದಿಯಾಗಿದೆ. ಜೊತೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಕೃತ್ಯದ ಅಪರಾಧಗಳಿಗಾಗಿ ಶೇಖ್ ಹಸೀನಾ ಸೇರಿದಂತೆ ಹಲವಾರು ಮಂತ್ರಿಗಳು, ಸಲಹೆಗಾರರು, ಸೇನೆ ಮತ್ತು ನಾಗರಿಕ ಅಧಿಕಾರಿಗಳಿಗೆ ಬಾಂಗ್ಲಾದೇಶ ಮೂಲದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಿAದ ಬಂಧನ ವಾರಂಟ್ ಹೊರಡಿಸಲಾಗಿದೆ.
ಶೇಖ್ ಹಸೀನಾ ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರ..! ಬಾಂಗ್ಲಾದೇಶದಿAದ ತನಿಖೆ ಶುರು..!
No Ads
Log in to write reviews