ಬಳ್ಳಾರಿ: ಕಾಂಗ್ರೆಸ್ ಬಡವರ ಪರ, ರೈತರ ಪರ, ಕಾರ್ಮಿಕರ ಪರ, ಮಹಿಳೆಯರ ಪರ ಇರುವ ಪಕ್ಷ. ಅವರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಾ ಬಂದಿದೆ. ಆದರೆ ಬಿಜೆಪಿ ಏನೂ ಮಾಡಲಿಲ್ಲ. ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂದರು. ಬಳ್ಳಾರಿ ಜಿಲ್ಲೆಯ ಹೊಳೆ ಮತ್ಕೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಎರಡನೇ ದೇವರಾಜ ಅರಸು ಅವರ ರೀತಿ ಸಿದ್ದರಾಮಯ್ಯ ಅವರು ಬಡವರಿಗೆ ನೆರವಾಗುತ್ತಿದ್ದಾರೆ. ಕರ್ನಾಟಕದ ಭಾಗ್ಯದ ಬಾಗಿಲನ್ನು ಅವರು ತೆರೆದಿದ್ದಾರೆ. ನವ ಸಮಾಜ ಕಟ್ಟಿ. ಸರ್ವಜನಾಂಗದ ಶಾಂತಿ ತೋಟ ನಿರ್ಮಿಸಿದ್ದಾರೆ. ಎಲ್ಲಾ ವರ್ಗದ ಜನರಿಗೆ ಯೋಜನೆ ನೀಡಿದ್ದಾರೆ ಎಂದರು. ಅನ್ನಭಾಗ್ಯ, ಏತ ನೀರಾವರಿ, ಕೃಷಿಹೊಂಡ ಹೀಗೆ ಒಂದಲ್ಲ ಎರಡಲ್ಲ. ಹಲವಾರು ಯೋಜನೆ ನೀಡಿದ್ದಾರೆ. ಸರ್ಕಾರ ಐದು ಗ್ಯಾರಂಟಿ ನೀಡಿದೆ. ಆದ್ದರಿಂದ ಕಾಂಗ್ರೆಸ್‌ಗೆ ಬೆಂಬಲ ನೀಡಿದೆ. ಬಡವರಿಗೆ ಆಸರೆಯಾಗಿ ನಿಂತಿರುವ ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು. ಬಿಜೆಪಿಯವರು ಓಟು ಕೇಳಲು ಮಾತ್ರ ಜನರ ಬಳಿಗೆ ಬರುತ್ತಾರೆ. ನಮ್ಮ ಕ್ಷೇತ್ರದ ಜನರ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಲಿಲ್ಲ. ಬರಗಾಲದಲ್ಲಿ ನೆರವಿಗೆ ಬರಲಿಲ್ಲ. ಜನರಿಗೆ ಅನ್ಯಾಯವಾದಾಗ ಮಾತನಾಡಲಿಲ್ಲ. ಅತಿ ಹೆಚ್ಚು ತೆರಿಗೆ ಕಟ್ಟಿದರೂ ನಮಗೆ ಪರಿಹಾರ ನೀಡಲಿಲ್ಲ ಎಂದು ಆರೋಪಿಸಿದರು. ಬಳ್ಳಾರಿ ಜಿಲ್ಲೆಯ ಜನರ ಸಮಸ್ಯೆಗಳನ್ನು ದೆಹಲಿಯಲ್ಲಿ ಎತ್ತಿ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ಆದ್ದರಿಂದ ಮತ ನೀಡಿ. ಶಾಸಕನಾಗಿ ಅಪಾರ ಅನುಭವ ಇದೆ. ಸಂವಿಧಾನ ಉಳಿಸಲು ಕಾಂಗ್ರೆಸ್ ಬೆಂಬಲಿಸಿ ಎಂದರು. ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ದೆಹಲಿಯಲ್ಲಿ ಬಳ್ಳಾರಿಯ ಧ್ವನಿಯಾಗುತ್ತೇನೆ; ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪ್ರಚಾರ
No Ads
Log in to write reviews