ತನ್ನ ಹೆತ್ತಮ್ಮನ ಖುಷಿಗಾಗಿ ಆಕೆಗೆ ಎರಡನೇ ಮದುವೆಯನ್ನು ಮಾಡಿಸಿದ ಮಗ. 18 ವರ್ಷಗಳ ಕಾಲ ನಮಗಾಗಿ ನಿಸ್ವಾರ್ಥದಿಂದ ಬದುಕಿದ ನನ್ನ ತಾಯಿಗೂ ಪ್ರೀತಿ ಜೀವನದಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎಂದು ಈ ಯುವಕ ಒಂಟಿಯಾಗಿದ್ದ ತನ್ನ ತಾಯಿಗೆ ಮರು ಮದುವೆಯನ್ನು ಮಾಡಿಸಿದ್ದಾನೆ.
ಪಾಕಿಸ್ತಾನದ ಯುವಕ ಅಬ್ದುಲ್ ಅಹದ್ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸುವ ಮೂಲಕ ಸುದ್ದಿಯಲ್ಲಿದ್ದಾನೆ. ಕಳೆದ 18 ವರ್ಷಗಳಿಂದ ನನ್ನ ಯೋಗ್ಯತೆಗೆ ಅನುಗುಣವಾಗಿ ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಕೂಡಾ ಸ್ವಂತ ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎನ್ನುತ್ತಾ ತನ್ನ ತಾಯಿಯ ಖುಷಿಗಾಗಿ ಅಹದ್ ಅಮ್ಮನಿಗೆ ಎರಡನೇ ಮದುವೆಯನ್ನು ಮಾಡಿಸಿದ್ದಾನೆ.
ಈ ಹೃದಯಸ್ಪರ್ಶಿ ಕಥೆಯನ್ನು ಅಹದ್ (muserft.ahad) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಹದ್ ತಾನೇ ಮುಂದೆ ನಿಂತು ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಿದ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
Log in to write reviews