No Ads

ಕಂಡವ್ರ ಹೆಂಡ್ತಿಯರ ಸೇವೆಯಲ್ಲಿ ಸದಾ ಇರ್ತಾರಂತೆ ಈ ನಕ್ಷತ್ರದವರು ..!

ಮನರಂಜನೆ 2025-05-13 12:49:14 664
post

ಶತಭಿಷಾ ನಕ್ಷತ್ರ  ; ಈ ನಕ್ಷತ್ರದವರು ತಮ್ಮ ಪತ್ನಿಗೆ ಉಪಕಾರಿಯಾಗಿ ಇರುವುದಕ್ಕಿಂತ ಪರರ ಪತ್ನಿಯ ಸೇವೆ ಹೆಚ್ಚು ಮಾಡುತ್ತಾರೆ. ಇದು ವೈವಾಹಿಕ ಜೀವನಕ್ಕೆ ಕಂಟಕವಾಗಿರುತ್ತದೆ. ಈ ನಕ್ಷತ್ರದವರು ಈ ಗುಣ ಮಾತ್ರವಲ್ಲದೆ. ಇನ್ನು ಅನೇಕ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. 

ಜಲಗಳಿಗೆ ಒಡೆಯನಾದ ವರುಣನನ್ನು ಅಧಿಪತಿಯಾಗಿ ಇರುವ ನಕ್ಷತ್ರ ಶತಭಿಷಾ ಅಥವಾ ಶತತಾರಾ . ಇಪ್ಪತ್ತೇಳನೇ ನಕ್ಷತ್ರವಾದ ಇದು ರಾಕ್ಷಸ ಗಣಕ್ಕೆ ಸೇರಿದ್ದಾಗಿದೆ. ವಾತ ಪ್ರಕೃತಿಯ ನಕ್ಷತ್ರವಿದು ಆದಿ ನಾಡಿಯಾಗಿರಲಿದೆ. ಗೋ ಸಾ ಸಿ‌ ಸೂ ಎಂಬ ನಾಮಾಕ್ಷರಗಳಿಂದ ಇರುವ ಇದು ಮಂಡಲಾಕಾರದಲ್ಲಿ ಕಾಣಿಸುವ ನೂರು‌ ನಕ್ಷತ್ರಗಳ ಸಮೂಹ. ಈ ನಕ್ಷತ್ರ ಪೂರ್ಣ ಪಾದವೂ ಕುಂಭ ರಾಶಿಯಲ್ಲಿಯೇ (Aquarius zodiac sign) ಇರಲಿದೆ.

ಇಂತಹ ವಿಶೇಷಣಗಳಿಂದ ಕೂಡಿರುವ ನಕ್ಷತ್ರದಲ್ಲಿ ಜನಿಸಿದವರು ಹೇಗೆಲ್ಲ ಇರುತ್ತಾರೆ-

 

ಹೇಳಬೇಕಾದ ಮಾತನ್ನು ಸರಿಯಾಗಿ ಹೇಳುವರು ಹಾಗು ಕೇಳುಗನಿಗೆ ಚೆನ್ನಾಗಿ ಅರ್ಥವಾಗುವಂತೆ ಹೇಳುವರು. ವಿಷಯದಲ್ಲಿ ಹಾಗೂ ಮಾತಿನಲ್ಲಿ ಸ್ಪಷ್ಟತೆ ಕಾಣಬಹುದು.

ಇವರಿಗೆ ಆಗಾಗ ಕಷ್ಟಗಳನ್ನು ಎದುರಿಸಬೇಕಾದ ಸ್ಥಿತಿ ಬರಲಿದೆ. ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡು, ಅನಂತರ ದುಃಖವಾಗಲಿದೆ.

ಈ ನಕ್ಷತ್ರದಲ್ಲಿ ಜನಿಸಿದವರು ಶತ್ರುಗಳನ್ನು ಯಾವುದೇ ಸಮರವಿಲ್ಲದೇ ಕೇವಲ ಯುಕ್ತಿಯಿಂದ ಗೆಲ್ಲುವರು. ಶತ್ರುಗಳೇ ಇಲ್ಲದಂತೆ ಇವರು ಮಾಡಿಕೊಳ್ಳುವರು.

ಯಾವ ಕಾರ್ಯವನ್ನು ಮಾಡುವಾಗಲೂ ಅತಿಯಾಗಿ ಯೋಚಿಸಿ ಕಾರ್ಯವನ್ನು ಮಾಡಲಾರರು. ಆರಂಭ ಮಾಡಿ ಅನಂತರ ಆಲೋಚನೆ ಸಮಯಕ್ಕೆ ಬೇಕಾದ ರೀತಿಯಲ್ಲಿ ಕಾರ್ಯವನ್ನು ಮಾಡುವರು.

ಈ ನಕ್ಷತ್ರದ ಅಧಿಪತಿ ಜಲದೇವತೆಯಾದ ಕಾರಣ ತಂಪು ಅಧಿಕವಾಗಿ ಬಾಧಿಸಲಿದೆ. ತಂಪಿನ ವಾತಾವರಣದಲ್ಲಿ ಇರಲು ಅಂತಹ ಪ್ರದೇಶದಲ್ಲಿ ವಾಸ ಕಷ್ಟವಾಗುವುದು. ಹೆಚ್ಚು ಬಿಸಿಲಿರುವ ಪ್ರದೇಶದಲ್ಲಿ ಉಷ್ಣ ಸ್ಥಳದಲ್ಲಿ ಆರಾಮಾಗಿ ಇರುವರು. ಕಫದ ರೋಗವೂ ಬರಲು ಸಾಧ್ಯವಿದೆ.

ಈ ನಕ್ಷತ್ರದಲ್ಲಿ ಜನಿಸಿದವೆಇಗೆ ಹೊಂದಾಣಿಕೆ ಸ್ವಭಾವ ಕಷ್ಟ. ಇರುವುದು ಇರುವಂತೆ ಹೇಳಿ ಎಲ್ಲರ ಜೊತೆ ನಿಷ್ಠುರತೆಯನ್ನು ಬೆಳೆಸಿಕೊಳ್ಳುವರು. ಇವರ ಮನಸ್ಸ್ಥಿತಿಗೆ ಇತರರು ಹೊಂದಿಕೊಳ್ಳುವುದು ದುಸ್ಸಾಧ್ಯ ಎನಿಸುವುದು.

ಇವರು ತಮ್ಮ ಪತ್ನಿಗೆ ಉಪಕಾರಿಯಾಗಿ ಇರುವುದಕ್ಕಿಂತ ಪರರ ಪತ್ನಿಯ ಸೇವೆಯಲ್ಲಿ, ಅವರಿಗೆ ಅನುಕೂಲವಾಗಿ ಇರಲು ಆಸಕ್ತಿ ಹೆಚ್ಚು. ಅವರ ಪ್ರೀತಿಯನ್ನು ಗಳಿಸಲು ಇಚ್ಛೆ ಇದೆ.

ಹೇರಳವಾದ ಸಂಪತ್ತು ಇವರ ಬಳಿ ಇದ್ದರು ಕೈ ಎತ್ತಿ ಕೊಡುವ ಸ್ವಭಾವ ಇರದು. ಎಲ್ಲವನ್ನೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವರು. ಜಿಪುಣತನವೇ ಅಧಿಕವಾಗಿ ಇರಲಿದೆ. ಕೊಟ್ಟರೂ ಅಲ್ಪವನ್ನು ಮಾತ್ರ ಕೊಡುವರು.

ಹೀಗೆ ಅನೇಕ ಶುಭಾಶುಭ ಫಲವನ್ನು ಇಟ್ಟುಕೊಂಡ ನಕ್ಷತ್ರ ಇದು. ಈ ನಕ್ಷತ್ರದಲ್ಲಿ ಶುಭ ಗ್ರಹರು ಇದ್ದಾಗ ಅಥವಾ ಶುಭ ಗ್ರಹರ ದೃಷ್ಟಿ ಜನಿಸುವಾಗ ಇದ್ದರೆ ಆಗ ಹುಟ್ಟಿದವನು ಎಲ್ಲ ಶುಭ ಗುಣಗಳಿಂದ ಪೂರ್ಣವಾಗಿರುವರು.

 

 

No Ads
No Reviews
No Ads

Popular News

No Post Categories
Sidebar Banner
Sidebar Banner