ಕ್ಯಾನ್ಸರ್ ಎಂಬ ಘಾತಕ ರೋಗಕ್ಕೆ ಸಂಪೂರ್ಣ ಗುಣಪಡಿಸುವ ಔಷಧಿ ಹಾಗೂ ಲಸಿಕೆಗಾಗಿ ಇಡೀ ವಿಶ್ವವೇ ನೂರಾರು ವರ್ಷಗಳಿಂದ ಸಂಶೋಧನೆ ನಡೆಸಿವೆ ಇಷ್ಟು ವರ್ಷಗಳ ಕಾಲ ಇಡೀ ಜಗತ್ತೇ ಈ ಒಂದು ಮಹಾಮಾರಿಯಿಂದ ಕಾಪಾಡುವ ಔಷಧಿಗಾಗಿ ಕಾದು ಕುಳಿತಿತ್ತು. ಈ ಮಹಾಮಾರಿಯಿಂದಾಗಿ ವರ್ಷಕ್ಕೆ ಇಡೀ ವಿಶ್ವದಲ್ಲಿ 1 ಕೋಟಿಗೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ. ಸದ್ಯ ಈಗ ರಾಮಬಾಣದಂತೆ ಈ ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅದರಲ್ಲೂ ಭಾರತದ ಸ್ನೇಹಿ ರಾಷ್ಟ್ರ ಈ ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದರಿಂದ ಭಾರತಕ್ಕೂ ಈ ವ್ಯಾಕ್ಸಿನ್ ಸುಲಭವಾಗಿ ದೊರೆಯಲಿದೆ. ಕಾರಣ ಕೋವಿಡ್ ಸಮಯದಲ್ಲಿ ರಷ್ಯಾ ಭಾರತಕ್ಕೆ ಸ್ಪುಟ್ನಿಕ್ ಲಸಿಕೆ ನೀಡುವ ಮೂಲಕ ಸಹಾಯ ನೀಡಿತ್ತು. ಇದೇ ಕಾರಣದಿಂದ ಈ ಒಂದು ಲಸಿಕೆ ಭಾರತಕ್ಕೆ ಅತಿಬೇಗ ಬಂದು ತಲುಪಲಿದೆ ಎಂದು ಹೇಳಲಾಗುತ್ತದೆ. ಕ್ಯಾನ್ಸರ್ ಗುಣಪಡಿಸುವ ಈ ವ್ಯಾಕ್ಸಿನ್ನ್ನು 2025ರ ಪ್ರಾರಂಭದಲ್ಲಿ ಉಚಿತವಾಗಿ ಹಂಚುತ್ತೇವೆ ಎಂದು ರಷ್ಯಾ ಹೇಳಿದೆ. ಕ್ಯಾನ್ಸರ್ ಬರದಂತೆ ತಡೆಯಲು ಈ ಲಸಿಕೆ ನೀಡಲ್ಲ, ಬದಲಿಗೆ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಿಗೆ ಈ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ರಷ್ಯಾದ ಆರೋಗ್ಯ ಇಲಾಖೆ ರೇಡಿಯೋಲಾಜಿ ಮೆಡಿಕಲ್ ರಿಸರ್ಚ್ನ ಜನರಲ್ ಡೈರೆಕ್ಟರ್ ಆ್ಯಂಡ್ರೆ ಕಪ್ರಿನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಜಗತ್ತಿನಲ್ಲಿ ಅನೇಕ ಮಾದರಿಯ ಕ್ಯಾನ್ಸರ್ಗಳಿವೆ. ಬ್ಲಡ್ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಲೀವರ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸೇರಿದಂತೆ ಅನೇಕ ಕ್ಯಾನ್ಸರ್ನಿಂದ ಜಗತ್ತು ತತ್ತರಿಸಿದೆ. ಇಲ್ಲಿಯವರೆಗೆ ಸರ್ವಿಕಲ್ ಕ್ಯಾನ್ಸರ್ ಮತ್ತು ಹೆಪಟೈಟೀಸ್ ಬಿಗೆ ಮಾತ್ರವೇ ವ್ಯಾಕ್ಸಿನ್ ಲಭ್ಯವಿದ್ದು. ಉಳಿದ ಕ್ಯಾನ್ಸರ್ಗಳಿಗೆ ರಷ್ಯಾದ ಈ ವ್ಯಾಕ್ಸಿನ್ ರಾಮಬಾಣದಂತೆ ಕೆಲಸ ಮಾಡಲಿದೆ.
ಜಗತ್ತಿನ ಮಹಾಮಾರಿ ಕ್ಯಾನ್ಸರ್ ಗೂ ಬಂತು ವ್ಯಾಕ್ಸಿನ್
No Ads
Log in to write reviews