ಬಸವೇಶ್ವರ ನಗರ ಕಮಲಾನಗರದಲ್ಲಿ ಒಂದು ವರ್ಷದ ಹಿಂದೆ ಬಾಡಿಗೆಗೆ ಇದ್ದ ಯುವತಿ ಕುಟುಂಬ.ಈ ವೇಳೆ ಬಾಡಿಗೆಗೆ ಇದ್ದ 21 ವರ್ಷದ ಯುವತಿಯನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದ ಮಾಲೀಕ ಶ್ರೀಕಾಂತ್. ಪ್ರೀತಿ ಮಾಡೋದಿಲ್ಲ ಎಂದು ಶ್ರೀಕಾಂತ್ ಗೆ ಹೇಳಿದ್ದ ವಿದ್ಯಾರ್ಥಿನಿ , ಅಲ್ಲದೆ ಶ್ರೀಕಾಂತ್ ಪತ್ನಿಗೂ ಪತಿಯ ಕಾಟದ ಬಗ್ಗೆ ಹೇಳಿದ್ದ ಯುವತಿ. ಆತನ ಕಾಟ ತಾಳಲಾರದೆ ತನ್ನ ಮನೆ ಕಮಲಾನಗರದಿಂದ ಕುರುಬರಹಳ್ಳಿಗೆ ಬದಲಿಸಿದ್ದ ಯುವತಿ. ಆದರೆ ಕಳೆದ ಮೂರು ತಿಂಗಳಿಂದ ಮತ್ತೆ ಶ್ರೀಕಾಂತ್ ಕಿರುಕುಳ ಶುರುವಾಗಿತ್ತು. ಆಕೆಯನ್ನ ಹಿಂಬಾಲಿಸೋಕೆ ಶುರು ಮಾಡಿದ್ದ ಪಾಗಲ್ ಪ್ರೇಮಿ. ಕಾಲೇಜು ಕ್ಯಾಂಪಸ್ ವರೆಗೂ ಫಾಲೋ ಮಾಡಿಕೊಂಡು ಬಂದಿದ್ದ ಓನರ್ ಅಂಕಲ್.
ಏ.8 ರಂದು ಸ್ನೇಹಿತನ ಜೊತೆಗೆ ದೇವೇಗೌಡ ಪೆಟ್ರೊಲ್ ಬಂಕ್ ಬಳಿಯ ಬಸ್ ಸ್ಟಾಪ್ ಬಳಿ ಕುಳಿತಿದ್ದ ಯುವತಿ. ಈ ವೇಳೆ ಬಸ್ ಸ್ಟಾಪ್ ಬಳಿ ಬಂದಿದ್ದ ಆರೋಪಿ ಶ್ರೀಕಾಂತ್, 'ಓ ನೀನು ಇವನನ್ನ ಪ್ರೀತಿಸುತ್ತಿದ್ದಿಯಾ" "ಅದಕ್ಕೆ ನನ್ನ ಲವ್ ಮಾಡಲ್ಲ ಅಂದಿದ್ದಾ ನೀನು" ಎಂದು ಹುಚ್ಚಾಟ ಆಡಿ ಯುವತಿ ಹಾಗೂ ಸ್ನೇಹಿತನ ಕಪಾಳಕ್ಕೆ ಹೊಡೆದಿದ್ದ . ಅಲ್ಲದೆ ಚಾಕುವಿನಿಂದ ಇರಿದು ಇಬ್ಬರ ಮೇಲೆ ಹಲ್ಲೆ ಮಾಡಿದ್ದ .ಮುಖಕ್ಕೆ ಚಾಕುವಿನಿಂದ ಕೊಯ್ದು ಅಟ್ಟಹಾಸ ಮೆರೆದಿದ್ದ ಅದೃಷ್ಟವಶಾತ್ ಸ್ಥಳೀಯರ ನೆರವಿನಿಂದ ಇಬ್ಬರು ಕೂಡ ಪ್ರಾಣಾಪಾಯದಿಂದ ಪಾರುಶ್ರೀಕಾಂತ್ (45) ಬನಶಂಕರಿ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿ.
Log in to write reviews