ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದ ಒಂದೇ ಒಂದು ರೀಲ್ಸ್ನಿಂದ ಬಿಗ್ಬಾಸ್ ಮಾಜಿ ಸ್ಪರ್ಧಿಗಳಿಗೆ ಸಂಕಷ್ಟ ಎದುರಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ರಜತ್ ಕಿಶನ್ ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದರು. ಹೀಗಾಗಿ ಮಾರ್ಚ್ 25ರಂದು ಬಸವೇಶ್ವರನಗರ ಪೊಲೀಸರು ವಿನಯ್ ಗೌಡ ಹಾಗೂ ರಜತ್ ಕಿಶನ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಆದರೆ ಇದೀಗ ವಿನಯ್ ಗೌಡ ಹಾಗೂ ರಜತ್ ಕಿಶನ್ ಪೊಲೀಸರ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾರೆ. ರೀಲ್ಸ್ನಲ್ಲಿ ಬಳಸಿದ ಅಸಲಿ ಮಚ್ಚನ್ನು ಬಿಟ್ಟು ಪೊಲೀಸರಿಗೆ ಫೈಬರ್ ಮಚ್ಚು ನೀಡಿ ಯಾಮಾರಿಸಿದ್ದರು ಎನ್ನಲಾಗಿತ್ತು. ಇದೀಗ ರಜತ್ ಹಾಗೂ ವಿನಯ್ ಪೊಲೀಸರ ಮುಂದೆ ಮಚ್ಚಿನ ರಹಸ್ಯವನ್ನು ಬಾಯ್ಬಿಟ್ಟಿದ್ದಾರಂತೆ.
2024, ಜೂನ್ 8 ರಂದು ರೇಣುಕಾಸ್ವಾಮಿಯ ಮೃತದೇಹವನ್ನು ಬಿಸಾಡಿದ್ದ ರಾಜಕಾಲುವೆಯ ಅದೇ ಜಾಗದಲ್ಲೇ ರಜತ್ ಹಾಗೂ ವಿನಯ್ ಮಚ್ಚು ಬಿಸಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ರೀಲ್ಸ್ನಲ್ಲಿ ಬಳಸಿದ್ದ ಮಚ್ಚನ್ನೂ ಸುಮ್ಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ದಾಗಿ ತಿಳಿಸಿದ್ದಾರಂತೆ.
ಹೀಗಾಗಿ ವಿನಯ್, ರಜತ್ರನ್ನು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಕರೆದುಕೊಂಡು ಹೋಗಿ ಸ್ಥಳ ಮಹಜರ್ ನಡೆಸಿದ್ದಾರೆ. ಪೊಲೀಸರ ಮಹಜರ್ ವೇಳೆಯೂ ರೀಲ್ಸ್ನಲ್ಲಿ ಬಳಸಿದ್ದ ಮಚ್ಚು ಪತ್ತೆಯಾಗಿರಲಿಲ್ಲ. ಆರೋಪಿಗಳು ಪೊಲೀಸರಿಗೆ ಮೊದಲು ನೀಡಿದ್ದ ಫೈಬರ್ ಮಚ್ಚನ್ನ ಎಫ್.ಎಸ್.ಎಲ್ ಗೆ ರವಾನೆ ಮಾಡಿದ್ದಾರೆ. ಎಫ್.ಎಸ್.ಎಲ್ ವರದಿ ಬರುತ್ತಿದ್ದಂತೆ ಆರ್ಮ್ಸ್ ಆಕ್ಟ್ ಜೊತೆಗೆ ಸಾಕ್ಷನಾಶ ಸೆಕ್ಷನ್ ಅಡಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ.
Log in to write reviews