No Ads

ಮದುವೆಯಾಗಿ ಗಂಡನ ಮನೆಗೆ ಬಂದ ಮರುದಿನವೇ ಹಣ ಚಿನ್ನಾಭರಣ, ದೋಚಿ ಪತ್ನಿ ಪರಾರಿ

India 2025-05-19 15:04:01 142
post

ಎರಡು ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವವಿವಾಹಿತೆಯನ್ನು ಗಂಡನ ಮನೆಗೆ ಕರೆತರಲಾಗಿದೆ. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಪತ್ನಿಯೂ ಕಾಣೆಯಾಗಿದ್ದು, ಸಾವಿರಾರು ಕನಸು ಕಂಡಿದ್ದ ಪತಿಯೂ ಆಘಾತಕ್ಕೆ ಒಳಗಾಗಿದ್ದಾನೆ.

ರಾಮ್ ಪ್ರತಾಪ್ ಎನ್ನುವ ವ್ಯಕ್ತಿಯೂ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಹಾರಾಜ್‌ಗಂಜ್‌ನ ಹಳ್ಳಿಯ ಯುವತಿಯ ಜೊತೆಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಆದರೆ ಪತ್ನಿಯೂ ಗಂಡನ ಮನೆಗೆ ಮೇ 10 ರಂದು ಬಂದಿದ್ದು ಸಾವಿರಾರು ಕನಸು ಕಂಡಿದ್ದ ರಾಮ್ ಪ್ರತಾಪ್ ಗೆ ಆಘಾತವೊಂದು ಕಾದಿದೆ. ಹೌದು, ಮರುದಿನ ಅಂದರೆ ಮೇ 11 ರ ಬೆಳಿಗ್ಗೆ ತನ್ನ ಪತ್ನಿ ಎಲ್ಲಿಯೂ ಕಾಣಿಸಲಿಲ್ಲ. ಹೀಗಾಗಿ ರಾಮ್ ಪ್ರತಾಪ್ ಪತ್ನಿಯನ್ನು ಹುಡುಕಾಡಲು ಪ್ರಾರಂಭಿಸಿದ್ದಾನೆ.

ಅಷ್ಟೇ ಅಲ್ಲದೇ ಮುಂದೆ ನಿಂತು ಮದುವೆ ಮಾಡಿಸಿದ್ದ ಮಲ್ಲವಾನ್ ಪೊಲೀಸ್ ಠಾಣೆಯಲ್ಲಿ ತನ್ನ ಮದುವೆಗೆ ಮಧ್ಯಸ್ಥಿಕೆ ವಹಿಸಿದ್ದ ಉಂಚಟಿಲಾದ ದಿನೇಶ್, ಬಾಘ್ರೈನ ಶ್ಯಾಮು ಮತ್ತು ಮಜ್ಹಿಯಾದ ಕುಲದೀಪ್ ಅವರಿಗೆ ತನ್ನ ಪತ್ನಿ ಕಾಣೆಯಾಗಿರುವುದನ್ನು ತಿಳಿಸಿದ್ದಾನೆ. ಆದರೆ ಮದುವೆ ಮಾಡಿಸಿಕೊಟ್ಟ ಈ ವ್ಯಕ್ತಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಈ ಮೂವರಿಂದ ತನಗೇನೂ ಸಹಾಯವಾಗದು ಎಂದು ತಿಳಿದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ 13000 ರೂಪಾಯಿ ಕೂಡ ಕಾಣುತ್ತಿಲ್ಲ , ಹೆಂಡತಿಯೂ ಕಾಣುತ್ತಿಲ್ಲ ಎಂದು ಈ ಬಗ್ಗೆ ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner