26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವವ್ವೂರ್ ರಾಣಾ ಕೊನೆಗೂ ಭಾರತಕ್ಕೆ ಕರೆತರಲಾಗಿದೆ. 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯ ರೂವಾರಿಯೇ ಈ ತಹವ್ವೂರ್ ರಾಣಾ. ಭಾರತದ ಮೋಸ್ಟ್ ವಾಂಟೆಡ್ ಈ ಉಗ್ರ, ಪಾಕಿಸ್ತಾನದಿಂದ ಕೆನಡಾಗೆ ಹೋಗಲಿ ನೆಲೆಸಿದ್ದ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಅಮೆರಿಕಾ ಆತನನ್ನು ಬಂಧಿಸಿತ್ತು. ಸದ್ಯ ಭಾರತ ಸರ್ಕಾರದ ಮನವಿ ಹಾಗೂ ದ್ವಿಪಕ್ಷೀಯ ಮಾತುಕತೆಗಳ ಫಲವಾಗಿ ಅಮೆರಿಕಾ ರಾಣಾನನ್ನು ಗಡಿಪಾರು ಮಾಡಿದೆ. ಈ ಹಿನ್ನೆಲೆ ಈತನನ್ನು ಭಾರತಕ್ಕೆ ಶಿಫ್ಟ್ ಮಾಡಲಾಗಿದೆ. ಅಮೆರಿಕಾದ ಸುಪ್ರೀಂಕೋರ್ಟ್ ಅನುಮತಿ ಪಡೆದುಕೊಂಡು ಈ ನೀಚನನ್ನು ಭಾರತಕ್ಕೆ ಎಳೆದುಕೊಂಡು ಬರಲಾಗಿದೆ.
ಹಫೀಸ್ ಸಯೀದ್ನ ಲಷ್ಕರ್ ಏ ತೊಯ್ಬಾದ ಉಗ್ರ ಸಂಘಟನೆಯ ಭಯೋತ್ಪಾದಕರಿಗೆ ಭಾರತದತ್ತ ದಾರಿ ತೋರಿದ್ದೇ ಈ ರಾಣಾ. ಈತನು ಕೂಡ ಲಷ್ಕರ್ ಏ ತೊಯ್ಬಾದ ಸಕ್ರಿಯ ಸದಸ್ಯ. ಐಎಸ್ಐ ಅಧಿಕಾರಿ ಮೇಜರ್ ಇಕ್ಬಾಲ್ನ ಅತ್ಯಾಪ್ತ ಈ ತಹಾವ್ವುರ್ ರಾಣಾ. ಕೆನಡಾ ನಾಗರಿಕನಾಗಿರುವ ಈತ ಪಾಕಿಸ್ತಾನದಲ್ಲಿ ತನ್ನ ಭಯೋತ್ಪಾದನಾ ಕಾರ್ಯಗಳನ್ನು ನಡೆಸುತ್ತಿದ್ದ.
2008 ನವೆಂಬರ್ 26 ರಂದು ಈತ ಟಾರ್ಗೆಟ್ ಮಾಡಿದ್ದ ಸ್ಥಳಗಳಲ್ಲಿಯೇ 10 ಜನ ಉಗ್ರರು ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಫೋಲ್ಡ್ ಕೆಫೆ. ನಾರಿಮನ್ ಹೌಸ್, ಹೋಟೆಲ್ ತಾಜ್ ಸೇರಿ ಹಲವು ಕಡೆ ಉಗ್ರರು ದಾಳಿ ನಡೆಸಿದ್ದರು. ಈ ಎಲ್ಲಾ ಟಾರ್ಗೆಟ್ಗಳನ್ನು ಫಿಕ್ಸ್ ಮಾಡಿದ್ದೇ ರಾಣ.
ಇದು ಮಾತ್ರವಲ್ಲ ಈ ದಾಳಿಯನ್ನು ತಹಾವ್ವೂರ್ ರಾಣ ಸಮರ್ಥಿಸಿಕೊಂಡಿದ್ದ. ಇದಕ್ಕೆ ಕಾರಣರಾದವರಿಗೆ ಪಾಕ್ ಸೇನೆ ಗೌರವ ಕೊಡಬೇಕು ಎಂದಿದ್ದ. ಇಂತಹ ನರರಾಕ್ಷಸ ಈಗ ಭಾರತದ ಎನ್ಐಎ ಹಾಗೂ ಇಂಟಲಿಜೆನ್ಸ್ ಬ್ಯುರೊದ ಅಧಿಕಾರಿಗಳೊಂದಿಗೆ ಅಮೆರಿಕಾದಿಂದ ಭಾರತಕ್ಕೆ ಬಂದಿದ್ದಾನೆ. ಈತನ ವಿಚಾರಣೆ ದೆಹಲಿಯ ಕೋರ್ಟ್ನಲ್ಲಿಯೇ ನಡೆಯಲಿದ್ದು. ತಿಹಾರ್ ಜೈಲಿನಲ್ಲಿ ಈತನನ್ನು ಸೆರೆಯಲ್ಲಿಡಲು ನಿರ್ಧಾರ ಮಾಡಲಾಗಿದೆ
Log in to write reviews