No Ads

ತಿರುಪತಿಯ ಕಾಲ್ತುಳಿತ ದುರಂತಕ್ಕೆ ಕಾರಣವಾದ ಆ ಘಟನೆ..!

India 2025-01-09 12:29:35 156
post

ತಿರುಪತಿ: ತಿರುಮಲದ ವೈಕುಂಠ ದ್ವಾರ ಟೋಕನ್‌ ಪಡೆಯಲು ಯಾತ್ರಾರ್ಥಿಗಳು ಮುಗಿಬಿದ್ದ ಹಿನ್ನೆಲೆಯಲ್ಲಿ ಬುಧವಾರ ತಿರುಪತಿಯಲ್ಲಿ ಕಾಲ್ತುಳಿತ ಉಂಟಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ತಿರುಪತಿ ಕಾಲ್ತುಳಿತಕ್ಕೆ ವ್ಯವಸ್ಥೆಯಲ್ಲಿ ಮಾಡಿದ ಲೋಪವೇ ಕಾರಣ ಎನ್ನಲಾಗುತ್ತಿದೆ.

ತಿರುಮಲದ ಯೋಜಿತ ವ್ಯವಸ್ಥೆಯೇ ಉಲ್ಟಾಪಲ್ಟವಾಗಿದೆ. ಆಡಳಿತ ಮಂಡಳಿ ಲೆಕ್ಕಾಚಾರ ತಲೆಕೆಳಗಾಗಿದೆ. ಹೌದು ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ನಿರೀಕ್ಷೆಯಲ್ಲಿದ್ದ ಆಡಳಿತ ಮಂಡಳಿ ಗುರುವಾರದಿಂದ ಎಲ್ಲಾ ಸಿದ್ಧತೆ ನಡೆಸಿತ್ತು. ಆದರೆ ಬುಧವಾರ ಮಧ್ಯಾಹ್ನವೇ ಪ್ರವಾಹದ ರೀತಿ ಬಂದ ಹಿನ್ನೆಲೆ ವ್ಯವಸ್ಥೆ ಬುಡಮೇಲಾಗಿದೆ.

ಗುರುವಾರ ಬೆಳಗ್ಗೆ 5 ಗಂಟೆಯಿಂದ ಅಲಿಪಿರಿ, ಶ್ರೀನಿವಾಸಂ, ಸತ್ಯನಾರಾಯಣಪುರಂ, ಪದ್ಮಾವತಿಪುರಂ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳ ಮೂಲಕ ವೈಕುಂಠ ದ್ವಾರ ದರ್ಶನ ಟೋಕನ್‌ಗಳನ್ನು ವಿತರಿಸಲು ಟಿಟಿಡಿ ಯೋಜಿಸಿತ್ತು. ಆದರೆ, ಟೋಕನ್‌ಗಳಿಗಾಗಿ ಬುಧವಾರ ಸಂಜೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಟೋಕನ್‌ ಪಡೆಯಲು ಬಂದವರನ್ನು ರಸ್ತೆಗಳಲ್ಲಿ ತಿರುಗಾಡದಂತೆ ತಡೆಯಲು ಬೈರಾಗಿಪಟ್ಟೆಡ ಬಳಿ ಇರುವ ಪದ್ಮಾವತಿ ಪಾರ್ಕ್ನಲ್ಲಿ ಇರಿಸಲಾಗಿತ್ತು.

ಈ ಮಧ್ಯೆ, ಟಿಕೆಟ್‌ ಕೌಂಟರ್‌ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲೆಂದು ಗೇಟ್‌ ತೆರೆದಾಗ, ಟೋಕನ್‌ ಕೊಡಲು ಗೇಟ್‌ ತೆರೆಯಲಾಗಿದೆ ಎಂದು ಭಾವಿಸಿದ ಭಕ್ತರು, ಒಮ್ಮೆಲೆ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿ ಕೆಲವರು ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಆರು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಅಸ್ವಸ್ಥಗೊಂಡಿದ್ದ ಸಿಬ್ಬಂದಿಯೂ ಒಬ್ಬರು. ಇನ್ನು ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯವೂ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.

ಜನವರಿ 10 ರಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ, ಜ.10, 11, 12ರಂದು ವೈಕುಂಠ ದ್ವಾರ ದರ್ಶನಕ್ಕೆ ಟಿಟಿಡಿ ವ್ಯವಸ್ಥೆ ಮಾಡಿದೆ. ಮೂರು ದಿನಗಳಿಗಾಗಿ ಒಟ್ಟು 1.20 ಲಕ್ಷ ಟೋಕನ್‌ಗಳನ್ನು ಗುರುವಾರ ವಿತರಿಸಲು ಟಿಟಿಡಿ ಯೋಜಿಸಿತ್ತು. ಈ ಮೂರು ದಿನದ ಬಳಿಕ ಸಾಮಾನ್ಯ ಟಿಕೆಟ್ ವಿತರಣಾ ಕೌಂಟರ್ ಆಗಿರುವ ಶ್ರೀನಿವಾಸಂ, ವಿಷ್ಣು ನಿವಾಸಂ, ಭೂದೇವಿ ಕಾಂಪ್ಲೆಕ್ಸ್‌ನಲ್ಲಿ ಮುಂದಿನ 7 ದಿನಕ್ಕೆ ಟೋಕನ್ ಕೊಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಗುರುವಾರದ ಬದಲು ಬುಧವಾರ ಮಧ್ಯಾಹ್ನದಿಂದಲೇ ಭಕ್ತರು ಭಾರೀ ಸಂಖ್ಯೆಯಲ್ಲಿ ಜಮಾವಣೆಯಾದ್ದರಿಂದ ದುರಂತ ಸಂಭವಿಸಿದೆ.

ಮೃತಪಟ್ಟ ಆರು ಜನರ ಪೈಕಿ ಮೂವರು ಮಹಿಳೆಯರಾಗಿದ್ದು, ಇವರಲ್ಲಿ ಒಬ್ಬರನ್ನು ತಮಿಳುನಾಡಿನ ಸೇಲಂ ಮೂಲದ ಮಲ್ಲಿಕ ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಗಾಯಗೊಂಡ 29 ಮಂದಿಗೆ ತಿರುಪತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ 6 ಜನರ ಕುಟುಂಬಕ್ಕೆ ತಲಾ 25 ಲಕ್ಷ ರು. ಪರಿಹಾರ, ಆಂಧ್ರ ಸರಕಾರದ ಮುಜರಾಯಿ ಇಲಾಖೆಯಿಂದ ಘೋಷಣೆ ಮಾಡಲಾಗಿದೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner