No Ads

ಐಷಾರಾಮಿ ಕಾರು ಖರೀದಿಸಿದ ಕಾಟೇರ ನಿರ್ದೇಶಕ ತರುಣ್ ಸುಧೀರ್.

ಮನರಂಜನೆ 2024-04-03 17:06:39 46
post

ನಟ ದರ್ಶನ ಅವರ ಬಹುನಿರೀಕ್ಷಿತ ಸಿನಿಮಾ ಕಾಟೇರಾ. ಈ ಕಾಟೇರಾ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟ ಕಮ್​ ನಿರ್ದೇಶಕ ತರುಣ್ ಸುಧೀರ್ ಅವರು ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಹೌದು, ನಟ, ನಿರ್ದೇಶಕ ತರುಣ್ ಕಿಶೋರ್ ಅವರು ಸ್ಯಾಂಡಲ್‌ವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿದ್ದು, ಪ್ರಸ್ತುತವಾಗಿ ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್​ ಮಾಡಿಕೊಂಡ ವಿಡಿಯೋದಲ್ಲಿ ತರುಣ್ ಸುಧೀರ್ ಅವರು ಬಿಎಂಡಬ್ಲ್ಯು ಎಕ್ಸ್ 1 ಕಾರನ್ನು ಖರೀದಿ ಮಾಡಿದ್ದಾರೆ. ಈ BMW ಕಾರಿನ ಬೆಲೆ ಬರೋಬ್ಬರಿ 50 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ. ತರುಣ್ ಅವರ ಜತೆಗೆ ತಾಯಿ ಮಾಲತಿ ಸುಧೀರ್ ತಮ್ಮ ಹೊಸ ಐಷಾರಾಮಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಕಾಟೇರಾ ಸಿನಿಮಾ ಬಾಕ್ಸ್ ಆಫೀಸ್​ ಉಡೀಸ್​ ಮಾಡಿ ದಾಖಲೆ ನಿರ್ಮಿಸಿತ್ತು. ಇದೀಗ ಅದೇ ಖುಷಿಯಲ್ಲಿದ್ದ ತರುಣ್ ಸುಧೀರ್ ಅವರು ಬಿಎಂಡಬ್ಲ್ಯೂ ಎಕ್ಸ್ 1 ಕಾರು ಖರೀದಿ ಮಾಡಿದ್ದಾರೆ. ಜೊತೆಗೆ ಅವರು ತರುಣ್ ಸುಧೀ‌ರ್ ಅವರು​ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಫಸ್ಟ್ ಡ್ರೈವ್ ಹೋಗಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಇನ್​ಸ್ಟಾಗ್ರಾಮ್​​ನಲ್ಲಿ ಕಾಮೆಂಟ್​ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner