ಬೆಳಗಾವಿ: ಸಿ.ಟಿ ರವಿ ಕೆಟ್ಟ ಪದ ಬಳಸಿ ನನ್ನನ್ನ ನಿಂದಿಸಿದ್ದಾರೆ. ಇದರಿಂದ ನನಗೆ ಬಹಳ ನೋವಾಯಿತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ ವ್ಯಕ್ತಪಡಿಸಿದರು. ಸಿ.ಟಿ ರವಿ ಆಕ್ಷೇಪಾರ್ಹ ಪದ ಬಳಕೆ ಆರೋಪ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಾವು ಪ್ರತಿಭಟನೆ ಮಾಡುತ್ತಿದ್ದವು. ಸಭಾಪತಿ ಸದನ ಮುಂದೂಡಿಕೆ ವೇಳೆ ಸಿಟಿ ರವಿಯವರು ರಾಹುಲ್ ಗಾಂಧಿ ಅವರಿಗೆ ಡ್ರಗ್ ಅಡಿಕ್ಟ್ ಎಂದು ಹೇಳುತ್ತಿದ್ದರು. ರಾಹುಲ್ ಗಾಂಧಿ ಅವರನ್ನ ನಿಂದಿಸಿದರು. ಆಗ ನಾನು ಆಕ್ಸಿಡೆಂಟ್ ಮಾಡಿಸಿದವರು ಕೊಲೆಗಾರ ಎಂದು ಸಿಟಿ ರವಿ ಅವರಿಗೆ ಹೇಳಿದೆ. ಈ ವೇಳೆ ಎಂಎಲ್ ಸಿ ಸಿಟಿ ರವಿ ನನ್ನ ತೇಜೋವಧೆ ಮಾಡಿದರು . ಆ ಕೆಟ್ಟ ಪದವನ್ನ ನನ್ನ ಬಾಯಿಂದ ಹೇಳೋಕೆ ಕಷ್ಟವಾಗುತ್ತಿದೆ ಎಂದು ಕಣ್ಣೀರು ಹಾಕಿದರು. ನನ್ನ ಪಾಡಿಗೆ ರಾಜಕಾರಣ ಮಾಡಿಕೊಂಡಿದ್ದೇನೆ. ಕೆಟ್ಟದನ್ನ ಕಂಡರೇ ದೂರ ಹೋಗುವಂತಹವಳು. ಸಿಟಿ ರವಿ ಪದ ಬಳಕೆ ಮಾಡದಂತ ಶಬ್ದ ಬಳಸಿ ನಿಂದಿಸಿದ್ದಾರೆನಾನು ಬಹಳ ದುಃಖದಲ್ಲಿದ್ದೇನೆ ನಾನು ಒಬ್ಬಳು ತಾಯಿ ನನಗೆ ಅವಮಾನವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅಸಮಾಧಾನ ವ್ಯಕ್ತಪಡಿಸಿದರು.
ಆ ಕೆಟ್ಟ ಪದವನ್ನ ನನ್ನ ಬಾಯಿಂದ ಹೇಳೋಕೆ ಕಷ್ಟವಾಗುತ್ತಿದೆ: ಕಣ್ಣೀರಿಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
No Ads
Log in to write reviews