ಹಲಸಿನ ಬೀಜಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು, ವಿಟಮಿನ್ನುಗಳು, ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವೆಲ್ಲವೂ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವ ಜೊತೆಗೇ ಒಟ್ಟಾರೆ ಆರೋಗ್ಯವನ್ನೂ ವೃದ್ದಿಸುತ್ತವೆ. ಹಲಸಿನ ಹಣ್ಣಿನಂತೆಯೇ ಇದರ ಬೀಜಗಳೂ ಅತಿ ಪೌಷ್ಟಿಕವಾಗಿವೆ. ಇವನ್ನು ಬೇಯಿಸಿದ ಬಳಿಕ ಆಲೂಗಡ್ಡೆಯ ರುಚಿಯನ್ನು ಹೋಲುವ ತಿರುಳು ಕಣ್ಣಿನ ಆರೋಗ್ಯ ಉತ್ತಮಗೊಳ್ಳಲು ಹಾಗೂ ಚರ್ಮದ ಕಾಯಿಲೆಗಳು ಎದುರಾಗದಂತೆ ಕಾಪಾಡುತ್ತದೆ. ಅಲ್ಲದೇ ಇದು ಸಸ್ಯಜನ್ಯ ಪ್ರೋಟೀನ್ ಹಾಗೂ ಹಲವಾರು ಸೂಕ್ಷ್ಮ ಪೋಷಕಾಂಶಗಳ ಉತ್ತಮ ಮೂಲವೂ ಆಗಿದೆ. ಹಲಸಿನ ಬೀಜಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು, ವಿಟಮಿನ್ನುಗಳು, ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವೆಲ್ಲವೂ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವ ಜೊತೆಗೇ ಒಟ್ಟಾರೆ ಆರೋಗ್ಯವನ್ನೂ ವೃದ್ದಿಸುತ್ತವೆ. ಹಲಸಿನ ಹಣ್ಣಿನಂತೆಯೇ ಇದರ ಬೀಜಗಳೂ ಅತಿ ಪೌಷ್ಟಿಕವಾಗಿವೆ. ಇವನ್ನು ಬೇಯಿಸಿದ ಬಳಿಕ ಆಲೂಗಡ್ಡೆಯ ರುಚಿಯನ್ನು ಹೋಲುವ ತಿರುಳು ಕಣ್ಣಿನ ಆರೋಗ್ಯ ಉತ್ತಮಗೊಳ್ಳಲು ಹಾಗೂ ಚರ್ಮದ ಕಾಯಿಲೆಗಳು ಎದುರಾಗದಂತೆ ಕಾಪಾಡುತ್ತದೆ. ಅಲ್ಲದೇ ಇದು ಸಸ್ಯಜನ್ಯ ಪ್ರೋಟೀನ್ ಹಾಗೂ ಹಲವಾರು ಸೂಕ್ಷ್ಮ ಪೋಷಕಾಂಶಗಳ ಉತ್ತಮ ಮೂಲವೂ ಆಗಿದೆ. ಹಲಸಿನ ಹಣ್ಣಿನ ತೊಳೆಗಳು ಬಾಯಲ್ಲಿ ನೀರು ತರಿಸುತ್ತವೆ. ತನ್ನ ಅಮೋಘವಾದ ಸುವಾಸನೆಯಿಂದ ಹಲಸಿನ ಹಣ್ಣು ಸುತ್ತಮುತ್ತಲಿನ ಪ್ರದೇಶಕ್ಕೆ ತನ್ನ ಪರಿಮಳವನ್ನು ಬೀರಿ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಎಲ್ಲಾ ಗುಣಗಳಿಂದ ಹಲಸಿನ ಹಣ್ಣು ತನ್ನ ಗಾತ್ರಕ್ಕೆ ತಕ್ಕಂತೆ ನನ್ನ ಹೆಸರು ಉಳಿಸಿಕೊಂಡಿದೆ. ಹಲಸಿನ ಹಣ್ಣಿನಲ್ಲಿ ಅತ್ಯಂತ ಒಳ್ಳೆಯ ಪೌಷ್ಟಿಕಾಂಶಗಳು ಲಭ್ಯ ಆಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮನುಷ್ಯನ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಹಲಸಿನ ಹಣ್ಣಿನಲ್ಲಿ ಪರಿಹಾರವಿದೆ. " ಹಸಿದು ಹಲಸಿನ ಹಣ್ಣು ತಿನ್ನಬೇಕು " ಎಂದು ಹಲವರು ಹೇಳುತ್ತಾರೆ.ಇದಕ್ಕೆ ಕಾರಣವಿದೆ. ನಮಗೆ ತುಂಬಾ ಹೆಚ್ಚು ಹೊಟ್ಟೆ ಹಸಿವಾದಾಗ ದೇಹದಲ್ಲಿ ಶಕ್ತಿ ಇಲ್ಲದಂತಾಗಿ ಬಹಳ ನಿತ್ರಾಣಗೊಂಡು ಬಿಡುತ್ತೇವೆ.ಆ ಸಮಯದಲ್ಲಿ ಹಲಸಿನ ಹಣ್ಣಿನ ರುಚಿಯಾದ ತೊಳೆಗಳನ್ನು ಸೇವಿಸಲು ಮುಂದಾದರೆ ನಮ್ಮ ಬಾಯಿಗೆ ಒಳ್ಳೆಯ ಅತ್ಯದ್ಭುತ ಸಿಹಿಯಾದ ರುಚಿ ಸಿಗುವುದು ಮಾತ್ರವಲ್ಲದೆ ತುಂಬಾ ಬೇಗನೆ ಅಂದರೆ ತಕ್ಷಣವೇ ಸಾಕಷ್ಟು ಶಕ್ತಿ ಕೂಡ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ. ಇದನ್ನು ಒಂದು ಪವಾಡ ಎಂದೇ ಹೇಳಬಹುದು. ಹಲಸಿನ ಹಣ್ಣಿನ ತೊಳೆಗಳು ಸೇರಿದಂತೆ ಹಲಸಿನ ಬೀಜಗಳು ಸಹ ಕಬ್ಬಿಣದ ಅಂಶವನ್ನು ಯಥೇಚ್ಛವಾಗಿ ಹೊಂದಿವೆ. ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಹಿಮೋಗ್ಲೋಬಿನ್ ಎಂಬ ಅಂಶ ಇರುತ್ತದೆ. ಕಬ್ಬಿಣದ ಅಂಶ ಅದರ ಮುಖ್ಯ ಭಾಗ ಎಂದು ಹೇಳಬಹುದು.ನಮ್ಮ ದೇಹದಲ್ಲಿ ಒಂದು ವೇಳೆ ಕಬ್ಬಿಣದ ಅಂಶದ ಕೊರತೆ ಉಂಟಾದರೆ ನಮಗೆ ಹಲವಾರು ರಕ್ತ ಸಂಬಂಧಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.ಕೆಲವೊಂದು ಬಾರಿ ಯಾವುದಾದರೂ ಸಣ್ಣ ಪುಟ್ಟ ಕೆಲಸ ಮಾಡಿದಾಗ ನಮಗೆ ಹೆಚ್ಚಿನ ಆಯಾಸ ಆಗುವುದು ಕೂಡ ನಮ್ಮ ದೇಹದ ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾದಾಗ ಎಂದು ಹೇಳುತ್ತಾರೆ.ಇದನ್ನು ವೈದ್ಯಕೀಯ ಭಾಷೆಯಲ್ಲಿ ' ಅನಿಮಿಯಾ ' ಎಂದು ಕರೆಯುತ್ತಾರೆ. ನಮ್ಮ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾದಷ್ಟು ಕೆಂಪು ರಕ್ತ ಕಣಗಳ ಉತ್ಪತ್ತಿ ಜಾಸ್ತಿಯಾಗಿ ನಮ್ಮರೋಗ ನಿರೋಧಕ ವ್ಯವಸ್ಥೆ ಬಲಗೊಂಡು ನಮ್ಮನ್ನು ಹಲವಾರು ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ.ಹಾಗಾಗಿ ಹಲಸಿನ ಹಣ್ಣಿನ ಕಾಲದಲ್ಲಿ ಕೇವಲ ಹಲಸಿನ ತೊಳೆ ತಿಂದು ಅದರ ಬೀಜಗಳನ್ನು ಬಿಸಾಡಬೇಡಿ. ಹಲವಾರು ಬಗೆಯ ರೆಸಿಪಿಗಳು ಹಲಸಿನ ಬೀಜಗಳಿಂದ ಸಾಧ್ಯವಾಗುತ್ತದೆ. ಈಗಿನ ಬಹಳಷ್ಟು ಮಂದಿ ಅಜೀರ್ಣತೆ, ಗ್ಯಾಸ್ಟ್ರಿಕ್, ಮಲಬದ್ಧತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತಹವರಿಗೆ ಹಲಸಿನ ಹಣ್ಣಿನ ಬೀಜಗಳ ಪುಡಿ ರಾಮಬಾಣವಾಗಿ ಕೆಲಸ ಮಾಡುತ್ತದೆ.ಹಲಸಿನ ಹಣ್ಣಿನ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ವಿಶೇಷವಾಗಿ ವಯಸ್ಸಾದವರಿಗೆ ತಮ್ಮ ಜೀರ್ಣ ಕ್ರಿಯೆಯಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಬೇಧಿ ಸಮಸ್ಯೆಯನ್ನು ಎದುರಿಸುತ್ತಿರುವವರು ಹಲಸಿನ ಬೀಜಗಳನ್ನು ಬೇಯಿಸಿ ತಿನ್ನಬಹುದು.
ಇನ್ಮುಂದೆ ಹಲಸಿನ ಬೀಜಗಳನ್ನು ಬಿಸಾಡಬೇಡಿ!
No Ads
Log in to write reviews