ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಯಿಂದ ಹೊರಬರಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕೆಲವೊಮ್ಮೆ ಅನಿವಾರ್ಯ ಎಂಬಂತೆ ಎಂತಹದೇ ಸುಡು ಬಿಸಿಲಿದ್ದರು ಓಡಾಡಬೇಕಾಗಿ ಬರುತ್ತದೆ. ಈ ವೇಳೆ ಬಿಸಿಲಿನಿಂದ ತ್ವಚೆ ಟ್ಯಾನ್ ಆಗುತ್ತದೆ. ಮನೆಯಲ್ಲಿಯೇ ಇರುವ ಮನೆ ಮದ್ದಿನ ಮೂಲಕ ತ್ವಚೆಯನ್ನ ಕಾಪಾಡಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ ನಿಂಬೆ ರಸ 2 ಚಮಚ ಜೇನುತುಪ್ಪದೊಂದಿಗೆ ನಿಂಬೆ ರಸ ಮಿಶ್ರಣ ಮಾಡಿ ಬಳಿಕ ಮುಖಕ್ಕೆ ಹಚ್ಚಿ. 15ರಿಂದ 20 ನಿಮಿಷ ಹಾಗೆಯೇ ಬಿಡಿ. ನಂತರ ಮುಖವನ್ನು ಹದ ನೀರಿನಲ್ಲಿ ತೊಳೆಯಿರಿ. ಈ ರೀತಿ 20 ದಿನ ಮಾಡುವುದಿಂದ ಮುಖ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ತ್ವಚೆಯನ್ನ ಕಾಪಾಡಿಕೊಂಡು ಬರಬಹುದಾಗಿದೆ. ಶ್ರೀಗಂಧದ ಫೇಸ್ ಪ್ಯಾಕ್ ಚರ್ಮದ ಕಾಂತಿಯನ್ನು ಕಳೆದುಕೊಳ್ಳದಂತೆ ಅನೇಕರು ವಿವಿಧ ರೀತಿಯ ಫೇಸ್ ಪ್ಯಾಕ್ ಬಳಸುತ್ತಾರೆ. ಆದರೆ ಶ್ರೀಗಂಧದ ಫೆಸ್ ಪ್ಯಾಕ್ನಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುದಾಗಿದೆ. ಆರೋಗ್ಯ ದೃಷ್ಟಿಯಲ್ಲಿ ಇದು ಬೆಸ್ಟ್. ಮಾತ್ರವಲ್ಲದೆ ಬೆಸಿಗೆ ಸಮಯದಲ್ಲಿ ಶ್ರೀಗಂಧದ ಫೇಸ್ ಪ್ಯಾಕ್ ಬಳಸುವುದರಿಂದ ಚರ್ಮದ ಮೇಲೆ ಬೀಳುವ ಕಲೆಗಳನ್ನು ಹೋಗಲಾಡಿಸಬಹುದಾಗಿದೆ. ಶ್ರೀಗಂಧದ ಪುಡಿ ಸಿಗುತ್ತದೆ. ಅದನ್ನು ಒಂದು ಬಟ್ಟಲಿನಲ್ಲಿ ಮೊದಲು ಹಾಕಿಕೊಳ್ಳಬೇಕು. ನಂತರ ಅದಕ್ಕೆ ನಿಂಬೆ ರಸ ಮತ್ತು ರೋಸ್ ವಾಟರ್ ಬಳಸಬೇಕು. ಬಳಿಕ ಮಿಶ್ರಣ ಮಾಡಿ ಇಡಬೇಕು. ಮಿಶ್ರಣ ಮಾಡಿ ಇಟ್ಟಿರುವ ಶ್ರೀಗಂಧದ ಪ್ಯಾಕ್ಗೆ 2 ಚಮಚ ಮೊಸರು 1 ಚಮಚ ಜೇನುತುಪ್ಪ ಸೇರಿಸಬೇಕು. ನಂತರ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಬೇಕು. ಫೇಸ್ಪ್ಯಾಕ್ ಮುಖಕ್ಕೆ ಹಚ್ಚಿಕೊಂಡ 20 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಬೇಕು. ವಾರಕ್ಕೆ 3 ಬಾರಿ ಹೀಗಿ ಮಾಡಿದರೆ ಮುಖದ ಕಾಂತಿಯನ್ನು ಕಾಪಾಡಬಹುದಾಗಿದೆ. ಕಡಲೆ ಹಿಟ್ಟು ಕಡಲೆ ಹಿಟ್ಟಿಗೆ 2 ಚಮಚ ಮೊಸರು ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಒಣಗಿದ ಬಳಿಕ ಮುಖ ತೊಳೆಯಿರಿ. ಹೀಗೆ 20 ಡೇಸ್ ಮಾಡಿದರೆ ತ್ವಚೆಯ ಕಾಂತಿಯನ್ನು ಕಾಪಾಡಬಹುದು.
ಬಿಸಿಲಿಗೆ ಬಾಡಿದ ಮುಖದ ಕಾಂತಿ ಹೆಚ್ಚಿಸಲು ಈ ಮನೆ ಮದ್ದು ಟ್ರೈ ಮಾಡಿ
No Ads
Log in to write reviews