No Ads

ಆಗಸದಲ್ಲಿ ಚಮತ್ಕಾರ ಏಳು ಗ್ರಹಗಳು ಒಂದೇ ಸಾಲಿನಲ್ಲಿ ; ಇಂದು ನೋಡೋದ್ ಮಿಸ್ ಆದ್ರೆ 2040ರವರೆಗೆ ಕಾಯಬೇಕು

ಮನರಂಜನೆ 2025-02-28 12:33:26 161
post

ಅಪರೂಪದ ಸನ್ನಿವೇಶಕ್ಕೆ ಆಗಸ ಇಂದು ಸಾಕ್ಷಿಯಾಗಲಿದೆ. ಸೌರಮಂಡಲದ ಏಳು ಗ್ರಹಗಳು ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳುವ ಅಪರೂಪದ ವಿದ್ಯಮಾನ ಇಂದು ನಭೋಮಂಡಲದಲ್ಲಿ ನಮಗೆ ಕಾಣಿಸಲಿದೆ. ಇದನ್ನು ಇಂದು ನೀವು ನೋಡಲು ಮರೆತರೆ. ಮತ್ತೆ ಇಂತಹ ವಿದ್ಯಮಾನವನ್ನು ನೋಡಲು 2040ನೇ ವರ್ಷದವರೆಗೂ ಕಾಯಬೇಕು. ಇದು ಏಳು ಗ್ರಹಗಳ ಗುಂಪು ಒಂದು ಬದಿಯಲ್ಲಿ ಸಾಲಾಗಿ ನಿಂತರೆ ಮತ್ತೊಂದು ಕಡೆ ಸೂರ್ಯನು ನಿಂತಿರುವಂತಹ ಅನನ್ಯವಾದ ದೃಶ್ಯ ಕಂಡುಬರಲಿದೆ.

ಇದನ್ನು ನೋಡುವುದೇ ಒಂದು ಅದ್ಭುತ ಅನುಭವ ತುಂಬಾ ಕಾಳಜಿವಹಿಸಿ, ಸರಿಯಾಗಿ ಪ್ಲ್ಯಾನ್ ಮಾಡಿ, ಸರಿಯಾದ ವಾತಾವರಣ ಹಾಗೂ ಸ್ಪಷ್ಟವಾದ ಹಾಗೂ ಯಾವುದೇ ಮೋಡಗಳ ಅಡೆತಡೆಗಳಿಲ್ಲದ ವಾತಾವರಣವಿದ್ದಾಗ ನೋಡಿಕೊಂಡು ಬಿಡಿ. ಇಂತಹದೊಂದು ಅಪರೂಪದ ಘಟನೆಯನ್ನು ನೋಡುವ ಅವಕಾಶ ಮತ್ತೆ ಮತ್ತೆ ಸಿಗುವುದಿಲ್ಲ.

ಇದು ಹಲವು ಗ್ರಹಗಳು ಏಕಕಾಲಕ್ಕೆ ಒಂದೇ ಸಾಲಿನಲ್ಲಿ ಆಗಸದಲ್ಲಿ ಒಂದರ ಹಿಂದೆ ಒಂದರಂತೆ ನಿಲ್ಲುತ್ತೆ. ಈ ಒಂದು ಗ್ರಹಗಳ ಜೋಡಣೆ ಒಂದು ಕಾಲಕ್ಕೆ ಸರಿಯಾಗಿ ನಡೆಯುವಂತಹ ಅಪರೂಪದ ಘಟನೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಒಂದೇ ಸಾಲಿನಲ್ಲಿ ಬರುವುದೇ ತುಂಬಾ ಅಪರೂಪದ ವಿಷಯ . ಒಂದೇ ರಾತ್ರಿಯಲ್ಲಿ ಹೊಳೆಯುವ ಗ್ರಹಗಳನ್ನು ಕಾಣುವ ಗಮನಾರ್ಹ ಘಟನೆ ಇದು. ಅತ್ಯಂತ ಅಪರೂಪವಾಗಿ ಆಕಾಶದಲ್ಲಿ ನಡೆಯುವ ಒಂದು ವಿಭಿನ್ನ ಚಮತ್ಕಾರವಿದು.

ಈ ಗ್ರಹಗಳ ಪಥಸಂಚಲನ ಆರಂಭವಾಗಿದ್ದು ಜನವರಿಯಲ್ಲಿ. ಏಳು ಗ್ರಹಗಳು ಏಕಕಾಲಕ್ಕೆ ಒಂದೇ ಸಾಲಿನಲ್ಲಿ ಬಂದು ನಿಂತು ವಿಸ್ಮಯಕಾರಿ ನೋಟಕ್ಕೆ ಸಾಕ್ಷಿಯಾಗಿ ಇಂದು ಕೊನೆಗೊಳ್ಳಲಿದೆ ಈ ಪಥಸಂಚಲನ. ನಿಜಕ್ಕೂ ಇದೊಂದು ಅಪರೂಪದ ಅವಕಾಶ ಹಾಗೂ ಅತ್ಯದ್ಭುತ ಗ್ರಹಗಳ ಜೋಡಣೆಗೆ ಆಗಸ ಸಾಕ್ಷಿಯಾಗಲಿರುವ ಚಮತ್ಕಾರಿ ವಿದ್ಯಮಾನ.

ಇಂದು ಆಗಸದಲ್ಲಿ ನಡೆಯುವ ಈ ಚಮತ್ಕಾರವೂ ದೇಶದ ಹಲವು ನಗರಗಳಲ್ಲಿ ನೋಡಲು ಕಾಣ ಸಿಗುತ್ತದೆ. ಶುಕ್ರ, ಮಂಗಳ, ಗುರು ಮತ್ತು ಯುರೇನಸ್ ಗ್ರಹಗಳು ಸರಳವಾಗಿ ಬರಿಗಣ್ಣಿಗೆ ನೋಡಲು ಕಾಣಿಸಿದರೆ ಬುಧ, ಶನಿ ಮತ್ತು ನೆಪ್ಚೂನ್ ಗಳು ಬರಿಗಣ್ಣಿಗೆ ಕಾಣುವುದಿಲ್ಲ. ಇವುಗಳನ್ನು ನೋಡಲು ಬೈನಾಕ್ಯೂಲರ್ ಅಥವಾ ಟೆಲಿಸ್ಕೋಪ್​​ನ ಅವಶ್ಯಕತೆ ಇದೆ. ಈ ಒಂದು ಚಮತ್ಕಾರ ದೇಶದ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಹೈದ್ರಾಬಾದ್, ಪುಣೆ, ಜೈಪುರ, ಲಖನೌ, ನೋಯ್ಡಾ, ಇಂದೋರ್​, ಕಾನ್ಪುರ್, ಗುಹವಾಟಿ, ಗಂಗಟೊಕ್​, ಅಹ್ಮದಾಬಾದ್ ಮತ್ತು ದೆಹ್ರಾಡೂನ್​ನಲ್ಲಿ ನೋಡಲು ಕಾಣಸಿಗುತ್ತದೆ. ಬಹುತೇಕ ದೇಶದ ಎಲ್ಲಾ ಭಾಗಗಳಲ್ಲಿಯೂ ಈ ಆಕಾಶ ಚಮತ್ಕಾರವನ್ನು ನೋಡುವ ಅವಕಾಶ ಜನರಿಗೆ ಸಿಗಲಿದೆ. ಆದರೆ ಪ್ರದೇಶದ ಹವಾಮಾನ ನಮಗೆ ಅನುಕೂಲಕರವಾಗಿದ್ದರೆ ಸರಳವಾಗಿ ನೋಡಬಹುದು. ಇನ್ನು ಈ ಒಂದು ಚಮತ್ಕಾರ ಸೂರ್ಯ ಮುಳುಗಿದ 45 ನಿಮಿಷಗಳ ನಂತರ ಈ ಅಪರೂಪದ ದೃಶ್ಯ ನಮಗೆ ಗೋಚರವಾಗಲಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner