2024ನೇ ವರ್ಷದ ಮೊದಲ ಸೂರ್ಯಗ್ರಹಣ ಇಂದು ರಾತ್ರಿ 9:12 ರಿಂದ 2:22 ರವರೆಗೆ ಇರುತ್ತದೆ. ಸುಮಾರು 50 ವರ್ಷಗಳ ಹಿಂದೆ ಇಂತಹ ಸೂರ್ಯಗ್ರಹಣ ಸಂಭವಿಸಿತ್ತು. ಇದೀಗ ಅಂತಹದ್ದೆ ಗ್ರಹಣ ಆಗುತ್ತಿರುವುದರಿಂದ ಜನರಲ್ಲಿ ಸಾಕಷ್ಟು ಕುತೂಹಲದ ಮೂಡಿದೆ. ಈ ಸೂರ್ಯ ಗ್ರಹಣವನ್ನು ಖಗ್ರಾಸ ಸೂರ್ಯಗ್ರಹಣ ಎನ್ನುತ್ತಾರೆ. ಇಂದು ರಾತ್ರಿ ಆಗಸದಲ್ಲಿ 5 ಗಂಟೆ 25 ನಿಮಿಷಗಳ ಕಾಲ ಸುದೀರ್ಘ ಅವಧಿಯಲ್ಲಿ ವಿಸ್ಮಯ ನಡೆಯುತ್ತದೆ. ವರ್ಷದ ಮೊದಲ ಸೂರ್ಯಗ್ರಹಣವು ಪೆಸಿಫಿಕ್ ಕರಾವಳಿಯ ಪ್ರದೇಶದ ಮೆಕ್ಸಿಕೋದಲ್ಲಿ ಮೊದಲು ಗೋಚರ ಆಗುತ್ತದೆ. ಓಹಿಯೋ, ಪೆನ್ಸಿಲ್ವೇನಿಯಾ, ಅರ್ಕಾನ್ಸಾಸ್, ಟೆಕ್ಸಾಸ್, ಒಕ್ಲಹೋಮ, ಕೆಂಟುಕಿ, ಮಿಸೌರಿ, ಇಲಿನಾಯ್ಸ್, ಇಂಡಿಯಾನಾ, ನ್ಯೂ ಹ್ಯಾಂಪ್‌ಶೈರ್, ಮೈನೆ, ನ್ಯೂಯಾರ್ಕ್ ಮತ್ತು ವರ್ಮೊಂಟ್ ಸೇರಿ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರ ಆಗುತ್ತದೆ. ಅಮೆರಿಕ, ಮೆಕ್ಸಿಕೊ, ಕೆನಡಾ, ಐರ್ಲೆಂಡ್, ಇಂಗ್ಲೆಂಡ್ ಸೇರಿದಂತೆ ಕೆಲ ವಿದೇಶಗಳಲ್ಲಿ ಗ್ರಹಣವು ಮಧ್ಯಾಹ್ನ 2:15 ರಿಂದ ಪ್ರಾರಂಭವಾಗುತ್ತೆ. ಚಂದ್ರನ ನೆರಳು ಪೂರ್ತಿಯಾಗಿ ಸೂರ್ಯನ ಮೇಲೆ ಬಿದ್ದಾಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುವುದಿಲ್ಲ. ಚಂದ್ರನ ನೆರಳು ಭೂಮಿಯ ಮೇಲ್ಮೈಯಲ್ಲಿ ವೇಗವಾಗಿ ಚಲಿಸುವಾಗ ಸೂರ್ಯ ಗ್ರಹಣ ಗೋಚರವಾಗುತ್ತೆ. ಸೂರ್ಯನ ಹೊರ ಪದರ ಚಂದ್ರನ ಮೇಲೆ ಸುತ್ತುವರಿದು ಸುಂದರವಾಗಿ ಹೊಳೆಯುತ್ತದೆ. ಈ ಬಾರಿ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಏಕೆಂದರೆ, ಸೂರ್ಯಗ್ರಹಣ ಸಂಭವಿಸುವಾಗ ಭಾರತದಲ್ಲಿ ಮಧ್ಯರಾತ್ರಿ ಆಗಿರುತ್ತದೆ. ಹೀಗಾಗಿ ನಮ್ಮ ದೇಶದಲ್ಲಿ ಕತ್ತಲು ಇರುವುದರಿಂದ ಸೂರ್ಯನ ಗ್ರಹಣ ಕಾಣಿಸುವುದಿಲ್ಲ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರ ಆಗದ ಕಾರಣ ಈ ಬಾರಿಯ ಸೂತಕ ಕಾಲದ ಅವಧಿ ಭಾರತಕ್ಕೆ ಮಾನ್ಯ ಆಗಲ್ಲ. ಈ ಗ್ರಹಣದ ಕೆಟ್ಟ ಸಮಯ ಆಗಿರಬಹುದು ಅಥವಾ ಗ್ರಹಣದ ಪ್ರಭಾವ ಆಗಿರಬಹುದು ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾರಣವಿಷ್ಟೇ ಗ್ರಹಣ ನಮ್ಮ ದೇಶದಲ್ಲಿ ಕಾಣದ ಕಾರಣ ಯಾವುದೇ ಪರಿಣಾಮಗಳಿರಲ್ಲ. ಆದರೆ ಸೂರ್ಯಗ್ರಹಣ ಕಾಣಿಸುವ ದೇಶಗಳಲ್ಲಿ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಮುಂದಿನ ವಾರ್ಷಿಕ ಸೂರ್ಯಗ್ರಹಣವು ಭಾರತದಲ್ಲಿ 2031 ಮೇ 21 ರಂದು ಗೋಚರವಾಗಲಿದೆ. ಅದರಲ್ಲಿ ವಿಶೇಷವಾಗಿ ಭಾರತದ ಕೊಚ್ಚಿ, ಅಲಪ್ಪುಳ, ಚಾಲಕುಡಿ, ಕೊಟ್ಟಾಯಂ, ತಿರುವಲ್ಲಾ, ಪತ್ತನಂತಿಟ್ಟ, ಪೈನಾವು, ಗುಡಲೂರು, ತೇಣಿ, ಮಧುರೈ, ಇಳಯ್ಯಂಗುಡಿ, ಕಾರೈಕುಡಿ ಮತ್ತು ವೇದಾರಣ್ಯಂ ಸೇರಿದಂತೆ ಹಲವಾರು ಭಾರತೀಯ ನಗರಗಳಲ್ಲಿ ಸೂರ್ಯ ಗ್ರಹ ಗೋಚರ ಆಗುತ್ತದೆ. ‘ಬೆಂಕಿಯ ಉಂಗುರ’ ರೀತಿಯಲ್ಲಿ ಕೇರಳ ಮತ್ತು ತಮಿಳುನಾಡಿನಲ್ಲಿ ಕಾಣಿಸಲಿದೆ ಎಂದು ಹೇಳಲಾಗುತ್ತಿದೆ.
ಸಂಪೂರ್ಣ ಸೂರ್ಯಗ್ರಹಣ ಭಾರತದಲ್ಲಿ ಯಾಕೆ ಕಾಣಿಸಲ್ಲ?
No Ads
Log in to write reviews