ರತ್ನಮ್ಮ, ಗೌರಮ್ಮ, ಶಾಂತಮ್ಮ ಎಂಬ ಸಹೋದರಿಯರು ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದರು. ಅದೇ ದಾರಿಯಲ್ಲಿ ಇಬ್ಬರು ಬೈಕ್ನಲ್ಲಿ ಬಂದಿದ್ದಾರೆ. ಮಹಿಳೆಯರ ಬಳಿಗೆ ಬಂದ ಕಳ್ಳರು, ಚಿಕ್ಕಬೆನ್ನೂರಿಗೆ ಹೋಗುತ್ತಿದ್ದೇವೆ, ಬೇಕಿದ್ದರೆ ಡ್ರಾಪ್ ಕೊಡೋದಾಗಿ ತಿಳಿಸಿದ್ದಾರೆ.
ಆಗ ರತ್ನಮ್ಮ ಅನ್ನೋರು ಅವರ ಬೈಕ್ನಲ್ಲಿ ಕೂತಿದ್ದಾರೆ. 200 ಮೀಟರ್ ದೂರ ಹೋಗುತ್ತಿದ್ದಂತೆಯೇ ರತ್ನಮ್ಮ ಅವರನ್ನು ಕೆಳಗೆ ಇಳಿಸಿ, 40 ಗ್ರಾಂ ತೂಕದ ಬಂಗಾರದ ಚೈನ್ ಕಿತ್ತುಕೊಂಡು ಹೋಗಲು ಯತ್ನಿಸಿದ್ದಾರೆ. ಆಗ ರತ್ನಮ್ಮ ಒಬ್ಬನನ್ನು ಹಿಡಿದು ಜೋರಾಗಿ ಕಿರುಚಿಕೊಂಡಿದ್ದಾರೆ. ಅಲ್ಲಿಗೆ ಓಡಿ ಬಂದ ಇನ್ನಿಬ್ಬರು ಸಹೋದರಿಯರು, ಆತನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.
ಗಲಾಟೆ ಜೋರಾಗಿ ಕೇಳಿಸಿದ್ದರಿಂದ ಗ್ರಾಮದ ಯುವಕರು ಓಡಿ ಬಂದಿದ್ದಾರೆ. ಯುವಕರ ಸಹಾಯದಿಂದ ಸಹೋದರಿಯರು ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಹೆಸರು ಸುರೇಶ್. ಈತ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನವ ಎಂದು ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ಹೆಸರು ಸೋಮಶೇಖರ. ಈತ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Log in to write reviews