No Ads

ಸಿಲಿಕಾನ್ ಸಿಟಿ ಜನರೇ ಕೊಂಚ ಎಚ್ಚರ; ಆರೋಗ್ಯ ಇಲಾಖೆ ಟೆನ್ಷನ್

ಜಿಲ್ಲೆ 2025-04-07 12:35:43 92
post

ತಾಪಮಾನ ಏರಿಕೆಯಿಂದಾಗಿ ನಾನಾ ಆರೋಗ್ಯ ಸಮಸ್ಯೆ ಶುರುವಾಗಿವೆ. ಅದರಲ್ಲೂ  ಸಿಲಿಕಾನ್ ಸಿಟಿಯಲ್ಲಿ ಬಿಟ್ಟು ಬಿಡದೇ ಅದೊಂದು ಕಾಯಿಲೆ ಕಾಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಕಾಯಿಲೆ ಪ್ರಕರಣಗಳು ದುಪ್ಪಟ್ಟು ಆಗಿದೆ. ಸಿಲಿಕಾನ್ ಸಿಟಿ ಜನರೇ ಆರೋಗ್ಯದ ಬಗ್ಗೆ ಕೊಂಚ ಎಚ್ಚರವಾಗಿರಬೇಕು. ಅತಿಯಾದ ತಾಪಮಾನ ಜನರನ್ನು ಅತಿಸಾರ ರೋಗದತ್ತ ವಾಲಿಸುತ್ತಿದೆ. ಸೆಕೆ ಅಂತ ಸಿಕ್ಕ ಸಿಕ್ಕ ಕಡೆ ನೀರಿನ ನೈರ್ಮಲ್ಯ ನೋಡದೇ ಕುಡಿಯುವುದರಿಂದ ಕೂಡ ಅತಿಸಾರದ ಮೂಲಕ ಅಪಾಯಕ್ಕೆ ಆಹ್ವಾನ ಕೊಟ್ಟ ಹಾಗೇ ಆಗಿದೆ. ನಿಮಗೆ ಹೊಟ್ಟೆ ನೋವು, ಜ್ವರ, ಕರುಳು ಬೇನೆ, ಟೈಫಾಯಿಡ್‌, ವೈರಲ್‌ ಹೆಪಟೈಟಿಸ್‌ ನೋವಿನಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಯಾಕಂದ್ರೆ ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಅಕ್ಯುಟ್‌ ಡಯಾರಿಯಲ್‌ ಡಿಸೀಸ್ ಏರಿಕೆಯಾಗುತ್ತಿದ್ದು, ಅದರ ಅಂಕಿ ಅಂಶಗಳೇ ಆರೋಗ್ಯ ಇಲಾಖೆಯ ಟೆನ್ಷನ್ ಹೆಚ್ಚಿಸಿದೆ.

Acute diarrheal disease ಲಕ್ಷಣಗಳು

  • ಕರುಳು ಸಂಬಂಧಿ ರೋಗ
  • ಬೇದಿ
  • ವಾಕರಿಕೆ ಜೊತೆಗೆ ವಾಂತಿ
  • ಕಿಬ್ಬೊಟ್ಟೆಯ ಸೆಳೆತ
  • ಹೊಟ್ಟೆನೋವು
  • ಜ್ವರ

ಈ ಬಾರಿ ಬೇಸಿಗೆಯಲ್ಲಿನ ಬಿರು ಬಿಸಿಲು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದ ಜನರನ್ನ ಬಿಡದೆ ಕಾಡುತ್ತಿದೆ. ಬಿಸಿಲ ಧಗೆ ಬೆಂಗಳೂರಿನಲ್ಲಿ ಏರಿಕೆಯಾಗ್ತಿದೆ.. ಕರುಳು ಬೇನೆ, ಟೈಫಾಯಿಡ್‌, ವೈರಲ್‌ ಹೆಪಟೈಟಿಸ್‌ನಂತಹ ಕರುಳು ಸಂಬಂಧಿ ರೋಗಗಳು ಏರಿಕೆ ಕಂಡಿವೆ. ಕಳೆದ ಎರಡು ತಿಂಗಳಲ್ಲಿ  ಬರೋಬ್ಬರಿ 34,276 ಮಂದಿಗೆ ಎಡಿಡಿ ಅಂದ್ರೆ ಅಕ್ಯುಟ್‌ ಡಯಾರಿಯಲ್‌ ಡಿಸೀಸ್‌ ಕಾಣಿಸಿಕೊಂಡಿದೆ.

ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಕರಳು ಬೇನೆ ಗ್ಯಾಸ್ಟ್ರೋ ಎಂಟರಿಟೈಸ್ ಸೇರಿದಂತೆ ಕರುಳು ಸಂಬಂಧಿ ಖಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ. ಒಟ್ಟಿನಲ್ಲಿ ಕರುಳುಬೇನೆ ಪ್ರಕರಣಗಳಲ್ಲಿ ರೋಗಿಗಳಿಗೆ ಸಾಕಷ್ಟು ದ್ರವಾಹಾರ ನೀಡಬೇಕಿದ್ದು ಇಲ್ಲವಾದಲ್ಲಿ ಮೂತ್ರಪಿಂಡ ವೈಫಲ್ಯದ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ವೈದ್ಯರು ಎಚ್ಚರಿಕೆ ಅತ್ಯಗತ್ಯ ಅಂತಿದ್ದು ರಾಜಧಾನಿಯ ಜನರು ಬೆಸಿಗೆ ಮುಗಿಯುವವರೆಗೂ ಎಚ್ಚರಿಕೆ ವಹಿಸುವ ಅಗತ್ಯವಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner