No Ads

ಮಗಳ ಗೆಲುವಿನ ಟಾಸ್ಕ್, ಅದೃಷ್ಟದಾಟದಲ್ಲಿ ಶಿವಾನಂದ್ ಪಾಟಿಲ್

ಕರ್ನಾಟಕ 2024-04-05 17:08:55 50
post

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಹಿರಿಯ ಶಾಸಕ ಹಾಗೂ ಸಚಿವರೂ ಆಗಿರುವ ಶಿವಾನಂದ ಪಾಟೀಲ್ ಕಾಂಗ್ರೆಸ್‌ ಸೇರಿದಾಗ ಅವರಿಗೆ ಎದುರಾಗಿದ್ದೇ ಕ್ಷೇತ್ರ ಬದಲಾವಣೆಯ ಸವಾಲು. ಅದನ್ನು ಅವರು ಮೆಟ್ಟಿ ನಿಂತಿದ್ದರು. ಇದೀಗ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬೇರೆ ಕ್ಷೇತ್ರದಿಂದ ಮಗಳು ಸಂಯುಕ್ತಾ ಪಾಟೀಲ್‌ರನ್ನು ಗೆಲ್ಲಿಸುವ ಟಾಸ್ಕ್‌ ಎದುರಾಗಿದೆ. ಇದರಲ್ಲಿ ಅವರು ಗೆಲ್ತಾರಾ? ಕಾದು ನೋಡಬೇಕಿದೆ. ಪಕ್ಕದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಹಿರಿಯ ಶಾಸಕ ಹಾಗೂ ಸಚಿವರೂ ಆಗಿರುವ ಶಿವಾನಂದ ಪಾಟೀಲ ಕಾಂಗ್ರೆಸ್‌ ಸೇರಿದಾಗ ಎದುರಾಗಿದ್ದೇ ಕ್ಷೇತ್ರ ಬದಲಾವಣೆಯ ಟಾಸ್ಕ್‌. ಅದನ್ನು ಮೆಟ್ಟಿ ನಿಂತಿದ್ದ ಶಿವಾನಂದ ಪಾಟೀಲ್‌ ಈಗ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬೇರೆ ಕ್ಷೇತ್ರದಿಂದ ಮಗಳನ್ನು ಗೆಲ್ಲಿಸುವ ಟಾಸ್ಕ್‌ ಎದುರಿಸಬೇಕಾಗಿ ಬಂದಿದೆ. ಹೌದು, ವಿಜಯಪುರ ಜಿಲ್ಲೆಯ ರಾಜಕಾರಣದಲ್ಲಿ ಶಿವಾನಂದ ಪಾಟೀಳ್‌ ಖದರ್ರೇ ವಿಭಿನ್ನ. 6 ಬಾರಿ ಶಾಸಕರಾಗಿರುವ ಶಿವಾನಂದ ಪಾಟೀಲ್‌ ಬಿಜೆಪಿ ಹಾಗೂ ಜನತಾದಳದ ಮನೆಯಲ್ಲಿ ಇದ್ದು ಬಂದವರು. ತಲಾ ಒಂದು ಬಾರಿ ಬಿಜೆಪಿ ಹಾಗೂ ಜನತಾದಳದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದರೆ, ಉಳಿದ 4 ಬಾರಿ ಕಾಂಗ್ರೆಸ್‌ ಬಾವುಟ ಹಾರಿಸಿದವರು. ಆದರೆ ಕಾಂಗ್ರೆಸ್‌ಗೆ ಸೇರಿದಾಗ ಅವರಿಗೆ ಎದುರಾದ ಟಾಸ್ಕ್‌ ವಿಧಾನಸಭೆ ಕ್ಷೇತ್ರ ಬದಲಾವಣೆ. ತಿಕೋಟಾ ಕ್ಷೇತ್ರದಿಂದ ರಾಜಕಾರಣ ಆರಂಭಿಸಿದ್ದ ಶಿವಾನಂದ ಪಾಟೀಲ ಅದೇ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದವರು. ಕಾಂಗ್ರೆಸ್‌ ಸೇರ್ಪಡೆಗೆ ಮನಸ್ಸು ಮಾಡಿದಾಗ ಸ್ವ ಕ್ಷೇತ್ರ ಬಿಟ್ಟು ಬಸವನಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧಿರ್ಸುವ ಟಾಸ್ಕ್‌ನ್ನು ಹೈಕಮಾಂಡ್‌ ನೀಡಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಶಿವಾನಂದ ಪಾಟೀಲ 2004ರಲ್ಲಿ ಬಸವನಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧಿಸುವುದರ ಜತೆಗೆ ಗೆಲುವನ್ನೂ ಸಂಪಾದಿಸಿದ್ದರು. ಬಳಿಕ ಇದೇ ಕ್ಷೇತ್ರದಲ್ಲಿ 4 ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ ಎರಡು ಬಾರಿ ಸಚಿವರೂ ಆಗಿದ್ದಾರೆ. ಬಾಗಲಕೋಟೆ ಲೋಕಸಭೆ ಕ್ಷೇತ್ರದ ಟಿಕೆಟ್‌ಗಾಗಿ ನಡೆದ ಫೈಟ್‌ನಲ್ಲಿ ಕೊನೆಗೆ ಸಂಯುಕ್ತಾ ಪಾಟೀಲ್ ಕೈ ಮೇಲಾಗಿದೆ. ಹೀಗಾಗಿ ತಮ್ಮ ಕುಟುಂಬಕ್ಕೆ ಬಂದ ಈ ಅವಕಾಶವನ್ನು ಬಳಸಿಕೊಳ್ಳಬೇಕೆಂಬ ಉಮೇದಿನಲ್ಲಿ ಶಿವಾನಂದ ಪಾಟೀಲ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದ ಉಸ್ತುವಾರಿಯಾಗಿದ್ದ ಶಿವಾನಂದ ಪಾಟೀಲ್ ಆಗಲೂ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಚುನಾವಣೆ ಮಾಡಿದ್ದರು. ಮೋದಿ ಅಲೆ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಗೆಲುವು ದಕ್ಕಿರಲಿಲ್ಲ. 2024ರ ಲೋಕಸಮರಕ್ಕೆ ಅಖಾಡ ಸಿದ್ಧವಾಗಿದೆ. ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಟಿಕೆಟ್‌ ಕೈತಪ್ಪಿದ್ದಕ್ಕೆ ವೀಣಾ ಕಾಶಪ್ಪನವರ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಶಿವಾನಂದ ಪಾಟೀಲ್‌ ಅವರು ಪಕ್ಷದಲ್ಲಿನ ಭಿನ್ನಮತವನ್ನು ಮೆಟ್ಟಿ ನಿಂತು ಜಿಲ್ಲೆಯ ಶಾಸಕರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಅಲ್ಲದೇ ಸತತ 4 ಬಾರಿ ಬಿಜೆಪಿಯಿಂದ ಗೆದ್ದಿರುವ ಪಿಸಿ ಗದ್ದಿಗೌಡರ ವಿರುದ್ಧ ಮಗಳು ಸಂಯುಕ್ತಾಳನ್ನು ಗೆಲ್ಲಿಸಿಕೊಂಡು ಬರುವ ಬಹುದೊಡ್ಡ ರಿಸ್ಕ್‌ ಈಗ ಸಚಿವರ ಮೇಲಿದೆ. ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ತಾವು ಅಂದುಕೊಂಡಿದ್ದು ಸಾಧಿಸಿದರೆ ಕುಟುಂಬದ ಕುಡಿಯೊಂದು ಇದೇ ಮೊದಲ ಬಾರಿ ಸಂಸತ್‌ ಪ್ರವೇಶಿಸಲಿದೆ. ಅಲ್ಲದೇ ಸರಕಾರದಲ್ಲಿ ತಮ್ಮ ಸಚಿವ ಸ್ಥಾನ ಅಬಾಧಿತವಾಗುವುದರ ಜತೆಗೆ ಪಕ್ಷದಲ್ಲೂ ಹೊಸ ಇಮೇಜ್‌ ಬರಲಿದೆ. ಹೀಗಾಗಿ ಶಿವಾನಂದ ಪಾಟೀಲ್‌ಗೆ ಬಂದ ಮತ್ತೊಂದು ಟಾಸ್ಕ್‌ ಎದುರಾಗಿದೆ. ವಿಜಯಪುರ ಜಿಲ್ಲಾ ರಾಜಕಾರಣದಲ್ಲಿ ಎಂಬಿ ಪಾಟೀಲ್‌ ಹಾಗೂ ಶಿವಾನಂದ ಪಾಟೀಲ್‌ ಪ್ರಮುಖರು. ಇಬ್ಬರೂ ಒಂದೇ ಪಕ್ಷದಲ್ಲಿದ್ದರೂ ಗೆಳೆತನ ಅಷ್ಟಕ್ಕಷ್ಟೇ. ಆದರೆ, ಎಂಬಿ ಪಾಟೀಲರ ಕುಟುಂಬ ರಾಜಕಾರಣದಲ್ಲಿ ಒಂದು ಕೈ ಮುಂದಿದೆ. ಅವರ ಸಹೋದರ ಸುನೀಲಗೌಡ ಪಾಟೀಲ ಎರಡು ಬಾರಿ ಎಂಎಲ್ಸಿ ಆಗಿದ್ದಾರೆ. ಆದರೆ ಶಿವಾನಂದ ಪಾಟೀಲ್‌ರ ಕುಟುಂಬಕ್ಕೆ ಈವರೆಗೆ ಇಂತಹ ಸುಯೋಗ ಕೂಡಿಬಂದಿಲ್ಲ. ಶಿವಾನಂದ ಪಾಟೀಲ್‌ರ ಖಾಸಾ ಸಹೋದರ ವಿಜುಗೌಡ ಪಾಟೀಲ ವಿಧಾನಸಭೆ ಮೆಟ್ಟಿಲು ಏರಲು 2008ರಿಂದಲೂ ಯತ್ನಿಸುತ್ತಿದ್ದರೂ ಈವರೆಗೆ ಅದು ಈಡೇರಿಲ್ಲ. ಈಗ ಇದೇ ಮೊದಲ ಬಾರಿಗೆ ಪುತ್ರಿ ಸಂಯುಕ್ತಾ ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಅದೃಷ್ಟ ಏನಾಗುತ್ತದೆ ಎನ್ನುವುದು ಕಾದುನೋಡಬೇಕಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner