ಧಾರವಾಡ: ಚುನಾವಣಾ ಪ್ರಚಾರದ ಅಂಗವಾಗಿ ಗದಗ ರಸ್ತೆಯಲ್ಲಿರುವ "ಸೇಂಟ್ ಪೀಟರ್ ಚರ್ಚ್ ಗೆ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಭೇಟಿ ನೀಡಿ ಯೇಸುವಿನ ಹಾಗೂ ಚರ್ಚಿನ ಫಾದರಗಳಾದ ಫಾಸ್ಟರ್ ನಿಕೋಲಸ್, ಫಾಸ್ಟರ್ ಜೇಮ್ಸ್ ತಲಪಾಟಿ, ಫಾಸ್ಟರ್ ಓಬುಲ್ ರಾವ್ ಅವರ ಆಶೀರ್ವಾದ ಪಡೆದರು. ಈ ವೇಳೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಬಗ್ಗೆ ದ್ವೇಷದ ರಾಜಕೀಯ ಮಾಡುವ ಚಾಳಿ ಬಿಜೆಪಿಯಲ್ಲಿದೆ. ಸರ್ವಧರ್ಮದ ಒಳಿತಿಗಾಗಿ, ಎಲ್ಲಾ ಧರ್ಮಗಳ ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರುಗಳಾದ ಸಲೀಂ ಅಹಮದ್, ಪ್ರಸಾದ ಅಬ್ಬಯ್ಯ, ಮೊಹಮ್ಮದ್ ಹ್ಯಾರಿಸ್ ನಲಪಾಡ್, ಸದಾನಂದ ಡಂಗನವರ, ಅಬ್ದುಲ್ ಗಣಿ, ಕ್ರೈಸ್ತ ಧರ್ಮದ ಹಿರಿಯ ಮುಖಂಡರು, ಅನುಯಾಯಿಗಳು, ಮಹಿಳೆಯರು, ಪಕ್ಷದ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.
ಸೇಂಟ್ ಪೀಟರ್ ಚರ್ಚ್ ಗೆ ವಿನೋದ ಅಸೂಟಿ ಭೇಟಿ
No Ads
Log in to write reviews