No Ads

ಸೀಮಾ ಹೈದರ್ ಪಾಕಿಸ್ತಾನಕ್ಕೆ ಹೋಗಲ್ಲ.. ಮೋದಿಗೆ ಮನವಿ ಮಾಡಿದ್ದಳು

India 2025-05-02 15:00:21 161
post

ಪಹಲ್ಗಾಮ್ ದಾಳಿ ಬೆನ್ನಲ್ಲೇ ಮೋದಿ ಸರ್ಕಾರ, ಭಾರತದಲ್ಲಿ ವಾಸಿಸುವ ಪಾಕಿಸ್ತಾನಿ ನಾಗರಿಕರ ವೀಸಾ ರದ್ದುಗೊಳಿಸಿದೆ. ಅವರನ್ನು ಪಾಕ್​ಗೆ ವಾಪಸ್ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ಅಂತೆಯೇ ಎಲ್ಲಾ ಪಾಕಿಸ್ತಾನಿಯರು ತಮ್ಮ ಪ್ರೀತಿಪಾತ್ರರ ಬಿಟ್ಟು ತವರಿಗೆ ಮರಳಬೇಕಿದೆ.

ಈಗಾಗಲೇ ಅನೇಕರು ಪಾಕ್​ಗೆ ಹಿಂತಿರುಗುತ್ತಿದ್ದಾರೆ. ಈ ಮಧ್ಯೆ ಸೀಮಾ ಹೈದರ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆಕೆಯನ್ನೂ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಕೆಂಬ ಒತ್ತಾಯ ಜೋರಾಗಿದೆ. ಆದರೆ ಸೀಮಾ ಹೈದರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಸಾಧ್ಯತೆ ತುಂಬಾನೇ ಕಡಿಮೆ ಇದೆ. ಭಾರತ ಸರ್ಕಾರ ಹೊಸ ಆದೇಶ ಸೀಮಾ ಹೈದರ್​ಗೆ ಅನ್ವಿಯಿಸಲ್ಲ.

ಅಂದು ಸೀಮಾ ಹೈದರ್ ಆನ್​ಲೈನ್​​ನಲ್ಲಿ PUBGಗೆ ಅಡಿಕ್ಟ್ ಆಗಿದ್ದಳು. ಈ ವೇಳೆ ಗ್ರೇಟರ್ ನೋಯ್ಡಾದ ರಬುಪುರ ನಿವಾಸಿ ಸಚಿನ್ ಮೀನಾ ಎಂಬಾತನ ಪರಿಚಯವಾಗಿ, ಪ್ರೀತಿಗೆ ತಿರುಗುತ್ತದೆ. ಮೇ 2023 ರಲ್ಲಿ ನೇಪಾಳ ಮೂಲಕ ಅಕ್ರಮವಾಗಿ ಆಕೆ ಭಾರತಕ್ಕೆ ಬರುತ್ತಾಳೆ. ಇಲ್ಲಿಗೆ ಬಂದ ಆಕೆ, ಆತನನ್ನು ಮದುವೆ ಕೂಡ ಆಗುತ್ತಾಳೆ. ಭಾರತಕ್ಕೆ ಬಂದು 2 ತಿಂಗಳ ಬಳಿಕ ಆಕೆ ದಾಖಲೆಗಳನ್ನು ಸಿದ್ಧಪಡಿಸಲು ವಕೀಲರ ಬಳಿಗೆ ಹೋಗುತ್ತಾಳೆ. ಆಗ ಪೊಲೀಸರಿಗೆ ಗೊತ್ತಾಗುತ್ತದೆ. ನಂತರ ಪೊಲೀಸರು ಸೀಮಾ ಹೈದರ್ ಹಾಗೂ ಸಚಿನ್ ಮೀನಾನನ್ನು ಬಂಧಿಸಿದ್ದರು.

ಸದ್ಯ ಸೀಮಾ ಹೈದರ್ ಜೋಡಿಗೆ ಜಾಮೀನು ಸಿಕ್ಕಿದೆ. ಜಾಮೀನು ನೀಡಿರುವ ಕೋರ್ಟ್​ ಷರತ್ತುಗಳನ್ನು ವಿಧಿಸಿದೆ. ವೀಸಾ ಇಲ್ಲದೇ ಭಾರತ ಪ್ರವೇಶಿಸಿದ ತಪ್ಪಿನ ಲಾಭವನ್ನು ಸೀಮಾ ಅನುಭವಿಸುತ್ತಿದ್ದಾಳೆ. ಭಾರತಕ್ಕೆ ಅಕ್ರಮ ಪ್ರವೇಶ ಮಾಡಿ ಅರೆಸ್ಟ್ ಆಗಿದ್ದ ಆಕೆಯ ಪ್ರಕರಣ ವಿಚಾರಣಾ ಹಂತದಲ್ಲಿದೆ. ಹೀಗಾಗಿ ಆಕೆಯನ್ನು ಪಾಕಿಸ್ತಾನಕ್ಕೆ ಕಳುಹಿಸಲು ಅವಕಾಶ ಸದ್ಯಕ್ಕೆ ಇಲ್ಲ. ಕೋರ್ಟ್​ನ ಅಂತಿಮ ತೀರ್ಪು ಬರೋವರೆಗೂ ಆಕೆ ಭಾರತದಲ್ಲೇ ಇರಲಿದ್ದಾಳೆ.

ಕೆಲವು ದಿನಗಳ ಹಿಂದೆ ಸೀಮಾ ಹೈದರ್ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಆಕೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಮನವಿ ಮಾಡಿದ್ದಳು. ನಾನು ಪಾಕಿಸ್ತಾನದ ಮಗಳಾಗಿದ್ದೆ, ಈಗ ಭಾರತದ ಸೊಸೆ. ನನಗೆ ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಳು.

No Ads
No Reviews
No Ads

Popular News

No Post Categories
Sidebar Banner
Sidebar Banner