ಧಾರವಾಡ: ವಚನಭ್ರಷ್ಟ ಬಿಜೆಪಿ ಬೆಂಬಲಿಸದೆ ದಮನಿತರ ಹಾಗೂ ರೈತರ ಪರವಾಗಿರುವ ಕಾಂಗ್ರೆಸ್ ಗೆ ಮತ ನೀಡಿ. ಅಭ್ಯರ್ಥಿ ವಿನೋದ ಅಸೂಟಿಯವರ ಕ್ರಮಸಂಖ್ಯೆ 2 ಕ್ಕೆ ಮತದಾನ ಮಾಡಿ ಗೆಲ್ಲಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮನವಿ ಮಾಡಿದರು. ಚುನಾವಣಾ ಪ್ರಚಾರಾರ್ಥವಾಗಿ ಧಾರವಾಡ ಲೋಕಸಭಾ ವ್ಯಾಪ್ತಿಯ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರೋಡ್ ಶೋನಲ್ಲಿ ಅವರು ಮಾತನಾಡಿದರು. ರೈತರಿಗೆ ನ್ಯಾಯ ನೀಡಲು ಬಿಜೆಪಿ ವಿಫಲವಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ಹತ್ತು ವರ್ಷಗಳ ಅವಧಿಯಲ್ಲಿ ಬೆಲೆ ಏರಿಕೆ ಮಾಡಿದ್ದೆ ಹೆಚ್ಚು ಮತ್ತು ರೈತರ ಆದಾಯ ದ್ವಿಗುಣವಾಗಲೇ ಇಲ್ಲ ಎಂದು ಅವರು ಆರೋಪಿಸಿದರು. ಅಣ್ಣಿಗೇರಿ ನಗರದ ಶ್ರೀ ಕರಿಸಿದ್ದಪ್ಪ ದೇವಸ್ಥಾನದಿಂದ ಪ್ರಾರಂಭವಾಗಿ-ಚೆನ್ನಮ್ಮ ವೃತ್ತ-ಗಾಂಧಿ ನಗರ-ಹೊರಕೇರಿ ಓಣಿ ಮುಖಾಂತರ ಬಸ್ ಸ್ಟ್ಯಾಂಡನಲ್ಲಿ ರೋಡ್ ಶೋ ಮುಕ್ತಾಯವಾಯಿತು. ಶೋ ಉದ್ದಕ್ಕೂ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಪರ ಜೈಕಾರ ಹಾಕುತ್ತಾ ಸಾಗಿದರು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಎನ್.ಎಚ್ ಕೋನರಡ್ಡಿ, ಶಂಕರ ಗಾಣಿಗೇರ, ಬಾಪುಗೌಡ ಪಾಟೀಲ, ನಾಗಪ್ಪ ಗಾಣಿಗೇರ, ಚಂಬಣ್ಣ ಹಾಳದೋಟರ, ಡಿ ಜಿ ಜಂತ್ಲಿ, ವಿಜ್ಜಪ್ಪಗೌಡ ಪಾಟೀಲ, ಛಾಕಲಬ್ಬಿ ಮೇಡಮ್, ಶಾಂತಮ್ಮ ಗುಜ್ಜಳ, ನವಲಗುಂದ & ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವರ್ಧಮಾನಗೌಡ್ರ ಹಿರೇಗೌಡ್ರ ಮತ್ತು ಮಂಜುನಾಥ ಮಾಯಣ್ಣನವರ ಮತ್ತು ಪುರಸಭೆಯ ನಿಕಟಪೂರ್ವ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಸದಸ್ಯರು, ಪಕ್ಷದ ಮುಖಂಡರು ಅಭಿಮಾನಿಗಳು, ಹಿರಿಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವಿನೋದ್ ಅಸೂಟಿ ಪರ ಪ್ರಚಾರಕ್ಕೆ ಕೈ ಜೋಡಿಸಿದ ಲಕ್ಷ್ಮಣ ಸವದಿ; ಅಣ್ಣಿಗೇರಿ ನಗರದಲ್ಲಿ ಬೃಹತ್ ರೋಡ್ ಶೋ
No Ads
Log in to write reviews