No Ads

ದಿಲ್ಲಿಯಲ್ಲಿ ವಕೀಲರ ಧ್ವನಿಯಾಗಿ ಕೆಲಸ ಮಾಡುವೆ; ಸಂಯುಕ್ತ ಪಾಟೀಲ್ ಭರವಸೆ

ಜಿಲ್ಲೆ 2024-04-16 19:35:52 113
post

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮತಿ ಸಂಯುಕ್ತ ಪಾಟೀಲ್ ಅವರು ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಂಯುಕ್ತ ಅವರು, ನಾನೂ ನ್ಯಾಯವಾದಿ. ವಕೀಲರ ಕಷ್ಟಸುಖಗಳು ನನಗೆ ತಿಳಿದಿವೆ. ನಿಮ್ಮ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಜಿಲ್ಲೆಯ ಧ್ವನಿಯಾಗಿ ದಿಲ್ಲಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.  "ರಾಜಕಾರಣಕ್ಕೆ ಒಳ್ಳೆಯ ರಾಜಕಾರಣಿ ಬಂದರೆ ಅಭಿವೃದ್ಧಿ ಖಂಡಿತ. ನಮ್ಮಲ್ಲಿನ ಮೂಲ ಸೌಕರ್ಯಗಳಾದ ಶಿಕ್ಷಣ, ನೀರು, ವಸತಿ ಸಮಸ್ಯೆಗಳನ್ನು  ಪ್ರಾಮಾಣಿಕವಾಗಿ ಪರಿಹರಿಸಲು ಪ್ರಯತ್ನಿಸುತ್ತೇನೆ." ಎಂದರು. ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಡಿ ಬಿ ಪೂಜಾರ್, ಕಾರ್ಯದರ್ಶಿ ಎಸ್ ಎಚ್ ಹಾವರಗಿ, ಹಿರಿಯ ವಕೀಲರಾದ ಸಿ ಎಲ್ ದಾಸಣ್ಣವರ್ ಹಾಗೂ‌ ಇತರೆ ವಕೀಲ ಸಂಘದ ಸದಸ್ಯರು ಉಪಸ್ಥಿತರಿದ್ದರು.

No Ads
No Reviews
No Ads

Popular News

No Post Categories
Sidebar Banner
Sidebar Banner