No Ads

ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪ್ರಚಾರ; ಎಲ್ಲಡೆ ಭರ್ಜರಿ ಪ್ರತಿಕ್ರಿಯೆ

ಜಿಲ್ಲೆ 2024-04-21 16:40:14 148
post

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಅವರು ಬಿಡುವಿಲ್ಲದೆ ಪ್ರಚಾರದಲ್ಲಿ ತೊಡಗಿದ್ದಾರೆ. ಕ್ಷೇತ್ರದಲ್ಲಿ ಚುನಾವಣಾ ಕಾವು ದಿನೇ ದಿನೇ ಜೋರಾಗುತ್ತಿದೆ. ಬಾಗಲಕೋಟೆ ಮತ್ತು ಬೀಳಗಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಬೆಳಗ್ಗೆ ಬಾಗಲಕೋಟೆ ನವನಗರದ ಸೇಂಟ್ ಮೇರಿಸ್ ಚರ್ಚ್ ಗೆ ಭೇಟಿ‌ ನೀಡಿ, ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ ಮತಯಾಚಿಸಿದರು. ಬೀಳಗಿ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಿದರು. ಪಕೀರಬುದ್ಯಾಳ್, ಹೊಸಕೋಟಿ, ಕೈನಕಟ್ಟಿ ಗ್ರಾಮಗಳಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್‌ ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಮಯದಲ್ಲಿ ಶಾಸಕರಾದ ಶ್ರೀ ಜೆ ಟಿ ಪಾಟೀಲ್,  ಪಕ್ಷದ ಮುಖಂಡರಾದ ಬಸವಪ್ರಭು ನಾಡಗೌಡ, ಎಂ ಬಿ ಸೌದಾಗರ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ಶ್ರೀ ಬಸವರಾಜ್ ಸಂಶಿ, ಮತ್ತು ಕಸ್ತೂರಿಬಾಯಿ ನಾಡಗೌಡ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಎಲ್ಲೆಡೆ ಸಂಯುಕ್ತ ಅವರಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಗೆಲುವಿನ ಭರವಸೆಯನ್ನು ಇಮ್ಮಡಿಗೊಳಸಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner