ಜಮಖಂಡಿ: ಬಾಗಲಕೋಟೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತ ಪಾಟೀಲ್ ಅವರ ಚುನಾವಣ ಪ್ರಚಾರ ಕಾರ್ಯ ದಿನದಿಂದ ದಿನಕ್ಕೆ ವೇಗವನ್ನು ಪಡೆಯುತ್ತಾ ಇದೆ. ಭಾರಿ ಜನಸ್ತೋಮ ಪ್ರಚಾರ ಕಾರ್ಯಕ್ಕೆ ಸಾಥ್ ನೀಡಿದರು. ಇಂದು ಜಮಖಂಡಿ ಪಟ್ಟಣ ಹಾಗೂ ಬಂಡಿಗಣಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ, ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದರು. ಬಾಗಲಕೋಟೆ ಅಭಿವೃದ್ಧಿಗೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮೆಲ್ಲರ ಮತ ನೀಡಿ, ಕಳೆದ 20 ವರ್ಷಗಳಿಂದ ಬಾಗಲಕೋಟೆ ಅಭಿವೃದ್ಧಿಯಿಂದ ವಂಚಿತವಾಗಿದೆ. ನಿಮ್ಮೆಲ್ಲರ ಕೈ ಅಲ್ಲಿ ಈ ಬಾರಿ ಬದಲಾವಣೆ ಮಾಡುವ ಅವಕಾಶವಿದೆ ಎಂದು ಹೇಳಿದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಜಮಖಂಡಿ ಪಟ್ಟಣದಲ್ಲಿ ಮನೆ ಮನೆ ಮತ್ತು ಅಂಗಡಿಗಳಿಗೆ ತೆರಳಿ ಮತಯಾಚನೆ ಮಾಡಲಾಯಿತು. ಈ ಬಾರಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ದಳವಾಯಿ, ಫಾರೂಕ್, ಮುತ್ತಣ್ಣ ಹಿಪ್ಪರಗಿ, ಬ್ಲಾಕ್ ಅಧ್ಯಕ್ಷರಾದ ವರ್ಧಮಾನ ನ್ಯಾಮಗೌಡ, ಕಲ್ಲಣ್ಣ ಗಿರಡ್ಡಿ, ಪಕ್ಷದ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಅಭಿವೃದ್ಧಿ ವಂಚಿತ ಕ್ಷೇತ್ರದ ಬದಲಾವಣೆಗೆ ಮತ ನೀಡಿ; ಸಂಯುಕ್ತ ಪಾಟೀಲ್ ಬಿರುಸಿನ ಪ್ರಚಾರ
No Ads
Log in to write reviews