ಬಾಗಲಕೋಟೆ, ಏಪ್ರಿಲ್ 5: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಬಿರುಬಿಸಿಲ ನಡುವೆ ಅವರ ಪ್ರಚಾರ ಭರದಿಂದ ಸಾಗಿದೆ. ಅವರೊಂದಿಗೆ ಮುಖಂಡರು, ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಬಾಗಲಕೋಟೆಯ ಮನೆ ಮಗಳಾಗಿ ಅವರು ಮತ ಕೇಳುತ್ತಿದ್ದಾರೆ. ಬಾಗಲಕೋಟೆಯ ಮುಂದಿನ ಸಂಸದೆಯಾಗಿ ಜನರ ಕಷ್ಟಕ್ಕೆ ಮಿಡಿಯುವ ಮಾನವೀಯ ಹೃದಯ ಅವರಲ್ಲಿದೆ. ಅಂತಹ ಘಟನೆಯೊಂದು ಇಂದು ಪ್ರಚಾರದ ನಡುವೆ ನಡೆಯಿತು. ಭರ್ಜರಿ ಪ್ರಚಾರದ ನಡುವೆ ಊಟದ ಮನೆ ಮಾಲಕಿಯ ಕಷ್ಟಕ್ಕೆ ಮಿಡಿದಿದ್ದಾರೆ. ನಾಯಕಿಯಾಗುವ ಹಂಬಲದ ನಡುವೆ ಅವರು ಜನರ ಕಷ್ಟವನ್ನು ಆಲಿಸುವ ಗುಣವನ್ನೂ ತೋರಿದ್ದಾರೆ. ಸಂಯುಕ್ತ ಅವರ ಈ ನಡೆ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಬೀಳಗಿ, ಬಾಗಲಕೋಟೆಯಲ್ಲಿ ಪ್ರಚಾರ ನಡೆಸಿದ ಸಂಯುಕ್ತ ಅವರು ರೊಟ್ಟಿ ಮುಟಗಿ ಊಟ ಸವಿಯಲು ಶ್ರೀ ಅನ್ನಪೂರ್ಣೇಶ್ವರಿ ಊಟದ ಮನೆಗೆ ಭೇಟಿ ನೀಡಿದ್ದರು. ಬಾಗಲಕೋಟೆಯ ವಿದ್ಯಾಗಿರಿಯ ಅನ್ನಪೂರ್ಣೇಶ್ವರ ಊಟದ ಮನೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ರೊಟ್ಟಿ ಮುಟಗಿ ಊಟಕ್ಕೆ ಇಲ್ಲಿಗೆ ಸಾಕಷ್ಟು ಮಂದಿ ಭೇಟಿ ನೀಡುತ್ತಾರೆ. ಶುಚಿ ಮತ್ತು ರುಚಿಗೆ ಇದು ಖ್ಯಾತಿ ಪಡೆದಿದೆ. ಊಟ ಮಾಡುತ್ತಲೇ ಖಾನಾವಳಿಯ ಮಾಲಕಿಗೆ ಊಟದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. "ತುಂಬಾ ಚೆನ್ನಾಗಿದೆ. ಈ ಊಟಕ್ಕಾಗಿ ನಾನು ಇಲ್ಲಿಗೆ ಬಂದೆ" ಎಂದು ಹೇಳಿದರು. ಈ ವೇಳೆ ಖಾನಾವಳಿ ಮಾಲಕಿ ತಮ್ಮ ಮಗನ ಅಕಾಲಿಕ ಮರಣವನ್ನು ನೆನೆದು ಭಾವುಕರಾದರು. ಆಗ ಅವರನ್ನು ಸಂಯುಕ್ತ ಪಾಟೀಲ್ ಅವರು ಸಮಾಧಾನ ಪಡಿಸಿದರು. ಸಂಯುಕ್ತ ಅವರ ಮಾತೃ ಹೃದಯ, ಇತರರ ಕಾಳಜಿ ಕಂಡ ನೆರೆದವರು ಮೆಚ್ಚುಗೆ ವ್ಯಕ್ತಪಡಿಸಿದರು.
ರೊಟ್ಟಿ ಊಟ ಮಾಡಿ ಊಟದ ಮನೆ ಮಾಲಕಿ ಕಷ್ಟಕ್ಕೆ ಮರುಗಿದ ಸಂಯುಕ್ತ ಪಾಟೀಲ್
No Ads
Log in to write reviews