ಬಾಗಲಕೋಟೆ: ಸತತ ಎರಡು ವರ್ಷಗಳಿಂದ ಬರಗಾಲ ಎದುರಿಸಿದ ಕರ್ನಾಟಕ ಸಂಕಷ್ಟದಲ್ಲಿದೆ. ಪರಿಹಾರ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯ ಸರ್ಕಾರ ಮನವಿ ಮಾಡಿತು. ಆದರೆ ಬಿಡಿಗಾಸು ಬರಪರಿಹಾರ ನೀಡಲಿಲ್ಲ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥೀ ಸಂಯುಕ್ತ ಪಾಟೀಲ್ ಅವರು ಹೇಳಿದರು. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದಿಂದ ನಡೆದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಬರ ಪರಿಹಾರ ನೀಡದೆ ದ್ರೋಹ ಮಾಡಿದೆ. ನಮ್ಮ ಹಕ್ಕನ್ನು ಕೇಳಿದರೆ ಸ್ಪಂದಿಸಲೇ ಇಲ್ಲ. ಇದು ಸ್ವಾಭಿಮಾನ ಚುನಾವಣೆ ಎಂದು ಅವರು ಹೇಳಿದರು ಕರ್ನಾಟಕ ಸರ್ಕಾರ ಗ್ಯಾರಂಟಿ ನೀಡಿ ದಿವಾಳಿ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ಹೇಳುತ್ತಾರೆ. ಆದರೆ ಕರ್ನಾಟಕ ಸರ್ಕಾರ ರೈತರಿಗೆ ಹಣ ನೀಡಿ ಅವರ ಕಷ್ಟಕ್ಕೆ ನೆರವಾಗುತ್ತಿದೆ ಎಂದರು. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಬೆಲೆ ಇಳಿಕೆ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಪರಿಹಾರ ನೀಡಲು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಯಾವ ಭರವಸೆಯನ್ನು ಈಡೇರಿಸಲಿಲ್ಲ. ಉದ್ಯೋಗ ಸೃಷ್ಟಿ ಮಾಡಲಿಲ್ಲ. ಸ್ವಿಸ್ ಬ್ಯಾಂಕ್ ನಿಂದ ಹಣ ತರಲಿಲ್ಲ. ಅಧಿಕಾರ ಅನುಭವಿಸಿದ್ದು ಬಿಟ್ಟರೆ ದೇಶದ ಜನತೆಗೆ ಏನೂ ಮಾಡಲಿಲ್ಲ ಎಂದು ಆರೋಪಿಸಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಆಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ. ಬಾಗಲಕೋಟೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಜಯಭೇರಿ ಸಾಧಿಸಲು ನಾವೆಲ್ಲ ಒಂದಾಗಿ ಕೆಲಸ ಮಾಡೋಣ ಎಂದರು. ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಸ್ ಜಿ ನಂಜಯ್ಯನಮಠ, ಶಾಸಕರಾದ ಶ್ರೀ ಎಚ್ ವೈ ಮೇಟಿ, ಶ್ರೀ ಜಿ ಟಿ ಪಾಟೀಲ್, ಮಾಜಿ ಸಂಸದರಾದ ಅಜಯಕುಮಾರ್ ಸರನಾಯಕ್, ಮುಖಂಡರಾದ ರಕ್ಷಿತಾ ಈಟಿ, ಎಂ ಎಸ್ ಸೌದಾಗರ್ ಇತರರು ಉಪಸ್ಥಿತರಿದ್ದರು
ಇದು ಸ್ವಾಭಿಮಾನದ ಚುನಾವಣೆ; ಕಾರ್ಯಕರ್ತರ ಸಮಾವೇಶದಲ್ಲಿ ಸಂಯುಕ್ತ ಪಾಟೀಲ್

No Ads
Log in to write reviews